ಸುದ್ದಿ

ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು..!

49

ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್‌.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ.

ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು.

ಈ ಮಾರ್ಗಸೂಚಿಗಳನ್ನು ಇಲಾಖೆಯ ತಜ್ಞರ ಸಮಿತಿಯಲ್ಲಿಟ್ಟು ಪರಿಶೀಲಿಸಿ, ನಂತರ ಇಲಾಖೆಯ ಆಯುಕ್ತರ ಅನುಮೋದನೆ ಪಡೆದು ಸುತ್ತೋಲೆ ಹೊರಡಿಸಬೇಕಿತ್ತು. ಆದರೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ ಕೆ.ಎಸ್‌.ಮಣಿ ಅವರು, ಖಾಸಗಿ ಸಂಸ್ಥೆಯ ಮಾರ್ಗದರ್ಶಿಗಳನ್ನು 2019ರ ಅ.28ರಂದು ಯಥಾವತ್‌ ಅನುಮೋದನೆ ನೀಡಿ, ನ.6ರಂದು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದರು.

‘ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ಸುತ್ತೋಲೆ ಹೊರಡಿಸಿ ಸಂವಿಧಾನ ಕರ್ತೃಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಭಾರತೀಯ ಸಂವಿಧಾನ ರಕ್ಷಣಾ ಸಮಿತಿ ದೂರು ನೀಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಬಿಗ್ ಬಾಸ್’ ಮನೆಯಿಂದ ರಶ್ಮಿ ಔಟ್ : ಒಪನ್ ಮೈಂಡೆಡ್ ವೈಲ್ಡ್ ಕಾರ್ಡ್ ವ್ಯಕ್ತಿ ಯಾರು ಗೊತ್ತಾ?

    ‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ಮೂರನೇ ವಾರದ ಎಲಿಮಿನೇಶನ್ ಆಗಿದೆ. ‘ಬಿಗ್ ಬಾಸ್’ ಮನೆಯಿಂದ ಗುರುಲಿಂಗ ಸ್ವಾಮೀಜಿ, ಆಂಕರ್ ಚೈತ್ರ ವಾಸುದೇವನ್ ಹೊರ ಬಂದ ಬಳಿಕ ಇದೀಗ ಚಿತ್ರನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ‘ದುನಿಯಾ’ದಂತಹ ಸೂಪರ್ ಹಿಟ್ ಚಿತ್ರವನ್ನು ನೀಡಿದ ಬಳಿಕ ರಶ್ಮಿ ಅಷ್ಟಾಗಿ ಸಿನಿ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ. ‘ಬಿಗ್ ಬಾಸ್’ ಮೂಲಕ ಅದೃಷ್ಟ ಪರೀಕ್ಷೆಗೆ ದುನಿಯಾ ರಶ್ಮಿಇಳಿದಿದ್ದರು. ‘ಬಿಗ್ ಬಾಸ್’ ಶೋದಿಂದ ಸ್ಯಾಂಡಲ್ ವುಡ್ ನಲ್ಲಿ ಭಾಗ್ಯದ ಬಾಗಿಲು ತೆರೆಯ ಬಹುದು ಎಂದು ದುನಿಯಾ…

  • ಉಪಯುಕ್ತ ಮಾಹಿತಿ

    ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ ಬೈಕುಗಳು ಯಾವುವು ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ನೀವೇನಾದರೂ ಹೊಸ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡರೆ, ವಿನ್ಯಾಸ ಅಥವಾ ಕಾರ್ಯಕ್ಷಮತೆಯ ಜೊತೆಗೆ ವಾಹನದ ಬೆಲೆಯ ಕಡೆ ನಿಮ್ಮಗೂ ನೀವು ಗಮನಹರಿಸುತ್ತೀರಿ. ಈ ಎಲ್ಲಾ ಲಕ್ಷಣಗಳನ್ನು ಪಡೆದ ಟಾಪ್ 5 ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.

  • ಉಪಯುಕ್ತ ಮಾಹಿತಿ

    ರೇಲ್ವೆ ಹಳಿಗಳ ಜೆಲ್ಲಿಕಲ್ಲು ಹಾಕುವುದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

  • ರಾಜಕೀಯ

    ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?

    ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್ !!! ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ…

  • ಸಿನಿಮಾ

    ಸುಮ್ಮನೆ ಮನೆಯಲ್ಲಿ ಕೂರದೇ, ಕೈತುಂಬಾ ಸಂಪಾದನೆ ಮಾಡ್ತಾರೆ ನಮ್ಮ ಸ್ಟಾರ್ ನಟರ ಪತ್ನಿಯರು!

    ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…