ಸಿನಿಮಾ, ಸುದ್ದಿ

ಯಶ್​ಗೆ ಅಂಬಿ, ರವಿಚಂದ್ರನ್ ಜನ್ಮದಿನವೇ ಮರೆತುಹೋಯಿತೇ? ಸಿಟ್ಟಾದ್ರು ರೆಬೆಲ್​ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್​ ಫ್ಯಾನ್ಸ್.

156

ದರ್ಶನ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಕೆಲಸ ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ರಂಗದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ಪರಿಹಾರ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್​ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು ನೆನೆದಿದ್ದಾರೆ.

ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್​ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು ನೆನೆದಿದ್ದಾರೆ. ದರ್ಶನ್, ಪುನೀತ್ ರಾಜ್​ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಅದುವೇ ಯಶ್! ಹೌದು, ಅಂಬಿ ಹಾಗೂ ರವಿಚಂದ್ರನ್​ ಜನ್ಮದಿನದಂದು ಯಶ್ ಯಾವುದೇ ಶುಭಾಶಯ ಕೋರಿ ಟ್ವೀಟ್ ಮಾಡಿಲ್ಲ. ಇದು ರೆಬೆಲ್​ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್​ ಫ್ಯಾನ್ಸ್ ಗಳ ಕೋಪಕ್ಕೆ ಕಾರಣವಾಗಿದೆ.

ಅನೇಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಒಂದು ಶುಭಾಶಯವನ್ನೂ ಕೋರದ ಯಶ್ ಬಗ್ಗೆ ಕಿಡಿಕಾರಿದ್ದಾರೆ. ಅಂಬರೀಶ್ ಮೃತಪಟ್ಟ ನಂತರ ಅವರ ಕುಟುಂಬಕ್ಕೆ ಯಶ್ ಬೆನ್ನೆಲುಬಾಗಿ ನಿಂತಿದ್ದರು. ಮನೆಯ ಮಗನಂತರ ಎಲ್ಲ ಕೆಲಸವನ್ನು ಮಾಡಿಕೊಟ್ಟಿದ್ದರು. ಸುಮಲತಾ ಲೋಕಸಭಾ ಚುನಾವಣೆಗೆ ನಿಂತಾಗಲಂತೂ ದರ್ಶನ್ ಹಾಗೂ ಯಶ್ ಜೋಡೆತ್ತುಗಳಂತೆ ಕೆಲಸ ಮಾಡಿದ್ದರು. ಅನೇಕ ಸಭೆಗಳಲ್ಲಿ ಮಾತನಾಡಿದ್ದ ಸುಮಲತಾ, ಯಶ್ ಹಾಗೂ ದರ್ಶನ್ ನನ್ನ ಮನೆ ಮಕ್ಕಳಂತೆ ಎಂದು ಹೇಳಿಕೊಂಡಿದ್ದರು. ಹೀಗಿದ್ದರೂ ಯಶ್ ಯಾಕೆ ವಿಶ್ ಮಾಡಲಿಲ್ಲ ಎಂಬುದು ಅನೇಕರ ಪ್ರಶ್ನೆ.

ಅಂಬಿ ಹಾಗೂ ರವಿಚಂದ್ರನ್​ ಜನ್ಮದಿನ ಕಳೆದು ನಾಲ್ಕೈದು ದಿನಗಳಾಗಿವೆ. ತಡವಾಗಿದ್ದಕ್ಕೆ ಕ್ಷಮೆ ಕೇಳಿ ಯಶ್ ಈಗಲಾದರೂ ಟ್ವೀಟ್ ಮಾಡಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಯಶ್ ಕಡೆಯಿಂದ ಯಾವುದೇ ಟ್ವೀಟ್ ಬಂದಿಲ್ಲ. ನ್ನು, ಯಶ್ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದಾರೆ. ಹೀಗಾಗಿ ಅವರು ವಿಶ್ ಮಾಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಯಶ್ ಏ.30ರಂದು ಮಾಡಿದ ಟ್ವೀಟ್ ಕೊನೆ ಅದಾದ ಮೇಲೆ ಯಾವುದೇ ಪೋಸ್ಟ್ ಅನ್ನು ಟ್ವಿಟ್ಟರ್ನಲ್ಲಿ ಹಾಕಿಲ್ಲ. ಫೇಸ್ಬುಕ್ ನಲ್ಲಿ ಏ.5ರಂದು ಮಾಡಿದ ಪೋಸ್ಟ್ ಕೊನೆ.

ಅದಾದಮೇಲೆ ಯಾವುದೇ ಅಪ್ಡೇಟ್ ಹಾಕಿಲ್ಲ. ಕೆಜಿಎಪ್ 2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ಸಾಮಾಜಿಕ ಜಾಲತಾಣದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಈ ಕಾರಣಕ್ಕೆ ಅವರು ಯಾವುದೇ ಪೋಸ್ಟ್ ಮಾಡುತ್ತಿಲ್ಲ. ಹೀಗಾಗಿ ಅಂಬಿಗೆ ವಿಶ್ ಮಾಡಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ