ಸುದ್ದಿ

ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯವನ್ನು ಗೆದ್ದ ಅನುಷ್ಕಾ ಶರ್ಮಾ…ಅಷ್ಟಕ್ಕೂ ಅನುಷ್ಕಾ ಬಳಕೆ ಮಾಡಿದ ಪದ ಏನು ಗೊತ್ತಾ..?

75

ಭಾರತಕ್ರಿಕೆಟ್ ತಂಡದನಾಯಕವಿರಾಟ್ ಕೊಹ್ಲಿ ಪತ್ನಿಹಾಗೂಬಾಲಿವುಡ್ ನಟಿಅನುಷ್ಕಾ ಶರ್ಮಾಕನ್ನಡದಲ್ಲಿ ಪದವೊಂದನ್ನು ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್  ಕೊಹ್ಲಿ ಜತೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಕನ್ನಡದಲ್ಲಿ ಒಂದೇ ಒಂದು ಪದವನ್ನು ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ. 

ಅನುಷ್ಕಾ ಮಾಡಿರುವ ತಾಜಾ ಟ್ವೀಟ್‌ನಲ್ಲಿ ಧನಾತ್ಮಕತೆಯ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ. ಇಂಟರ್‌ನೆಟ್‌ನಲ್ಲಿ ಧನಾತ್ಮಕತೆಯನ್ನು ಪಸರಿಸುವ ಟ್ವೀಟ್‌ಗಳನ್ನು ಓದುತ್ತಾ ಸಾಗುತ್ತಾರೆ. ಕೊನೆಗೆ ದಟ್ಸ್ ಇಟ್ ಬದಲು ಕನ್ನಡದಲ್ಲೇ ‘ಅಷ್ಟೇ’ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. 

ಅಷ್ಟಕ್ಕೂ ಅನುಷ್ಕಾ ಕರ್ನಾಟಕದ ಜತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲೇ ಓದಿರುವ ಅನುಷ್ಕಾ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20ಕ್ರಿಕೆಟ್ ಚಾಂಪಿಯನ್‌ಶಿಪ್ ವೇಳೆಯಂತೂ ಪತಿ ವಿರಾಟ್ ಕೊಹ್ಲಿ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿರುತ್ತಾರೆ. ಈ ಮೂಲಕ ತಂಡವನ್ನು ಹುರಿದುಂಬಿಸುತ್ತಾರೆ. 

ಅನುಷ್ಕಾ ಅಷ್ಟೇ ಎಂಬ ಕನ್ನಡ ಪದ ಬಳಕೆ ಮಾಡಿದ್ದೇ ತಡ ಕನ್ನಡಿಗರೆಲ್ಲರಿಗೂ ಖುಷಿಯೋ ಖುಷಿ. ಅಲ್ಲದೆ ತಮ್ಮ ಸಂತಸವನ್ನು ಟ್ವೀಟ್ ಮೂಲಕ ತೋಡಿಕೊಂಡಿದ್ದಾರೆ. ಅನುಷ್ಕಾ ಮಾಡಿರುವ ಈ ಟ್ವೀಟ್10 ಸಹಸ್ರಕ್ಕೂ ಹೆಚ್ಚು ಬಾರಿ  ಟ್ವೀಟ್ ಆಗಿರುವುದು ಗಮನಾರ್ಹವೆನಿಸುತ್ತದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ