ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿಕಿತ್ಸೆಗಾಗಿ ಪರದಾಡುತ್ತಿದ್ದ ಗರ್ಭಿಣಿಯನ್ನು ಸಿಆರ್ ಪಿಎಫ್ ಯೋಧರು ಸುಮಾರು 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು, ನಂತರ ವಾಹನದ ಮೂಲಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಛತ್ತಿಸ್ಗಢದ ಬಿಜಾಪುರದ ಕಾಡಿನ ಪ್ರದೇಶ ಪಡೇಡಾದಲ್ಲಿ ಘಟನೆ ನಡೆದಿದ್ದು, ಕಾಡಿನ ಮಧ್ಯೆ ರಸ್ತೆ ಸಂಪರ್ಕವಿರದ ಗ್ರಾಮದಲ್ಲಿ ಗರ್ಭಿಣಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಳು. ಇದನ್ನು ಕಂಡ ಸಿಆರ್ ಪಿಎಫ್ ಯೋಧರು ಆಕೆಗೆ ಸಹಾಯ ಮಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಾರೆ.
ಹೊಟ್ಟೆ ನೋವಿನಿಂದಾಗಿ ಮಹಿಳೆ ಹೊರಸಿನ ಮೇಲೆಯೇ ಒದ್ದಾಡುತ್ತಿದ್ದಳು. ಇದನ್ನು ಕಂಡ ಸಿಆರ್ ಪಿಎಫ್ ಯೋಧರು, ಮಹಿಳೆಯನ್ನು ಹೊರಸಿನ ಸಮೇತ ಎತ್ತಿಕೊಂಡು, ರಸ್ತೆವರೆಗೆ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಮಹಿಳೆಯ ಮನೆಯಿದ್ದ ಕಾಡಿನ ಪ್ರದೇಶ ಪಡೇಡಾದಿಂದ ಸುಮಾರು 6ಕಿ.ಮೀ. ದೂರದಲ್ಲಿ ರಸ್ತೆ ಇದ್ದು, ಅಲ್ಲಿಯವರೆಗೂ ಯೋಧರು ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.
ರಸ್ತೆವರೆಗೆ ಮಹಿಳೆಯನ್ನು ಹೊತ್ತುಕೊಂಡು ಹೋಗಿ, ನಂತರ ವಾಹನದ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಧರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ನಮ್ಮ ಪೂರ್ವಜರು ಏನೇ ಮಾಡಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಸತ್ಯ ಇದೆ ಎನ್ನುವ ವಿಷಯವನ್ನು ಹಲವು ಸಂಶೋಧನೆಗಳು ಕೂಡ ಒಪ್ಪಿಕೊಂಡಿವೆ. ಪ್ರಕೃತಿಯನ್ನು ದೇವರ ರೀತಿಯಲ್ಲಿ ಪೂಜಿಸುವ ನಮ್ಮ ಸಂಸ್ಕ್ರತಿ ಸಂಪ್ರದಾಯಗಳಲ್ಲಿರುವ ಪತಿ ಆಚರಣೆಯ ಹಿಂದೆ ಒಂದೊಂದು ಸೊಗಸಾದ ಆರೋಗ್ಯದ ಗುಟ್ಟುಗಳಿವೆ. ಹೌದು ಇಂದು ಇದೆ ವಿಷಯದ ಕುರಿತು ನಾವು ನಿಮಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ. ನಮ್ಮ ದೇಶದಲ್ಲಿ ಹಸಿರು ಹಸಿರಾದ ಬಾಳೆ ಎಲೆಯ ಊಟ ಇಂದು ನಿನ್ನೆಯದಲ್ಲ, ನಮ್ಮ ಪೂರ್ವಿಕರು ಇದರಲ್ಲಿರುವ ರೋಗ…
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಜ.2 ರ ಗೆಜೆಟಿಯರ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6,…
ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ. ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.ವೆಲ್ಲೂರು ಜಿಲ್ಲೆಯ ಜೋಲಾರ್ ಪೇಟೆಯಿಂದ ಬರೊಬ್ಬರಿ 25…
ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ….
ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.
ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್ವುಡ್ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ…