ಸುದ್ದಿ

ಕೇಂದ್ರ ಸಚಿವ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅಸ್ತಂಗತ…

101

ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲಿ ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು.ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಖಾಸಗಿ ಆಸ್ಪತ್ರೆಯಿಂದ ಇದೀಗ ಅವರ ನಿವಾಸ ಬಸವನಗುಡಿಯಲ್ಲಿರುವ ಸುಮೇರ ನಿವಾಸದಲ್ಲಿರಿಸಲಾಗಿದೆ.

ಬೆಳಗ್ಗೆ 9 ಗಂಟೆ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರಿ ಯೋಜನೆಗಳು

    ಅಂತರ್ಜಾತಿ ಮದುವೆ ಆಗಿ, ಕೇಂದ್ರ ಸರ್ಕಾರದಿಂದ ಲಕ್ಷ ಲಕ್ಷ ಹಣ ಪಡೆಯಿರಿ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

  • ಸುದ್ದಿ

    ಸ್ಟೇಷನ್‌ ಮಾಸ್ಟರ್‌ ನಿರ್ಲಕ್ಷ್ಯಕ್ಕೆ ರೈಲ್ವೇ ಸಿಬ್ಬಂದಿ ಬಲಿ…!

    ರೈಲ್ವೆ ಹಳಿಯಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ಹೌರಾ- ಜಗದಾಲ್ಪುರ ಸಮಲೇಶ್ವರಿ ಎಕ್ಸ್‌ಪ್ರೆಸ್‌ ರೈಲು ಆಗಮಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲ್ವೆ ಹಳಿ ನಿರ್ವಹಣೆ ಮಾಡುವ ನಿರ್ವಹಣಾ ಕಾರಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅದೇ ದಾರಿಯಲ್ಲಿ ಸಮಲೇಶ್ವರಿ ಎಕ್ಸ್ ಪ್ರೆಸ್ ಬಂದಿದೆ. ಈ ಘಟನೆಯಿಂದ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು ಎಂಜಿನ್ ಗೆ ಹಾನಿಯಾಗಿದೆ. ಆದರೆ ರೈಲು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ರೈಲ್ವೆ ಹಳಿ ನಿರ್ವಹಣೆ ನಡೆಯುವಾಗಲೇ ರೈಲು ಸಂಚಾರಕ್ಕೆ…

  • Uncategorized, ಸಿನಿಮಾ

    ರಾಜಕುಮಾರ ಚಿತ್ರ ಪ್ರದರ್ಶನ ಅರ್ಧಕ್ಕೆ ಸ್ಥಗಿತ……..!!!!!

    ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್‍ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್‍ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್‍ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ…

  • Village

    ಕೋಲಾರ ಜಿಲ್ಲೆಯಲ್ಲಿರುವ ಹುಂಗೇನಹಳ್ಳಿ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಓದಿ ಈ ಲೇಖನವನ್ನು

    ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…

    Loading

  • ವಿಚಿತ್ರ ಆದರೂ ಸತ್ಯ

    ಮೊಬೈಲ್‌ನಲ್ಲಿ ಮಾತನಾಡಿದ್ರೆ ಬೀಳುತ್ತೆ ಭಾರಿ ದಂಡ..!ತಿಳಿಯಲು ಈ ಲೇಖನ ಓದಿ ..

    ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.

  • ಜೀವನಶೈಲಿ

    ಸುಲಭವಾಗಿ ನಿಮ್ಮ ಜೀನ್ಸ್ ಪ್ಯಾಂಟ್ ವಾಶ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ ಜೀನ್ಸ್ ಪ್ಯಾಂಟನ್ನು ತೊಳೆಯದೆ ಪದೇ ಪದೇ ಧರಿಸಬಹುದು. ಆದ್ರೆ ಈ ಜೀನ್ಸ್ ತೊಳೆಯೋದು ಮಾತ್ರ ಕಷ್ಟದ ಕೆಲಸ. ಕೆಲಮೊಮ್ಮೆ ನಾವು ಮಾಡುವ ತಪ್ಪಿನಿಂದ ಜೀನ್ಸ್ ಬಣ್ಣ ಬೇಗ ಮಾಸುತ್ತದೆ. ಹರಿದು ಹೋಗುವ ಛಾನ್ಸ್ ಕೂಡ ಇದೆ. ನಾವು ಹೇಳುವ ಉಪಾಯ ಅನುಸರಿಸಿದ್ರೆ ಜೀನ್ಸ್ ಬಣ್ಣವನ್ನು ಹಾಗೇ ಉಳಿಸಿಕೊಂಡು ಹೋಗಬಹುದು.ನೀವು…