ಮನರಂಜನೆ

BB ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ!’ನನ್ನ ಕಂಡರೆ ನಿಮಗೆ ಏನನಿಸುತ್ತೆ?

38

ಬಿಗ್‌ ಬಾಸ್‌ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್‌ ಇವೆಲ್ಲಾ ಮಾಮೂಲಿ.ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್‌ ಪಡೆದು ನಾಮಿನೇಶನ್‌ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್‌ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಶೈನ್‌ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್‌ ವಿಚಾರವನ್ನು ತೆರೆದಿಟ್ಟಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ ಬಳಿಕ ಶೈನ್‌ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ ಕುಟ್ಟೂರ್ 3 ನೇ ಎಪಿಸೋಡ್‌ನಲ್ಲಿ ಸ್ಮಿಮ್ಮಿಂಗ್‌ ಪೂಲ್‌ ಹತ್ತಿರ ಶೈನ್‌ ಜೊತೆ ತಡರಾತ್ರಿಯಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಈ ವೇಳೆ ‘ ನಿಮಗೆ ಲವ್‌ ಅಥವಾ ಕ್ರಶ್‌ ಆಗಿಲ್ವಾ? ಯಾರನ್ನಾದ್ರೂ ಪ್ರೀತಿಸಿದ್ದೀರಾ?’ ಎಂದು ಪ್ರಶ್ನಿಸುತ್ತಾರೆ. ಸಿಕ್ಕಾಪಟ್ಟೆ ಕಾಮ್‌ ಆ್ಯಂಡ್ ಕಂಪೋಸ್ ವ್ಯಕ್ತಿತ್ವ ಉಳ್ಳ ಶೈನ್ ಎಕ್ಸ್ಟೆಟ್ ಆಗದೇ ಸಮಾಧಾನವಾಗಿ ಉತ್ತರಿಸಿದ್ದಾರೆ.

ಇಷ್ಟೆಲ್ಲ ಮಾತುಕತೆ ಆದ್ಮೇಲೆ, ”ನನ್ನ ಬಗ್ಗೆ ಏನು ಅನಿಸುತ್ತೆ.?” ಅಂತ ಚೈತ್ರ ನಗುನಗುತ್ತಾ ಕೇಳಿದಾಗ ”ಮದುವೆ ಆಗುವ ಬಗ್ಗೆ ಯೋಚನೆ ಮಾಡುತ್ತಿದ್ದೀರಾ ಅನ್ಸುತ್ತೆ. ‘ಬಿಗ್ ಬಾಸ್’ ನಿಂದ ಹೊರಗೆ ಹೋದ ಮೇಲೆ ನಿಮಗೆ ಖಂಡಿತ ಮದುವೆ ಆಗುತ್ತೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಇರುವ ಹುಡುಗ ಸಿಕ್ಕೇ ಸಿಗುತ್ತಾನೆ” ಎಂದುಬಿಟ್ಟರು ಶೈನ್ ಶೆಟ್ಟಿ. ”ನಿಮಗೆ ನನ್ನ ಅಭಿರುಚಿ ಇಲ್ವಾ.?” ಅಂತ ಚೈತ್ರ ಕೋಟೂರ್ ಕೇಳಿಯೇಬಿಟ್ಟರು. ಚೈತ್ರ ಮಾತುಗಳನ್ನು ಕೇಳಿ ತಲೆ ಕೆರ್ಕೊಂಡು, ಕನ್ ಫ್ಯೂಸ್ ಆಗಿ ”ನನಗೆ ಅರ್ಥ ಆಗುತ್ತಿಲ್ಲ” ನಕ್ಕರು.

”ಸೀರಿಯಸ್ ಆಗಬೇಡಿ, ಸುಮ್ಮನೆ ಕೇಳ್ದೆ” ಅಂತ ಮಾತುಕತೆಯ ಅಂತ್ಯದಲ್ಲಿ ಚೈತ್ರ ಕೋಟೂರ್ ಹೇಳಿದರೂ ಮೇಲ್ನೋಟಕ್ಕೆ ಇದು ಸ್ಟ್ರಾಟೆಜಿ ಅಂತ ವೀಕ್ಷಕರಿಗೆ ಅರ್ಥ ಆಗುತ್ತೆ. ಹೇಳಿ ಕೇಳಿ ಚೈತ್ರ ಕೋಟೂರ್ ಈ ವಾರ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ‘ಬಿಗ್ ಬಾಸ್’ ಮನೆಯಲ್ಲಿ ಉಳಿದುಕೊಳ್ಳಲು ಚೈತ್ರ ಹೀಗೆ ಮಾಡ್ತಿದ್ದಾರಾ.? ಉತ್ತರ ಮುಂದಿನ ದಿನಗಳಲ್ಲಿ ಸಿಗಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ