ಸುದ್ದಿ

ಈ ಸಲದ ಮೋದಿ ಬಜೆಟ್’ನಲ್ಲಿ ಜಾಸ್ತಿಯಾಗಿದ್ದೇನು..?ಕಡಿಮೆಯಾಗಿದ್ದೇನು..?ಇಲ್ಲಿದೆ ಸಂಪೂರ್ಣ ಮಾಹಿತಿ…ನೋಡಿ ನಿಮ್ಮ ಅನಿಸಿಕೆ ತಿಳಿಸಿ…

235

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ  ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ  ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.

2018ನೇ ಸಾಲಿನ  ಬಜೆಟ್’ನ ಪ್ರಮುಖ ಅಂಶಗಳು:-

  • ಕೃಷಿ ಉತ್ಪನ್ನಗಳಿಗೆ ಮೀಸಲು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಳ ಮಾಡುವುದಾಗಿ ಘೋಷಣೆ.
  • ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವ ಸಲುವಾಗಿ, ಅನುದಾನದ ಮೊತ್ತವನ್ನು 11 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ.
  • ಕೃಷಿ ಮಾರುಕಟ್ಟೆ ಅಭಿವೃದ್ದಿಗಾಗಿ 22 ಸಾವಿರ ಕೋಟಿ ಅನುದಾನ.

  • ಈಗಿರುವ ಉಜ್ವಲ ಯೋಜನೆ ಅಡಿಯಲ್ಲಿ, ದೇಶದ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ.
  • ನಾಲ್ಕು ಕೋಟಿ ಬಡ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕ.
  • ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 56,619 ಕೋಟಿ ರೂ.
  • ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ 39,135 ಕೋಟಿ ರೂ.
  • ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ  3 ಲಕ್ಷ ಕೋಟಿ ಸಾಲ.
  • 70 ಎಪಿಎಂಸಿಗಳನ್ನು ಇ-ನ್ಯಾಮ್‌ ಮೂಲಕ ಸಂಪರ್ಕ
  • ಕೃಷಿ ಬೆಂಬಲ ಬೆಲೆ ನೆರೆ ರೈತರಿಗೆ ಸಿಗಲು ಕ್ರಮ.
  • ಬುಡಕಟ್ಟು ಜನರ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆಗಳ ಆರಂಭ.
  • ರೈಲುಗಳಲ್ಲಿ  ವೈ-ಫೈ ಮತ್ತು ಸಿಸಿಟಿವಿ ವ್ಯವಸ್ತೆ.
  • ಹೊಸ ಉದ್ಯೋಗಿಗಳ ಇಪಿಎಫ್‌ ಖಾತೆಗಳಿಗೆ ಶೇ 12ರ ವೇತನ ಸರಕಾರದಿಂದ.
  • 9,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ
  • ಶಾಲೆಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಒಂದು ಲಕ್ಷ ಕೋಟಿ.
  • ಬಡ್ಡಿ ಆದಾಯದ ಮೇಲಿನ ತೆರಿಗೆ ಮಿತಿ ಹೆಚ್ಚಳ.
  • ಸ್ಮಾರ್ಟ್ ಸಿಟಿಗಳಿಗೆ 2.04 ಲಕ್ಷ ಕೋಟಿ ರೂ. ಅನುದಾನ
  • ರಾಷ್ಟ್ರಪತಿಗಳ ವೇತನವನ್ನು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ, ಉಪರಾಷ್ಟ್ರಪತಿಗಳ ವೇತನವನ್ನು 4.5 ಲಕ್ಷ ರೂಪಾಯಿ ಮತ್ತು ರಾಜ್ಯಪಾಲರುಗಳ ವೇತನವನ್ನು 3.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
  • ಬಡವರಿಗೆ ಕಡಿಮೆ ವೆಚ್ಚದಲ್ಲಿ ಮನೆ.
  • 42 ಮೆಗಾ ಫುಡ್ ಪಾರ್ಕ್ಗಳ ಗೋಷಣೆ.

ಏರಿಕೆಯಾಗಲಿರುವ ವಸ್ತುಗಳು :-

ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಈ ಸಲದ ಬಜೆಟ್’ನಲ್ಲಿ ಮೊಬೈಲ್ ಫೋನ್ ಮೇಲಿನ ಅಬಕಾರಿ ಸುಂಕವನ್ನು 15% ನಿಂದ 20% ಗೆ ಏರಿಸಲಾಗಿದೆ. ಅಲ್ಲಿಗೆ ಆ್ಯಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಭಾರತದಲ್ಲೇ ಉತ್ಪಾದಿಸುವ ಮೊಬೈಲ್ ಫೋನ್‍ಗಳ ಬೆಲೆಗೆ ಅಂತರ ಹೆಚ್ಚಲಿದೆ.

ಏರಿಕೆಯಾಗಲಿದೆ ಐಫೋನ್

ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಟಿ.ವಿಗಳ ಬೆಲೆ ಏರಿಕೆ :-

ಟಿ.ವಿ  ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ.

ಪೆಟ್ರೋಲ್,ಡೀಸೆಲ್

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರು. ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು 6 ರುಪಾಯಿ ಇಳಿಸುವುದಾಗಿ ಜೇಟ್ಲಿ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು.ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಇಳಿಕೆ ಮಾಡಿದ್ದರೂ. ರಸ್ತೆ ಮತ್ತು ಮೂಲ ಸೌಕರ್ಯ ಹೆಸರಲ್ಲಿ 8 ರೂ. ಹೊಸ ಸೆಸ್ ಹಾಕುವ ಮೂಲಕ ದರವನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಏನು ಕೊಡುಗೆ….

ಶಿಕ್ಷಣ ಕೇತ್ರದಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

  • ಹೊಸ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
  • 2012ರ ವೇಳೆಗೆ ಶಿಕ್ಷಣದಲ್ಲಿ ಮೂಲಸೌಕರ್ಯ ಹಾಗೂ ವ್ಯವಸ್ಥೆ ಪುನಶ್ಚೇತನ (RISE) ಮರು ಜಾರಿ
  • ಕಪ್ಪು ಹಲಗೆಗಳ ಬದಲು ಡಿಜಿಟಲ್‌ ಬೋರ್ಡ್‌ಗಳ ಬಳಕೆ
  • ಶಿಕ್ಷಕರಿಗೆ ಕೇಂದ್ರ ಸರ್ಕಾರದಿಂದ ತರಬೇತಿ
  • ಬುಡಕಟ್ಟು ಹಾಗೂ ಆದಿವಾಸಿ ಮಕ್ಕಳಿಗಾಗಿ ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳ
  • ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ಶಾಲೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಯುವಕನ ಕಣ್ಣೀರು ನೋಡಿ ಕರಗಿದ ಕಳ್ಳರು, ಕಿತ್ತುಕೊಂಡ ಹಣ ಮತ್ತು ವಸ್ತುಗಳು ವಾಪಸ್.

    ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ. ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು…

  • ಆರೋಗ್ಯ

    ಶೇಂಗಾವನ್ನು ನೀರಿನಲ್ಲಿ ನೆನೆಸಿ ತಿಂದರೆ ಇಷ್ಟೊಂದು ಪ್ರಯೋಜನನಾ! ಈ ಅರೋಗ್ಯ ಮಾಹಿತಿ ನೋಡಿ.

    ನಾವು ಸಾಮಾನ್ಯವಾಗಿ ಹೊಣಗಿದ ಅಥವಾ ಬೇಯಿಸಿದ ಶೇಂಗಾ ತಿನ್ನುವುದೇ ಜಾಸ್ತಿ ಆದರೆ ಅದೇ ಶೇಂಗಾವನ್ನು ನೀರಿನಲ್ಲಿ ನೆನೆಸಿ ತಿಂದರೆ ಹಲವಾರು ಆರೋಗ್ಯಕಾರಿ ಲಾಭಗಳಿವೆ. ಕ್ಯಾನ್ಸರ್‌ ಸೆಲ್‌ ದೊಡ್ಡದಾಗುವುದಕ್ಕೆ ತಡೆ :ನೀರಿನಲ್ಲಿ ನೆನೆಸಿದ ಶೇಂಗಾ ಸೇವನೆ ಮಾಡೋದರಿಂದ ಕ್ಯಾನ್ಸರ್‌ ಸೆಲ್ಸ್‌ ದೊಡ್ಡದಾಗೋದನ್ನು ತಡೆಯಬಹುದು. ಜೊತೆಗೆ ಬ್ಲಡ್‌‌ ಸರ್ಕ್ಯುಲೇಶನ್‌ ಚೆನ್ನಾಗಿ ಆಗುವಂತೆ ಮಾಡುತ್ತದೆ. ನಿಮ್ಮ ಮಸಲ್ಸ್‌ ಆಕರ್ಷಕವಾಗುತ್ತದೆ :ಕೆಲವೊಮ್ಮೆ ಶರೀರದಲ್ಲಿ ಹೇಗೇಗೊ ಮಸಲ್ಸ್‌‌ ಬರುತ್ತದೆ. ಇದರಿಂದ ನಿಮ್ಮ ಲುಕ್‌ ಹಾಳಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ನೀವು ಪ್ರತಿದಿನ ಶೇಂಗಾವನ್ನು ನೀರಿನಲ್ಲಿ…

  • ರೆಸಿಪಿ

    ಆನೇಕ ರೀತಿಯ ಬಗೆ ಬಗೆಯ ಇಡ್ಲಿಗಳು ಮಾಡುವುದು ಹೇಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ದಕ್ಷಿಣ ಭಾರತದ ಪ್ರಮುಖ ಬ್ರೇಕ್‌ಫಾಸ್ಟ್‌ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್‌ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್‌ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.

  • ವಿಸ್ಮಯ ಜಗತ್ತು

    ಇವರು ಮದುವೆಯಾಗಿದ್ದು ಒಂದು ಪ್ರಾಣಿ ಜೊತೆ..!ಆ ಪ್ರಾಣಿ ಯಾವುದು ಗೊತ್ತಾ?

    ನಮ್ಮ ದೇಶದಲ್ಲಿ ಮಳೆ ಬರುವಂತೆ ಪ್ರಾರ್ಥಿಸಿ ಕತ್ತೆ, ಕಪ್ಪೆ ಹಾಗೂ ಇತರ ಪ್ರಾಣಿಗಳ ಜೊತೆ ಮಾಡುವೆ ಮಾಡುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳ ಜೊತೆ ಮದುವೆ ಮಾಡಿಕೊಂಡು ಮೆರೆವಣಿಗೆ ಮಾಡೋದು ಎಲ್ಲರಿಗು ಗೊತ್ತಿರುವ ವಿಚಾರ.ಹೀಗೆ ವಿದೇಶಗಳಲ್ಲಿ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿವೆ.

  • ಜೀವನಶೈಲಿ

    ಬಾರ್ಬಿಯಂತೆ ಕಾಣಲು ತಿಂಗಳಿಗೆ ಈ ಯುವತಿ ಭಾರೀ ಹಣ ಖರ್ಚು..!ತಿಳಿಯಲು ಈ ಲೇಖನ ಓದಿ…

    ಬಾರ್ಬಿ ಡಾಲ್ ಅನ್ನು ಎಲ್ರೂ ಇಷ್ಟಪಡ್ತಾರೆ. ಕೆಲವು ಯುವತಿಯರು ಬಾರ್ಬಿಯಂತೆ ಸ್ಲಿಮ್ & ಬ್ಯೂಟಿಫುಲ್ ಆಗಿ ಕಾಣಲು ಸರ್ಕಸ್ ಮಾಡ್ತಾರೆ. ಇದಕ್ಕಾಗಿ ಚಿತ್ರ ವಿಚಿತ್ರ ಕಾಸ್ಮೆಟಿಕ್ ಚಿಕಿತ್ಸೆ ತೆಗೆದುಕೊಳ್ತಾರೆ.ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.

  • ಸುದ್ದಿ

    ಎಸ್ ಬಿಐ ಬ್ಯಾಂಕ್ ಗ್ರಾಹಕರಿಗೊಂದು ಶುಭ ಸುದ್ದಿ,.!

    ನವದೆಹಲಿ,  ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (ಎಸ್ ಬಿಐ) ಗೃಹ ಸಾಲ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆ.10ರಿಂದ ಅನ್ವಯವಾಗಲಿದೆ. ಜೊತೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20…