ಸುದ್ದಿ

ಲದ್ದಿ ವಿಚಾರಕ್ಕೂ ಕಿತ್ತಾಡಿದ ಬಿಗ್ ಬಾಸ್ ಸ್ಪರ್ಧಿಗಳು;ಶೈನ್ ಅವಾಜ್ ಹಾಕಿದ್ದಕ್ಕೆ ಚಂದನಾ ಕಣ್ಣೀರು..!

43

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನಾ ಮತ್ತು ಶೈನ್ ಶೆಟ್ಟಿ, ವಾಸುಕಿ ವೈಭವ್ ಮೂವರು ಗೆಳೆಯರು. ಚಂದನಾ ವಿರುದ್ಧವಾಗಿ ಶೈನ್ ಶೆಟ್ಟಿ ಮತ್ತು ವಾಸುಕಿ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಈಗ ಶೈನ್ ಶೆಟ್ಟಿ ಮಾತನಾಡಿದ ಬಗೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. 

ಚಂದನಾ ಅವರು ಟಾಸ್ಕ್ ಮಾಡಿ ಮೈ ಹಾಗೂ ತಲೆಯಲ್ಲೆಲ್ಲ ಮರಳು ಆಗಿದ್ದ ಕಾರಣ ಸ್ನಾನ ಮಾಡಿದ್ದರು. ಆದರೆ ಇದು ಶೈನ್ ಹಾಗೂ ಕಿಶನ್ ಅವರಿಗೆ ಇಷ್ಟವಾಗಲಿಲ್ಲ. ಬಿಗ್ ಬಾಸ್ ಹೇಳುವ ಮೊದಲೇ ನೀವು ಏಕೆ ಸ್ನಾನ ಮಾಡಿದ್ದೀರಿ ಎಂದು ಚಂದನಾರನ್ನು ಪ್ರಶ್ನಿಸಿದ್ದರು. ಆಗ ಚಂದನಾ ಬಿಗ್ ಬಾಸ್ ಆದೇಶ ನೀಡಿದ್ದರು. ಹಾಗಾಗಿ ನಾನು ಸ್ನಾನ ಮಾಡಿಕೊಂಡು ಬಂದೆ ಎಂದು ಹೇಳಿದ್ದಾರೆ. ಈ ವೇಳೆ ಶೈನ್ ಹಾಗೂ ಕಿಶನ್ ಬಿಗ್ ಬಾಸ್ ಬೇರೆ ಆದೇಶ ನೀಡಿದ್ದರು ಎಂದು ಹೇಳಿದ್ದಾರೆ.

ಶೈನ್ ತಲೆಯಿರಬೇಕು ಎಂದಿದ್ದಾರೆ. ಆಗ ಚಂದನಾ ನಮಗೆ ತಲೆಯಿಲ್ಲ, ಬ್ರೇನ್ ಇಲ್ಲ, ಲದ್ದಿಯಿದೆ ಎಂದಿದ್ದಾರೆ. ಲದ್ದಿಯನ್ನು ಆನೆಗೆ, ಎಮ್ಮೆ ವಿಚಾರಕ್ಕೆ ಬಳಕೆ ಮಾಡುತ್ತಾರೆ ಎಂಬ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಯಿತು. “ಗಾರ್ಡನ್ ಪ್ರದೇಶಕ್ಕೆ ಬರುವಂತೆ ಬಿಗ್ ಬಾಸ್ ಆದೇಶ ನೀಡಿದ್ದರು. ಅವರು ಬೇರೆ ಆದೇಶ ನೀಡಿರಲಿಲ್ಲ. ಹಾಗಿದ್ದರೆ ನಾವು ಬ್ಯಾಗ್ ಎತ್ತಿಕೊಂಡು ಬಂದು ಗಾರ್ಡನ್‌ಗೆ ಬಂದು ಕೂರುತ್ತಿದ್ದೆವು ಎಂದರು ಶೈನ್. ಆಗ ನೀವು ಮಾಡಬೇಕಿತ್ತು ಎಂದಿದ್ದಾರೆ ಚಂದನಾ.”

ವಾದ-ವಿವಾದ ಹೆಚ್ಚಾಗುತ್ತಿದ್ದಂತೆ ಶೈನ್ ಹೋಗಮ್ಮ ಕಂಡಿದ್ದೀನಿ ಎಂದು ಹೇಳಿದ್ದಾರೆ. ಆಗ ಚಂದನಾ ಕಂಡಿದ್ದೀರಾ? ಹೌದು. ಮತ್ತೆ ಬಂದು ಅದು ಮಾಡು ಇದು ಮಾಡು ಎಂದು ಹೇಳಿ ಆಗ ನೋಡಿಕೊಳ್ಳುತ್ತೀನಿ ಎಂದು ಹೇಳಿದ್ದಾರೆ. ಇದರಿಂದ ಮತ್ತೆ ಕೋಪಗೊಂಡ ಶೈನ್ ನಾನು ಯಾವಾಗ ಅದು ಮಾಡು ಇದು ಮಾಡು ಎಂದು ಹೇಳಿದ್ದೇನೆ. ನಿನ್ನ ವಯಸ್ಸಿಗೆ ತಕ್ಕಂತೆ ಮಾತಾಡು, ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಚಂದನಾಗೆ ಹೇಳಿದ್ದಾರೆ. ಆಗ ಚಂದನಾ ನಾನು ಮಾತನಾಡಲ್ಲ ಏನಿವಾಗ ಎಂದು ಪತ್ರಿಕ್ರಿಯಿಸಿದ್ದಾರೆ.

ಪ್ರತಿ ಮಾತಿಗೆ ಚಂದನಾ ವಾದ ಮಾಡುತ್ತಿರುವುದನ್ನು ನೋಡಿ ಶೈನ್, ಇದೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳಬೇಡಿ. ಯಾರ ಹತ್ತಿರ ಇಟ್ಟಕೊಳ್ಳಬೇಕೋ ಅವರ ಹತ್ತಿರ ಇಟ್ಟುಕೊಳ್ಳಿ ಎಂದು ಅವಾಜ್ ಹಾಕಿದ್ದಾರೆ. ಶೈನ್ ಈ ರೀತಿ ಹೇಳುತ್ತಿದ್ದಂತೆ ಗಾರ್ಡನ್ ಏರಿಯಾದಲ್ಲಿ ಕುಳಿತ್ತಿದ್ದ ಚಂದನಾ ಅಳುತ್ತಾ ಮನೆಯೊಳಗೆ ಹೋಗಿದ್ದಾರೆ. ಚಂದನಾ ಅಳುತ್ತಿರುವುದನ್ನು ನೋಡಿ ಶೈನ್ ನಾನು ತಮಾಷೆ ಮಾಡಿದ್ದು, ಸಿರಿಯಸ್ ಆಗಿ ತಗೋಬೇಡ ಎಂದು ಚಂದನಾರನ್ನು ಸಮಾಧಾನ ಮಾಡಲು ಮುಂದಾದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ