ಸುದ್ದಿ

ಜನ್ಮ ಕೊಟ್ಟಾಗ ಈ ಮಗುವಿನ ತೂಕ ಎಷ್ಟು ಎಂದು ಗೊತ್ತಾದರೆ ಅಚ್ಚರಿ ಪಡುವುದು ಗ್ಯಾರಂಟಿ,.!!

42

ಸಾಮಾನ್ಯವಾಗಿ ನವಜಾತ ಶಿಶುಗಳ ತೂಕ 2.5 ಕೆಜಿಯಿಂದ 4.3 ಕೆಜಿಯೊಳಗೆ ಇರುತ್ತದೆ. ಆದರೆ, ಇಲ್ಲೊಬ್ಬಳು ತಾಯಿ ಜನ್ಮ ನೀಡಿದ ಮಗುವಿನ ತೂಕ ಸುಮಾರು 6 ಕೆಜಿ…! ಈ ಕಂದನ ತೂಕ ನೋಡಿ ಸ್ವತಃ ತಾಯಿಯೇ ಅಚ್ಚರಿಗೊಂಡಿದ್ದು, `ನಾನು ಮಿನಿ ರೆರ್ಸ್ಲೆರ್‌ಗೆ ಜನ್ಮ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಸಿಡ್ನಿಯ ಎಮ್ಮಾ ಮಿಲ್ಲರ್ ಮತ್ತು ಡೇನಿಯರ್ ದಂಪತಿ ಕಳೆದ ವಾರ ರೆಮಿ ಫ್ರಾನ್ಸಿಸ್ ಮಿಲ್ಲರ್‌ನನ್ನು ಮನೆಗೆ ಸ್ವಾಗತಿಸಿದ್ದರು. ಆದರೆ, ರೆಮಿ ಎಲ್ಲಾ ಚಿಣ್ಣರಂತಿಲ್ಲ. ಇವಳ ದೇಹದ ತೂಕ ಸಹಜ ಮಕ್ಕಳ ತೂಕವನ್ನೇ ಮೀರಿಸುವಂತಿದೆ. ಇಷ್ಟು ತೂಕ ಇದ್ದರೂ ಕಂದ ಆರೋಗ್ಯವಂತಳಾಗಿದ್ದಾಳೆ ಎನ್ನುವುದು ಖುಷಿಯ ವಿಷಯ.

ಆಸ್ಟ್ರೇಲಿಯಾದಲ್ಲಿ ಮಕ್ಕಳು ಸರಾಸರಿ 3.3 ಕೆಜಿ ತೂಕದ ಆಸುಪಾಸಿನಲ್ಲಿ ಜನಿಸುತ್ತಾರೆ. ಆದರೆ, ರೆಮಿಯ ತೂಕ 38 ವಾರ ಮತ್ತು ಎರಡು ದಿನಕ್ಕೆ 5.88 ಕೆಜಿ ಇತ್ತು. ಈ ದಂಪತಿಗೆ ಇನ್ನಿಬ್ಬರು ಮಕ್ಕಳಿದ್ದಾರೆ. 2 ವರ್ಷದ ವಿಲ್ಲೊವ್ ಮತ್ತು 4 ವರ್ಷದ ಏಕ್. ವಿಲ್ಲೋವ್ ತೂಕ 3.8 ಕೆಜಿ ಇದ್ದರೆ, ಏಕ್ 5.5 ಕೆಜಿ ಇದ್ದಾನೆ. ಆದರೆ, ರೆಮಿ ಇವರಿಬ್ಬರಿಗಿಂತಲೂ ತೂಕದಲ್ಲಿ ಹೆಚ್ಚಿದ್ದಾಳೆ…!

ಆಸ್ಟ್ರೇಲಿಯಾದಲ್ಲಿ ಇಷ್ಟು ತೂಕದ ಮಕ್ಕಳು ಜನಿಸುವುದು ತೀರಾ ಕಡಿಮೆ. ಹೆಚ್ಚೆಂದರೆ ಹುಟ್ಟುವ ಮಕ್ಕಳು 4.5 ಕೆಜಿ ತೂಕ ಹೊಂದಿರುತ್ತಾರೆ. ಅದೂ ತೀರಾ ಅಪರೂಪ. ಇದೇ ಕಾರಣಕ್ಕೆ ಆಸ್ಟ್ರೇಲಿಯಾದ ಜನ ರೆಮಿಯ ತೂಕ ಕೇಳಿ ಶಾಕ್ ಆಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ