ಸಿನಿಮಾ

ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸ್ಸಿದ ಭಾರತೀಯಾ ಸಿನಿಮಾ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ..

162

ಬಾಲಿವುಡ್‌ನ ‘ಮಿಸ್ಟರ್ ಫರ್ಫೆಕ್ಟ್’ ಆಮಿರ್ ಖಾನ್ ಅಭಿ ನಯದ ‘ದಂಗಲ್’ ಚೀನಾದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ದಂಗಲ್ ಮೂಲಕ ಆಮಿರ್ ಖಾನ್ ದಿನಬೆಳಗಾಗುವುದರೊಳಗೆ ಚೀನಾದಲ್ಲಿ ಮನೆ ಮಾತಾಗಿದ್ದರು. ಇದೀಗ ಆಮಿರ್‌ಖಾನ್ ನಿರ್ಮಾಣದ ‘ಸೀಕ್ರೆಟ್ ಸೂಪರ್‌ಸ್ಟಾರ್’ ಕೂಡಾ ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಕಳೆದ ವಾರ ಚೀನಾದ ಪ್ರಮುಖ ನಗರಗಳಲ್ಲಿ ಬಿಡುಗಡೆಗೊಂಡಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’, ಮೂರೇ ದಿನಗಳಲ್ಲಿ 174 ಕೋಟಿ ರೂ. ಬಾಚುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಆ ಮೂಲಕ ಮೊದಲವಾರದ ಗಳಿಕೆಯಲ್ಲಿ ಅದು ದಂಗಲ್ ಚಿತ್ರದ ದಾಖಲೆಯನ್ನು ಮುರಿದಿದೆ.

ಅಂದಹಾಗೆ, ಭಾರತದಲ್ಲಿಯೂ ‘ಸೀಕ್ರೆಟ್ ಸೂಪರ್‌ಸ್ಟಾರ್’ನ ಮೊದಲ ವಾರದ ಗಳಿಕೆ ಕೇವಲ 30 ಕೋಟಿ ರೂ.ಯಾಗಿತ್ತು. ಕೇವಲ 15 ಕೋಟಿ ವೆಚ್ಚದಲ್ಲಿ ತಯಾರಾಗಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’ಗೆ ಚೀನಾ ಪ್ರೇಕ್ಷಕರು ಫಿದಾ ಆಗಿರುವುದು ಬಾಲಿವುಡ್ ಚಿತ್ರಮಂದಿಯನ್ನು ದಂಗುಬಡಿಸಿದೆ.

ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಗೊಂಡ ದಂಗಲ್ 1,100 ಕೋಟಿ ರೂ. ಬಾಚಿತ್ತು. ಈ ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಆಮಿರ್, ಆ ದೇಶದಲ್ಲೂ ಜನಪ್ರಿಯ ನಟನೆನಿಸಿಕೊಂಡಿದ್ದಾರೆ. ಇದಕ್ಕೂ ಮುಂಚೆ ಆಮಿರ್ ಅಭಿನಯದ 3 ಇಡಿಯಟ್ಸ್ ಹಾಗೂ ಪಿಕೆ ಕೂಡಾ ಭಾರೀ ಯಶಸ್ಸು ಕಂಡಿದ್ದವು.

ದಂಗಲ್ ಹುಡುಗಿ ಝೈರಾವಾಸಿಂ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’, ಮುಸ್ಲಿಂ ಬಾಲಕಿಯೊಬ್ಬಳು ಹಲವಾರು ಅಡೆತಡೆಗಳನ್ನು ಮೀರಿ, ಪ್ರಖ್ಯಾತ ಗಾಯಕಿಯಾಗುವ ರೋಚಕ ಕಥೆಯನ್ನು ಹೊಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಶಾಲೆಯ ಎಲ್ಲ ಮಕ್ಕಳಿಗೂ ಸೈಕಲ್ ಕೊಡಿಸಲು ಈ ಶಿಕ್ಷಕಿ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.

  • ಸುದ್ದಿ

    ರಾಜಸ್ಥಾನದ ಈ ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ಪದ್ದತಿ…ಯಾಕೆ ಗೊತ್ತ?

    ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…

  • ಆರೋಗ್ಯ

    ಕರಬೂಜ ಹಣ್ಣು ತಿನ್ನೋದ್ರಿಂದ ,ಆಗುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಕರಬೂಜ ಹಣ್ಣಿಗೆ ತನ್ನದೇ ಆದ ಸುಗಂಧವಿದೆ. ತನ್ನದೇ ರುಚಿಯೆದೆ. ಕಳಿತ ಹಣ್ಣು ಮೃದುವಾಗಿರುತ್ತದೆ. ಈ ಹಣ್ಣಿಗೆ ಇಂಗ್ಲಿಷ್ ಹೆಸರು ಮಸ್ಕ್ ಮಿಲನ್, ಸಸ್ಯಶಾಸ್ತ್ರೀಯವಾಗಿ ‘ ಕುಕ್ಕುಮೀಸ್ ಮೆಲೊ’ ಎನ್ನುತ್ತಾರೆ.

  • ಸುದ್ದಿ

    ಮರದಲ್ಲೇ ಕುರ್ಚಿ ಬೆಳೆಯುವ ಪದ್ಧತಿ ಬಗ್ಗೆ ನಿಮಗೆಷ್ಟು ಗೊತ್ತು.?? ಇದರಿಂದಾಗುವ ಲಾಭಗಳೇನು ಗೊತ್ತೇ….

    ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ. ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ…

  • ಸುದ್ದಿ

    ಬೆತ್ತಲೆಯಾಗಿಯೇ ಇಡೀ ಏರ್ ಪೋರ್ಟ್’ನಲ್ಲಿ ಸುತ್ತಾಡಿದ ಯುವತಿ.!ಈ ವಿಡಿಯೋ ನೋಡಿ.ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

    ಮಹಿಳೆಯೊಬ್ಬಳು ಏರ್ ಪೋರ್ಟ್ ಒಂದರಲ್ಲಿ ಬೆತ್ತಲೆಯಾಗಿ ಓಡಾಡಿದ್ದು, ಏರ್ ಪೋರ್ಟ್’ನಲ್ಲಿ ಇದ್ದವರಿಗೆ ಮುಜುಗರವಾಗುವಂತೆ ಮಾಡಿದೆ. ಹೌದು, ಇದು ನಡೆದಿದ್ದು ಕೊರಿಯಾದ ಏರ್ ಪೋರ್ಟ್ ಒಂದರಲ್ಲಿ.ಸಾಮಾನ್ಯವಾಗಿ ಏರ್ ಪೋರ್ಟ್’ನಲ್ಲಿ  ಅಧಿಕಾರಿಗಳು ಎಲ್ಲರನ್ನೂ ಚೆಕ್ ಮಾಡಿಯೇ ಮುಂದೆ ಕಳುಹಿಸುತ್ತಾರೆ.ಆದರೆ ಅಧಿಕಾರಿಗಳು ಇಲ್ಲೊಬ್ಬ ಚೀನಿ ಮಹಿಳೆಗೆ ಚೆಕ್ ಮಾಡುವ ವೇಳೆ ಅವಳ ಬಟ್ಟೆ ಬರೆಗಳನ್ನೆಲ್ಲಾ ಬಿಚ್ಚಿಸಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗ್ತೀರಾ… ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ಆ ಮಹಿಳೆ, ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲದಂತೆ, ಇಡೀ ಏರ್…

  • ಸುದ್ದಿ

    ಸರ್ಕಾರಿ ಶಾಲೆ ಒಂದರಲ್ಲಿ ಬಿಸಿ ಊಟದಲ್ಲಿ ಹಾವು ಪತ್ತೆ…ಎಲ್ಲಿ ಗೊತ್ತೇ?

    ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳ ಬಿಸಿ ಊಟದಲ್ಲಿ ಹಾವು ಬಿದ್ದಿರುವ ಘಟನೆ ನಡೆದಿದೆ. ಈ ಶಾಲೆಗೆ ಊಟ ಸರಬರಾಜು ಮಾಡುತ್ತಿದ್ದದ್ದು ಒಂದು ಸರ್ಕಾರೇತರ ಖಾಸಗಿ ಸಂಸ್ಥೆ ಯಾಗಿದ್ದು , ಇದು ಶಾಲೆಗೆ ಕಳುಹಿಸಿಕೊಟ್ಟ ಆಹಾರದಲ್ಲಿ ಹಾವು ಇರುವುದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಸುದ್ಧಿ ವರದಿಯಾಗಿದ್ದು ಈ ಕುರಿತು ವಿಚಾರಣೆ ನಡೆಸಿ ಆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಗಾರ್ಗವನ್…