ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೊಂದು ಬಗೆಯ ಆಹಾರಗಳು ಒಂದೊಂದು ಸೀಸನ್ ಗೆ ಸೀಮಿತವಾಗಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳು ಒಂದು ಕಾಲಮಾನದಲ್ಲಿ ಬೆಳೆಯಲ್ಪಟ್ಟು ಜನರಿಗೆ ಸಹಾಯಕವಾದರೆ, ಕೆಲವೊಂದು ಪದಾರ್ಥಗಳು ನಿರ್ದಿಷ್ಟ ಕಾಲಮಾನದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಮನೆ ಮಾಡಿದೆ. ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು ತಂಪಾಗಿಸುತ್ತದೆ. ಅಂತಹದರಲ್ಲಿ ಚಳಿಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಸಮವೆನಿಸುವ ಬೆಲ್ಲವೂ ಒಂದು.

ಬೆಲ್ಲ ಒಂದು ಉಷ್ಣ ಸಂಬಂಧಿ ಪದಾರ್ಥವಾಗಿದ್ದು, ಮನುಷ್ಯನ ದೇಹದಲ್ಲಿ ಬಿಸಿ ಉತ್ಪತ್ತಿ ಮಾಡುತ್ತದೆ. ಇದರಲ್ಲಿ ಕ್ಯಾಲೊರಿಗಳ ಅಂಶ ಜೋರಾಗಿದ್ದು ನಮ್ಮ ದೇಹವನ್ನು ಬಿಸಿಯಾಗಿಡುವುದರ ಬೆನ್ನಲ್ಲೇ ದೇಹಕ್ಕೆ ಶಕ್ತಿಯನ್ನು ಸಹ ನೀಡುತ್ತದೆ. ಅದಕ್ಕೆ ನೋಡಿ ಯಾವ ಸಮಯದಲ್ಲಿ ಆದರೂ ನಮಗೆ ಶೀತ ಆದಂತಹ ಸಂಧರ್ಭದಲ್ಲಿ ಸ್ವಲ್ಪ ಬೆಲ್ಲ ತಿನ್ನುತ್ತಾ ಬಂದರೆ ಶೀತ, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಬಹಳ ಬೇಗನೆ ಮಾಯವಾಗುತ್ತವೆ.

ಕೆಲವೊಂದು ಉತ್ತಮ ಗುಣಮಟ್ಟ ಹೊಂದಿರುವ ಬೆಲ್ಲ, ದೇಹಕ್ಕೆ ಅಸ್ವಸ್ಥತೆ ಉಂಟು ಮಾಡುವ ಜ್ವರ ಮತ್ತು ಶೀತದಂತಹ ಖಾಯಿಲೆಗಳ ವಿರುದ್ಧ ಹೋರಾಡುತ್ತದೆ. ಏಕೆಂದರೆ ಬೆಲ್ಲದ ಸೇವನೆಯಿಂದ ದೇಹದ ಉಷ್ಣಾಂಶ ಏರಿಕೆಯಾಗಿ ರೋಗಾಣುಗಳ ಬೆಳವಣಿಗೆಯನ್ನು ಆರಂಭದಲ್ಲೇ ತಡೆ ಹಾಕುತ್ತದೆ. ಜೊತೆಗೆ ಬೆಲ್ಲದಲ್ಲಿ ವಿವಿಧ ಬಗೆಯ ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ, ಜಿಂಕ್, ಸೆಲೆನಿಯಮ್ ಮತ್ತು ಪೊಟ್ಯಾಸಿಯಂ ಅಂಶಗಳು ಅಡಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ದೇಹಕ್ಕೆ ಯಾವುದೇ ಬಗೆಯ ಸೋಂಕು ಉಂಟಾಗುವುದನ್ನು ದೂರ ಮಾಡುತ್ತದೆ.

ಇನ್ನು ಚಳಿಗಾಲದ ಸಮಯದಲ್ಲಿ ಬೆಲ್ಲದ ಸೇವನೆ ಗಂಟಲು ಸಂಬಂಧಿತ ಸಮಸ್ಯೆಗಳಾದ ಗಂಟಲು ನೋವು, ಗಂಟಲು ಕೆರೆತ, ಒಣ ಕೆಮ್ಮು ಇತ್ಯಾದಿ ಸಮಸ್ಯೆಗಳನ್ನು ಗಂಟಲಿನ ಒಳ ಭಾಗದ ಮೇಲೆ ಒಂದು ಸಣ್ಣ ಪದರವನ್ನು ಏರ್ಪಾಡು ಮಾಡಿ ನಿವಾರಣೆ ಮಾಡುತ್ತದೆ. ಇನ್ನು ಉಸಿರಾಟದ ಸಮಸ್ಯೆಗಳಾದ ಕೆಮ್ಮು, ಕಫ ಕಟ್ಟಿದ ಎದೆ ಮುಂತಾದ ಸಮಸ್ಯೆಗಳನ್ನು ದೇಹದ ರಕ್ತ ನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತ ನಾಳಗಳಲ್ಲಿ ಅಧಿಕ ರಕ್ತ ಹರಿಯುವಂತೆ ಮಾಡಿ ಶ್ವಾಸಕೋಶದ ನಾಳವನ್ನು ಬಿಸಿಯಾಗುವಂತೆ ಮಾಡಿ ಕಡಿಮೆ ಮಾಡುತ್ತದೆ. ಬೆಲ್ಲ ಮಾಡುವ ಇನ್ನೊಂದು ಮುಖ್ಯ ಚಮತ್ಕಾರ ಎಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಸಂಖ್ಯೆಯನ್ನು ಕಾಯ್ದುಕೊಳ್ಳುವ ಮೂಲಕ ರಕ್ತದಲ್ಲಿ ಅನಗತ್ಯ ವಸ್ತುಗಳನ್ನು ತೆಗೆದು ಹಾಕಿ ರಕ್ತವನ್ನು ಶುದ್ಧೀಕರಣ ಮಾಡುತ್ತದೆ. ಇದರಿಂದ ರಕ್ತ ಸಂಚಾರದಲ್ಲಿ ಯಾವುದೇ ಬಗೆಯ ರೋಗಕಾರಕ ಸೂಕ್ಷ್ಮಾಣುಗಳು ಸುಳಿಯದಂತೆ ಎಚ್ಚರಿಕೆ ವಹಿಸುತ್ತದೆ.

ಚಳಿಗಾಲದಲ್ಲಿ ನಮ್ಮ ದೇಹ ಸೋಂಕುಗಳಿಗೆ ಆಹ್ವಾನ ಮಾಡುವ ಕಾರಣವೆಂದರೆ ನಮ್ಮ ಸುತ್ತಮುತ್ತ ಸುಳಿದಾಡುವ ತಣ್ಣನೆಯ ಮತ್ತು ಒಣ ಗಾಳಿ ರೋಗಾಣುಗಳ ಉತ್ಪತ್ತಿಗೆ ಮತ್ತು ಬೆಳವಣಿಗೆಗೆ ಬಹಳ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಬೆಲ್ಲ ಮನುಷ್ಯನ ದೇಹದ ಎಲ್ಲ ಅಂಗಗಳಿಂದ ಅಂದರೆ ಶ್ವಾಸನಾಳ, ಹೊಟ್ಟೆಯ ಭಾಗ, ಕರುಳಿನ ಭಾಗ, ಶ್ವಾಸಕೋಶ ಮತ್ತು ಅನ್ನನಾಳ ಗಳಿಂದ ಅನಗತ್ಯ ಕಣಗಳನ್ನು ತೆಗೆದು ಹಾಕುವುದರ ಮೂಲಕ ಮನುಷ್ಯನ ದೇಹ ಯಾವುದೇ ಬಗೆಯ ದುಷ್ಟ ಕಾಯಿಲೆಗಳಿಗೆ ಒಳಗಾಗದಂತೆ ಕಾಪಾಡುತ್ತದೆ.
ಹೀಗೆ ಬೆಲ್ಲ ಕೇವಲ ಅಡುಗೆಗೆ ಮಾತ್ರವಲ್ಲದೇ ನಮ್ಮ ದೇಹದ ಹಲವು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವವನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ಅನುಸರಿಸಿ.
ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಈಗ ಪ್ರಧಾನಿ ಅವರ ನಡೆಯನ್ನೇ ಇಲ್ಲಿಗೆ ಬರುವ ಯಾತ್ರಿಕರು ಅನುಸರಿಸುತ್ತಿದ್ದಾರೆ.ಹೌದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮೊದಲು ಮೇ 18ರಂದು ಮೋದಿ ಅವರು ಕೇದಾರನಾಥದಲ್ಲಿರುವ ಗುಹೆಯಲ್ಲಿ 24 ಗಂಟೆಗಳು ಸುದೀರ್ಘ ಧ್ಯಾನ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಹಾಗೆಯೇ ಹಲವರ ಗಮನ ಸೆಳೆದಿದ್ದರು. ಈಗ ಈ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು ತಾ ಮುಂದು ನಾ ಮುಂದು ಅಂತ ಮುಗಿಬಿದ್ದಿದ್ದಾರೆ. ಕೇದಾರನಾಥ ಗುಹೆಯಲ್ಲಿ…
ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ
ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…
ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು. ನಿರ್ಮಾಪಕನ ಮಾತನ್ನು…
ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ.ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ.ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ.ಅದರಲ್ಲಿ ದೇವರ ದೇವ ಮಹಾದೇವ ಸಂಭಂದಿಸಿದ ವಸ್ತುಗಳು ಕನಸಿನಲ್ಲಿ ಬಂದ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ