ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
ಬೇಕಾದ ಸಾಮಾಗ್ರಿಗಳು
ಅಕ್ಕಿ – 1 ಕಪ್
ತುಪ್ಪ – 1/2 ಕಪ್
ಈರುಳ್ಳಿ – 1 ದೊಡ್ಡ ಗಾತ್ರ
ಗೋಡಂಬಿ- 5-10 ಪೀಸ್
ಶುಂಟಿ, ಬೆಳುಳ್ಳಿ – 1 ಚಮಚ
ಏಲಕ್ಕಿ, ದಾಲ್ಚಿನಿ – 1
ಒಣ ದ್ರಾಕ್ಷಿ – 5 ಪೀಸ್
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ :
ಅಕ್ಕಿಯನ್ನು ತೊಳೆದು ಅದರ ನೀರನ್ನು ಪೂರ್ತಿಯಾಗಿ ಆರಲು ಬಿಡಿ. ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ತುಪ್ಪ ಸ್ವಲ್ಪ ಬಿಸಿಯಾದ ಮೇಲೆ ಹೆಚ್ಚಿದ ನೀರುಳ್ಳಿ ಹಾಕಿ, ನೀರುಳ್ಳಿ ಹೋಳುಗಳು ಕಂದು ಬಣ್ಣಕ್ಕೆ ಬಂದ ಕೂಡಲೇ ಅದನ್ನು ಪಾತ್ರೆಯಿಂದ ತೆಗೆದಿಡಿ, ನಂತರ ದ್ರಾಕ್ಷಿ, ಗೋಡಂಬಿ ಹುರಿಯಿರಿ, ಅದೇ ಬಾಣಲೆಗೆ ಶುಂಠಿ, ಬೆಳುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಕಾಯಿಸಿ, ಏಲಕ್ಕಿ, ದಾಲ್ಚಿನಿ ಹಾಕಿ ಹದವಾಗಿ ಹುರಿಯಿರಿ, ನಂತರ ಹುರಿದಿಟ್ಟ ನೀರುಳ್ಳಿ ಹಾಕಿ, ಇದಕ್ಕೆ ಅಕ್ಕಿ ಹಾಕಿ, ನೀರು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ, ಬೇಯಲು ಪ್ರಾರಂಭವಾದಾಗ ಉಪ್ಪು, ಕೊಂತ್ತಂಬರಿ ಸೊಪ್ಪು ಹಾಕಿ, ಪಾತ್ರೆಯನ್ನು ಮುಚ್ಚಿಡಿ. 10 ನಿಮಿಷಗಳ ನಂತರ ಮುಚ್ಚಳ ತೆರೆದು ನೋಡಿ. ಬಿಸಿ ಬಿಸಿ ರುಚಿಕರವಾದ ತುಪ್ಪಾನ್ನ ಸವಿಯಲು ಸಿದ್ಧ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗುಜರಾತ್ ನ ಸೂರತ್ ನಲ್ಲಿ ನಡೆದ ಭೀಕರ ಕಟ್ಟಡ ಅಗ್ನಿ ಅಘಡದಲ್ಲಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಸೂರತ್ ಸಾರ್ತನ ಪ್ರದೇಶದ ತಕ್ಷಶಿಲಾ ಆರ್ಕೇಡ್ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ ನಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ ಘಟನೆಯಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದು, ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು…
ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್ ಆವಿಷ್ಕರಿಸಿದ್ದಾರೆ. ಅಹಮದಾಬಾದ್, ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ…
ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಶಾಶ್ವತ ಬಂದ್ ಆಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ )ಅಡಿ ನೀಡುತಿದ್ದ ಆರ್ಥಿಕ ನೆರವನ್ನು ಪ್ರಸಕ್ತ ವರ್ಷದಿಂದಲೇ ಸ್ಥಗಿತ ಗೊಳಿಸುವ ಮಹತ್ವದ ತರ್ಮಾನ ಕೈಗೊಂಡಿದೆ.!!!!
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು…
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ
ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ…