ಆಧ್ಯಾತ್ಮ

ಅಕ್ಷಯ ತೃತೀಯ ದಿನದಂದು ಅತೀ ಸುಲಭವಾದ ಈ ನಿಯಮಗಳನ್ನು ತಪ್ಪದೆ ಪಾಲಿಸಿ…

574

ವೈಶಾಖ – ಶುಕ್ಲ ತೃಥಿಯವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.ಈ ಬಾರಿ ಮೇ 7 ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗ್ತಿದೆ. ಅಕ್ಷಯ ತೃತೀಯ ಪವಿತ್ರ ದಿನ. ಅಂದು ಮದುವೆ, ಗೃಹ ಪ್ರವೇಶ ಸೇರಿದಂತೆ ಕೆಲ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ.

ಅಕ್ಷಯ ತೃತೀಯದಂದು ಮಾಡಿದ ದಾನದ ಫಲ ಎಂದೂ ನಾಶವಾಗುವುದಿಲ್ಲ. ಮುಂದಿನ ಜನ್ಮಕ್ಕೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಈಗ ನಾವು ಹೇಳುವ ಕೆಲಸದಲ್ಲಿ ಎರಡನ್ನು ಮಾಡಿದ್ರೂ ಪುಣ್ಯ ಪ್ರಾಪ್ತಿಯಾಗುತ್ತದೆ.

ಅಕ್ಷಯ ತೃತೀಯದಂದು ಸಿಹಿ ಹಾಗೂ ತಣ್ಣನೆ ನೀರನ್ನು ನೀಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಅಕ್ಷಯ ತೃತೀಯದಂದು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಬಡವರಿಗೆ ಮಡಿಕೆ, ಛತ್ರಿ, ಫ್ಯಾನ್ ದಾನದ ರೂಪದಲ್ಲಿ ನೀಡಬೇಕು.

ಈ ದಿನ ದೇವಸ್ಥಾನದಲ್ಲಿ ವಾಟರ್ ಕೂಲರ್ ಇಡಿ. ಪ್ರಸಾದ ಸ್ವೀಕರಿಸುವ ಭಕ್ತರಿಗೆ ಸಿಹಿಯನ್ನು ನೀಡಿ.

ಅಕ್ಷಯ ತೃತೀಯದಂದು ವಿಷ್ಣುವಿನ ಪೂಜೆಯನ್ನು ತಾಯಿ ಲಕ್ಷ್ಮಿ ಜೊತೆ ಮಾಡಿ, ಪ್ರಯೋಜನ ಪಡೆಯಿರಿ.

ಅಕ್ಷಯ ತೃತೀಯದಂದು ವಿಷ್ಣುವಿಗೆ ಹಳದಿ ಹೂವನ್ನು ಅರ್ಪಿಸಿ. ಹಳದಿ ಬಟ್ಟೆಯನ್ನು ಧರಿಸಿ 9 ದೀಪವನ್ನು ಹಚ್ಚಿ ಪೂಜೆ ಮಾಡಿ.

ಅನಾರೋಗ್ಯದಿಂದ ಬಳಲುವವರು ರಾಮರಕ್ಷಾ ಸ್ತೋತ್ರವನ್ನು ಅವಶ್ಯಕವಾಗಿ ಪಠಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ