ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿನಿಮಾ ರಂಗದಲ್ಲಿ ‘ನವರಸನಾಯಕ’ ಜಗ್ಗೇಶ್ ಅವರಿಗೆ 40 ವರ್ಷಗಳ ಅನುಭವ ಇದೆ. ಅವರಿಗೆ ಸಿನಿಮಾ ಬಗ್ಗೆ ಸಾಕಷ್ಟು ಅನುಭವವಿದೆ. ಸೋಲು-ಗೆಲುವು ಕಂಡ ಅವರು 75 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದರು. ಈ ಸಾಲ ತೀರಿಸಲು ಮನೆ ಮಾರಿದ್ದರಂತೆ. ಇದರ ಬಗ್ಗೆ ಜಗ್ಗೇಶ್ ಹೇಳಿದ್ದೇನು?

‘ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಅವರು ಸಿನಿಮಾ ಮಾಡಲು ಹೋಗಿ 70 ಲಕ್ಷ ರೂಪಾಯಿ ಕಳೆದುಕೊಂಡ ಕಥೆ ಬಿಚ್ಚಿಟ್ಟಿದ್ದಾರೆ. ಏನದು?
ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ‘ಮೇಕಪ್’ ಸಿನಿಮಾ ಬಿಡುಗಡೆಯಾಗಿದ್ದ ಸಂದರ್ಭದ ಜಾಹೀರಾತುಗಳನ್ನು ಹಂಚಿಕೊಂಡಿರುವ ಜಗ್ಗೇಶ್, ಸಿನಿಮಾ ನಿರ್ಮಿಸಿ ಅನುಭವಿಸಿದ ನಷ್ಟದ ಬಗ್ಗೆ ಹೇಳಿದ್ದಾರೆ.

ಜಗ್ಗೇಶ್ ನಿರ್ಮಾಣ ಮಾಡಿ ನಟಿಸಿದ ಚಿತ್ರ ‘ಮೇಕಪ್’. ನಿಜಕ್ಕೂ ಜಗ್ಗೇಶ್ ಈ ಸಿನಿಮಾದಲ್ಲಿ ಮೇಕಪ್ ಹಾಕಿ (ಅಜ್ಜಿ) ಪಾತ್ರದಲ್ಲಿ ಎಲ್ಲರೂ ಹುಬ್ಬೇರುವಂತೆ ನಟಿಸಿದ್ದರು. ಜಗ್ಗೇಶ್ ಈ ಸಿನಿಮಾದಲ್ಲಿ ದ್ವಿಪಾತ್ರಕ್ಕೆ ಬಣ್ಣ ಹಚ್ಚಿದ್ದರು. ದುರಾದೃಷ್ಟ ಎಂದು ಜಗ್ಗೇಶ್ ಟ್ವೀಟ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿಸಾಗ ಜಗ್ಗೇಶ್, ‘ಇದು ನನ್ನ ದುರಾದೃಷ್ಟವಲ್ಲ. ಹೊಸ ಜೀವನದ ಪಾಠವನ್ನು ದೇವರು ಕಲಿಸಿದ್ದಾನೆ.

ಅದೇ ವರ್ಷ ಮತ್ತೆ ನಾನು ಏನು ಕಳೆದುಕೊಂಡಿದ್ದೇನೋ ಅದನ್ನೇ ಮತ್ತೆ ಗಳಿಸಿದೆ. ಯಾರದೋ ದುಡ್ಡು, ಕಾಸಿದ್ದವನೆ ಬಾಸ್. ಈಗ ನಾನು ಎಲ್ಲ ರೀತಿಯ ಸಿನಿಮಾಗಳಿಗೂ ಕ್ಲಾಸ್ ತೆಗೆದುಕೊಳ್ಳುವ ಸಾಮರ್ಥ್ಯ ನನಗಿದೆ. ಅನುಭವ ಪಾಠ ಕಲಿಸುತ್ತದೆ. ಆಗದು ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್. ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ…
75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…
ನಮ್ಮ ಹಿರಿಯರು ಊಟ ಮಾಡುವಾಗ ಹೆಚ್ಚು ಮಾತಾಡಬೇಡಿ ಎಂದು ಕೂಗಿ ಕೂಗಿ ಹೇಳಿದರು ನಮಗೆ ಕೇಳಿಸಿದರು ಕೇಳಿಸಲಿಲವೇನೋ ಇಲ್ಲ ಎಂಬಂತೆ ವರ್ತಿಸುತ್ತೇವೆ, ಆದರೆ ಹೀಗೆ ಊಟ ಮಾಡುವಾಗ ಮಾತಾಡಿ ಹಲವು ಬಾರಿ ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಸಂಗತಿಗಳು ಸಹ ನಡೆದಿರುತ್ತವೆ, ಆದರೂ ನಮಗೆ ಹೆಚ್ಚಾಗಿ ಊಟಕ್ಕೆ ಕುಳಿತಾಗಲೇ ಇಲ್ಲ ಸಲ್ಲದ ವಿಷಯಗಳು ನೆನಪಾಗುತ್ತವೆ.
ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ. ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ…
ಈ ವಾರ ಬಿಗ್ ಬಾಸ್ ಮನೆಯಲ್ಲಿ ನೀಡಿದ್ದ ಲಕ್ಸುರಿ ಬಜೆಟ್ ಟಾಸ್ಕ್ ‘ಕಾಲಾಯ ತಸ್ಮೈ ನಮಃ’ ಮುಕ್ತಾಯವಾಯ್ತು.
ಮನೆಯಲ್ಲಿರುವ ಸ್ಪರ್ದಿಗಳೆಲ್ಲ ಉತ್ಸಾಹದಿಂದ ಆಟದಲ್ಲಿ ಭಾಗವಹಿಸಿದ್ದರೆಂದು ‘ಬಿಗ್ ಬಾಸ್’ ಮನೆಯ ಸ್ಪರ್ದಿಗಳನ್ನೆಲ್ಲ ಶ್ಲಾಘಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…