ಮನರಂಜನೆ

ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ವಾಸುಕಿ, ಶೈನ್

61

ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.

ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.

ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.

ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.

ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದ ಬಂಟ್ವಾಳ ರೈತ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರ ಪ್ರಶಂಸೆ…!

    ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…

  • ಸಂಬಂಧ

    ಮದುವೆಯಾಗುವ ಹುಡುಗನಿಗೆ ಅಡುಗೆ ಬರುತ್ತಾ???ಶಾಕ್ ಆಗ್ಬೇಡಿ!ಮುಂದೆ ಓದಿ…..

    ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ

  • ಮನರಂಜನೆ

    ಆಫೀಸ್ ಗೆ ಸ್ಪೈಡರ್ ಮ್ಯಾನ್ ವೇಷದಲ್ಲಿ ಬಂದ ಭೂಪ..!ಆಮೇಲೆ ಏನಾಯ್ತು ಗೊತ್ತಾ?ಈ ವಿಡಿಯೋ ನೋಡಿ

    ಯಾವುದೇ ಒಂದು ಕಂಪನಿಯಲ್ಲಿ ನೌಕರಿ ಮಾಡುತ್ತಿರುವವರು ನಿವೃತ್ತಿ ಹೊಂದುವ ವೇಳೆ ಅಥವಾ ಮತ್ತೊಂದು ಕಂಪನಿಗೆ ಸೇರ್ಪಡೆಗೊಳ್ಳಲು ರಾಜೀನಾಮೆ ನೀಡುವ ಸಂದರ್ಭ ಎದುರಾದಾಗ ತಮ್ಮ ಸಹೋದ್ಯೋಗಿಗಳನ್ನು ನೆನಪಿಸಿಕೊಂಡು ಭಾವುಕರಾಗುವುದು ಸಹಜ.ಆದರೆ ಇಲ್ಲೊಬ್ಬ ಬ್ಯಾಂಕ್ ಉದ್ಯೋಗಿ ತನ್ನ ಕೆಲಸದ ಕಡೆ ದಿನ ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ಗೆ ಹೋಗಿದ್ದಾರೆ. ಈ ಘಟನೆ ಬ್ರೆಜಿಲ್ ನ ಸಾವೋ ಪಾಲೊದಲ್ಲಿ ನಡೆದಿದ್ದು,ಇಡೀ ದಿನ ಸ್ಪೈಡರ್ ಮ್ಯಾನ್ ವೇಷದಲ್ಲಿ ತನ್ನ ಕೆಲಸ ಮಾಡಿದ್ದಾನೆ. ಈ ದೃಶ್ಯಗಳನ್ನು ಸೆರೆ ಹಿಡಿದ ಸಹೋದ್ಯೋಗಿಯೊಬ್ಬರು ಸಾಮಾಜಿಕ…

  • ಆರೋಗ್ಯ

    ಕುಡಿತವನ್ನು ಬಿಡಿಸೋಕೆ ಈ ಮನೆ ಮದ್ದುಗಳು. ತಪ್ಪದೆ ನೋಡಿ ಚಮತ್ಕಾರಿ ಮನೆಮದ್ದುಗಳು ಇದು.

    ಈಗ 100ರಲ್ಲಿ 90 ಜನರು ಮದ್ಯಪಾನ ಮಾಡುತ್ತಾರೆ. ಒಂದು ಸಲ ಒಬ್ಬ ವ್ಯಕ್ತಿ ಕುಡಿತಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಲು ತುಂಬಾ ಕಷ್ಟಪಡುತ್ತಾರೆ. ಕುಡಿಯುವವರೆಲ್ಲಾ ಕೆಟ್ಟವರಲ್ಲ. ಆದರೆ ಕುಡಿತ ಮಾತ್ರ ತುಂಬಾ ಕೆಟ್ಟದು. ಅದು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ. ಕುಡಿತದಿಂದ ಲಿವರ್ ಹಾಳಾಗುತ್ತೆ, ಉಸಿರಾಟದ ತೊಂದರೆ ಉಂಟಾಗುತ್ತೆ, ಹೊಟ್ಟೆಯಲ್ಲಿ ಹುಣ್ಣಾಗುತ್ತೆ, ಕಿಡ್ನಿ ಹಾಳಾಗುತ್ತೆ ಹೀಗೆ ಹಲವು ಸಮಸ್ಯೆಗಳು ಕುಡಿತದಿಂದ ಬರುತ್ತದೆ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕುಡಿತವನ್ನು ಬಿಡಲು ಆಗದಿದ್ದಾಗ ಈ ಮನೆಮದ್ದಗಳನ್ನು ಬಳಸಿ….

  • ಆರೋಗ್ಯ

    ಹಣೆಗೆ ತಿಲಕವಿಡುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ.

  • ಸುದ್ದಿ

    ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

    ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….