ಆರೋಗ್ಯ

ಪ್ರತಿದಿನ ರಾತ್ರಿ ಮಲಗುವ ಮೊದಲು ಬೆಲ್ಲ ಸೇವಿಸಿದರೆ ಏನಾಗುತ್ತದೆ ಗೊತ್ತಾ, ಬಹಳಷ್ಟು ಜನರಿಗೆ ಗೊತ್ತಿಲ್ಲ ಬೆಲ್ಲದ ಮಹತ್ವ.

220

ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ತಿಂಡಿಯಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಆಯುರ್ವೇದದ ಪ್ರಕಾರ ಉತ್ತಮ ಆಹಾರವು ದೇಹಕ್ಕೆ ಅತ್ಯುತ್ತಮ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ ಔಷದಿ. ಕಣ್ಣುಗಳಲ್ಲದೆ ಕೂದಲು, ಹೊಟ್ಟೆ ಮತ್ತು ಮೂಳೆಗಳಿಗೆ ಬಹಳಷ್ಟು ಪ್ರಯೋಜನಕಾರಿ.

ಇನ್ನು ಈಗ ಎಲ್ಲಿ ನೋಡಿದರು ಮಾಲಿನ್ಯ ಭರಿತ  ವಾತಾವರಣ, ಈ  ವಾಯು ಮಾಲಿನ್ಯದಿಂದಾಗಿ ವ್ಯಕ್ತಿಯು ಆಸ್ತಮಾದಿಂದ ಬಳಲುತ್ತಿದ್ದರೆ, ಮಲಗುವ ವೇಳೆಗೆ ಸ್ವಲ್ಪ ಬೆಲ್ಲವನ್ನು ಸೇವಿಸಿ ಮತ್ತು ರಾತ್ರಿಯಲ್ಲಿ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ಕೆಲವೇ ದಿನಗಳಲ್ಲಿ ಆಸ್ತಮಾದ ಸಮಸ್ಯೆ ಓಡಿ ಹೋಗುತ್ತದೆ. ಇನ್ನು ದೇಹದಲ್ಲಿ ಸುಸ್ತು ಅಥವಾ ಬಾಡಿ ವಿಕ್ನೆಸ್ ಇದ್ದವರು ರಾತ್ರಿಯಲ್ಲಿ ಸ್ವಲ್ಪ ಬೆಲ್ಲ ತಿನ್ನಿರಿ ಮತ್ತು ಒಂದು ಲೋಟ ಬಿಸಿನೀರನ್ನು  ಕುಡಿಯಿರಿ, ಇದು ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇನ್ನು ರಕ್ತ ಹೀನತೆಯಿಂದ ಬಳಲುತ್ತಿರುವವರು ಮಲಗುವ ವೇಳೆ ಬೆಲ್ಲವನ್ನು ಸೇವಿಸಿ ಮತ್ತು ಬೆಚ್ಚಗಿನ ನೀರನ್ನು ಕುಡಿಯುವುದರಿಂದ  ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಹೆಚ್ಚಾಗಿಸಿ  ಕೆಲವೇ ದಿನಗಳಲ್ಲಿ ರಕ್ತಹೀನತೆ ಸಮಸ್ಯೆಯನ್ನು  ನಿವಾರಣೆ ಮಾಡುತ್ತದೆ.

ಮಲಗುವಾಗ ಬೆಲ್ಲ ತಿಂದು ಮಲಗಿದ್ರೆ ನಿದ್ರೆ ಸರಿಯಾಗಿ ಬರುವುದರ ಜತೆಗೆ ಗ್ಯಾಸ್ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಮತ್ತು ಕೀಲು ನೋವು ಸಮಸ್ಯೆ ಇರುವವರು ಪ್ರತಿದಿನ ಶುಂಠಿ ಜತೆ ಬೆಲ್ಲ ಸೇವಿಸಬೇಕು, ಶುಂಠಿಯನ್ನು ಬೆಲ್ಲದ ಜತೆ ಬಿಸಿ ಮಾಡಿ ಸ್ವಲ್ಪ ಬೆಚ್ಚಗಿರುವಾಗಲೇ ತಿಂದರೆ ಗಂಟಲು ನೋವು ಶಮನವಾಗುತ್ತದೆ. ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ, ಶೀತ, ಕಫ ಇದ್ದಾಗ ಬಿಸಿ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಕುಡಿಯಬೇಕು ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯಬಹುದು.

ನಿಮಗೆ ತಿಳಿದಿರಲಿ ಖನಿಜಾಂಶ ಕಬ್ಬಿಣಾಂಶವನ್ನು ಹೊಂದಿರುವ ಬೆಲ್ಲವನ್ನು ಹಿತವಾಗಿ, ಮಿತವಾಗಿ ಪ್ರತಿದಿನ ಬೆಲ್ಲ ತಿನ್ನುವುದು ನಿಜಕ್ಕೂ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರಬಲ್ಲದು, ಈ ಹಿನ್ನೆಲೆಯಲ್ಲಿ ಪೂರ್ವಜರು ಬೆಲ್ಲ ತಿಂದು ನೀರು ಕುಡಿಯುತ್ತಿದ್ದರು. ಇನ್ನು ಹಲವು ರೋಗಗಳನ್ನು ಬೆಲ್ಲ ಹೇಗೆ ನಿವಾರಣೆ ಮಾಡುತ್ತದೆ ಎನ್ನುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ನೋಡಬಹುದು, ಊಟವಾದ ಮೇಲೆ ಸಣ್ಣ ತುಂಡು ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ ಇದು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ, ಹೀಗಾಗಿ ಮಲಬದ್ಧತೆಯನ್ನು ದೂರ ಮಾಡುತ್ತದೆ. ನಿಯಮಿತ ಪ್ರಮಾಣದಲ್ಲಿ ಬೆಲ್ಲ ತಿನ್ನುವ ಅಭ್ಯಾಸ ದೇಹಕ್ಕೆ ಬಹಳ ಒಳ್ಳೆಯದು ಅನುಮಾನ ಇದ್ದರೆ ವೈದ್ಯರ ಬಳಿ ಕೂಡ ಈ ಬಗ್ಗೆ ಸಮಾಲೋಚನೆ ನಡೆಸಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿರುವ – ರಾಧಿಕಾ ಕುಮಾರಸ್ವಾಮಿ,.!

    ತೆಲುಗಿನ ‘ಆರುಂಧತಿ’, ‘ಭಾಗಮತಿ’ ಚಿತ್ರಗಳ ಹಾಗೆಯೇ ಮಹಿಳಾ ಪ್ರಧಾನ ಚಿತ್ರವಾದ ‘ದಮಯಂತಿ’ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಎಂಭತ್ತರ ದಶಕದ ಕಥೆ ಎಂದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ವಿಭಿನ್ನ, ವಿಶೇಷ ವೇಷ ಭೂಷಣದಲ್ಲಿಯೇ ರಾಧಿಕಾ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ದಮಯಂತಿ ಟೀಸರ್ ರಿಲೀಸ್ ಆಗಿದ್ದು YouTubeನಲ್ಲಿ ಟ್ರೆಂಡ್ ಆಗಿತ್ತು. ಅದರಲ್ಲಿರುವ ಪ್ರತಿಯೊಂದೂ ಡೈಲಾಗ್‌ ಈಗಾಗಲೇ ಸಾಕಷ್ಟು ಫೇಮಸ್‌ ಆಗಿದ್ದು, ಟಿಕ್‌ಟಾಕ್‌‌ನಲ್ಲಿ ಬಳಸುವವರಿಗೆ ರಾಧಿಕಾ ಸೂಪರ್ ಅವಕಾಶವೊಂದನ್ನು ಕೊಡುತ್ತಿದ್ದಾರೆ. ರಾಧಿಕಾ…

  • ವಿಚಿತ್ರ ಆದರೂ ಸತ್ಯ

    ಇದು ಸಾಮಾನ್ಯದ ಸಾವಿನ ಕಥೆಯಲ್ಲ!ಗಂಡನಿಗೋಸ್ಕರ ಹೆಂಡತಿ!ಶಾಕ್ ಆಗ್ತೀರಾ…ಈ ಲೇಖನ ಓದಿ…

    ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.

  • ಆರೋಗ್ಯ

    ಈ ಹಣ್ಣಿನಿಂದ ಒಬ್ಬರ ಜೀವ ಉಳಿಸಬಹುದು, ಹಲವರಿಗೆ ಗೊತ್ತಿಲ್ಲ ಈ ಅದ್ಬುತ ಹಣ್ಣಿನ ಬಗ್ಗೆ. ಈ ಅರೋಗ್ಯ ಮಾಹಿತಿ ನೋಡಿ.

    ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಇನ್ನು ಈ ಜ್ವರ ನಮಗೆ ಕಾಣಿಸಿಕೊಂಡ ತಕ್ಷಣ ನಮ್ಮ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ ಮತ್ತು ನಮ್ಮ ಜೀವ ಕುಗ್ಗುತ್ತಾ ಹೋಗುತ್ತದೆ. ಸ್ನೇಹಿತರೆ ನಮಗೆ ಜ್ವರ ಕಾಣಿಸಿಕೊಂಡರೆ ಈ ಒಂದು ಹಣ್ಣನ್ನ ಸೇವನೆ ಮಾಡಿದರೆ ನಿಮ್ಮ ದೇಹವನ್ನ ಜ್ವರದಿಂದ ರಕ್ಷಣೆ ಮಾಡಿಕೊಳ್ಳಬಹುದು, ಹಾಗಾದರೆ ಆ ಹಣ್ಣು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ…

  • ಸುದ್ದಿ

    ಕಸ ತಂದುಕೊಟ್ಟು, ಊಟ ತಿಂಡಿ ಉಚಿತವಾಗಿ ಪಡೆಯಿರಿ:ಇದು ಗಾರ್ಬೇಜ್ ಹೋಟೆಲ್ ನ ವಿಶೇಷತೆ….!

    ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್‌ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ. ಹೌದು ಛತ್ತಿಸ್​ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ನಗರದಲ್ಲಿ…

  • ವಿಚಿತ್ರ ಆದರೂ ಸತ್ಯ

    27 ವರ್ಷದ ಈ ಯುವಕ ಐಶ್ವರ್ಯಾ ರೈ ಮಗನಂತೆ..!ತಿಳಿಯಲು ಇದನ್ನು ಓದಿ..

    ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಸಂಚಲನ ಮೂಡಿಸಿದ್ದಾನೆ .27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.

  • ಸುದ್ದಿ

    ನೀವು ಪ್ಯಾಕೆಟ್ ಹಾಲುಗಳನ್ನ ಬಳಸ್ತಿದೀರಾ! ಎಚ್ಚರಿಕೆ.

    ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…