ಸುದ್ದಿ

ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ಕು ಜನರ ಸಾವು…!

46

ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್‍ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಇವರ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ,..!

    ಬೆಂಗಳೂರು, ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮಹಿಳೆಯರ ಸುಖಃಕರ ಪ್ರಯಾಣಕ್ಕಾಗಿ ಬಸ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮಾರಗಳನ್ನು ಆಳವಡಿಸಲು ಮುಂದಾಗಿದೆ. ಬೆಂಗಳೂರಿನಾದ್ಯಂತ ಸಂಚಾರಕ್ಕೆ ಹೆಚ್ಚಿನ ಮಹಿಳೆಯರು ಬಿಎಂಟಿಸಿಯನ್ನೇ ಅವಲಂಭಿಸಿದ್ದಾರೆ. ಹೀಗಾಗಿ ನಮ್ಮ ಬೆಂಗಳೂರಲ್ಲಿ ದೆಹಲಿ ನಿರ್ಬಯಾ ಪ್ರಕರಣದಂತ ಘಟನೆ ನಡೆಯಬಾರದೆಂದು, ಮುನ್ನೆಚ್ಚರಕಾ ಕ್ರಮವಾಗಿ ಮಹಿಳೆಯರ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು, ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. 48 ಗಂಟೆಗಳ ಕಾಲ ಕೊಟಿಂಗ್ ಕೆಪಾಸಿಟಿ ಇರೋ ಕ್ಯಾಮಾರಗಳು ಇವಾಗಿದ್ದು, ಮಹಿಳೆಯ ಮೇಲಿನ…

  • ಸುದ್ದಿ

    ಹಾಸನ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬರಲು ಕಾರಣ ನನ್ನ ಹೆಂಡತಿಯೇ ಹೊರತು ರೋಹಿಣಿ ಸಿಂಧುರಿ ಅಲ್ಲ ಎಂದ ರೇವಣ್ಣ..!

    ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ. ಹಿಂದಿನ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ ಅವರ ಕೊಡುಗೆ ಏನು ಇಲ್ಲ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕ್ಯಾನ್ಸರ್ ಚಿಕಿತ್ಸೆಯಿಂದ ನಿಮ್ಮ ಕೂದಲು ಉದುರುತ್ತಿದಿಯೇ -ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.

  • ಆಧ್ಯಾತ್ಮ

    ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಯಾವುವು ಗೊತ್ತಾ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

    ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಅಂತಹ ಕೆಲವು ಶಿಕ್ಷೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ

  • ಸುದ್ದಿ

    ಅತಿಯಾದ್ರೆ ʼಹಾಲುʼ ವಿಷವಾಗಿ ಪರಿವರ್ತಿಸುತ್ತೆ ಎಚ್ಚರ..!ಹೇಗೆ ಗೊತ್ತ?

    ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕ ಪಡುವಂತಹ ವಿಷಯವೊಂದನ್ನು ಹೊರಹಾಕಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು…

  • ಸಿನಿಮಾ, ಸುದ್ದಿ, ಸ್ಪೂರ್ತಿ

    ಡಿ-ಬಾಸ್ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅಭಿಮಾನಿಗಳು.

     ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದರು. ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್,…