ಸುದ್ದಿ

ಮಂಗಳಮುಖಿಯರಿಗೆ ಮನೆ ಕಟ್ಟಿಕೊಳ್ಳಲು ಅಕ್ಷಯ್ ಕುಮಾರ್ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ.

70

ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸಲು, ವಿಶೇಷ ಸ್ಥಾನಮಾನ ನೀಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮಂಗಳಮುಖಿಯರಿಗೆ ಹೊಟೇಲ್, ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ನೀಡಲಾಗಿದ್ದು, ತಮಗೆ ದೊರೆತ ಕೆಲಸವನ್ನು ಮಂಗಳಮುಖಿಯರು ಕೂಡಾ ನಿಷ್ಠೆಯಿಂದ ಮಾಡುತ್ತಿದ್ದಾರೆ.

ಇನ್ನು ಎಷ್ಟೋ ಕಡೆಗಳಲ್ಲಿ ಮಂಗಳಮುಖಿಯರು ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರದಿಂದ ನೆರವು ದೊರೆಯದೆ ಮಂಗಳಮುಖಿಯರು ಕೂಡಾ ಬೇಸರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂತವರ ಸಹಾಯಕ್ಕೆ ಮುಂದಾಗಿದ್ದಾರೆ. ಮಂಗಳಮುಖಿಯರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ 1.5 ಕೋಟಿ ರೂಪಾಯಿ ಹಣ ನೀಡಿದ್ದಾರೆ. ತಮಿಳಿನ ‘ಕಾಂಚನ ‘ ರೀಮೇಕ್ ಆದ ‘ಲಕ್ಷ್ಮಿ ಬಾಂಬ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಾಘವ ಲಾರೆನ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ತೆರೆ ಮೇಲೆ ಮಾತ್ರ ಹೀರೋ ಅಲ್ಲದೆ, ಸಮಾಜಮುಖಿ ಕಾರ್ಯ ಮಾಡುವ ಮೂಲಕ ತೆರೆ ಹಿಂದೆ ಕೂಡಾ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಮಂಗಳಮುಖಿಯರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ಹಣ ಸಹಾಯ ಮಾಡಿದ್ದಾರೆ. ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ರಾಘವ ಲಾರೆನ್ಸ್, ‘ನಮ್ಮ ಸಂಸ್ಥೆ 15 ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಮಂಗಳಮುಖಿಯರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಹಾಕಿಕೊಂಡಿದ್ದೇವೆ.

ಇದಕ್ಕೆ ಅಕ್ಷಯ್ ಕುಮಾರ್ ಕೂಡಾ 1.5 ಕೋಟಿ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಮನೆ ನಿರ್ಮಾಣದ ಭೂಮಿ ಪೂಜೆ ದಿನಾಂಕವನ್ನು ನಿಮಗೆ ಆದಷ್ಟು ಬೇಗ ತಿಳಿಸುತ್ತೇವೆ’ ಎಂದು ರಾಘವ ಲಾರೆನ್ಸ್ ಹೇಳಿದ್ದಾರೆ. ರಾಘವ ಲಾರೆನ್ಸ್ ಕೂಡಾ ತಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಅನೇಕ ವರ್ಷಗಳಿಂದ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಕೆ ಅಕ್ಷಯ್ ಕುಮಾರ್ ಕೂಡಾ ಕೈ ಜೋಡಿಸಿರುವುದು ಜನರ ಮೆಚ್ಚುಗೆ ಗಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ