ಉಪಯುಕ್ತ ಮಾಹಿತಿ

ಹಿಮ್ಮಡಿಗಳ ಬಿರುಕಿನ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

3472

ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ನಿಮ್ಮ ನೆಚ್ಚಿನ ಪಾದರಕ್ಷೆ ಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೋ ಸಂದ ರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ?

ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದ ರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕು ಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ.

ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ.

ಕ್ರಮೇಣ  ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ. ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರ ವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದ ರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲ ಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣ ಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ಜವಾದ ಚರ್ಮವನ್ನು ಹರಿದು ರಕ್ತಬರಿಸಬಹುದು.

ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ.

ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು.

ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೇ ಉತ್ತಮ.

ಬನ್ನಿ, ಈ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾದಮನೆಮದ್ದು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:-

ಅಗತ್ಯವಿರುವ ಸಾಮಾಗ್ರಿಗಳು:-

* ಓಟ್ಸ್ ಅಥವಾ ಓಟ್ ಮೀಲ್ – ಎರಡು ದೊಡ್ಡ ಚಮಚ

* ಲಿಂಬೆ ರಸ – ಒಂದು ದೊಡ್ಡ ಚಮಚ

* ಉಪ್ಪು- ಎರಡು ಚಿಕ್ಕ ಚಮಚ

ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವ ಕೋಶವನ್ನು ಬೇರೆ ಬೇರೆ ಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ.

ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶ ಗಳನ್ನು ತಮ್ಮೊಂದಿಗೆ ಅಂಟಿಸಿ ಕೊಂಡು ಹೊರ ಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳ ದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ.

ತಯಾರಿಕಾ ವಿಧಾನ:-

* ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

* ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿ ನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನ್ನು ಮುಳುಗಿಸಿಡಿ.

* ಬಳಿಕ ಪಾದಗಳನ್ನು ನೀರಿನಿಂದ ಹೊರ ತೆಗೆದು ಟವೆಲ್‌ನಿಂದ ಒರೆಸಿಕೊಳ್ಳಿ.

* ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ.

* ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ.

* ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಕೊಳ್ಳಿ.

* ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳು ಬಿಸಿ ನೀರಿನಲ್ಲಿ ಮುಳುಗಿಸಿಡಿ.

* ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂಬಹುದು.

* ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

    ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ.

  • ಸುದ್ದಿ

    ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು,ಡಿಲೀಟ್ ಮತ್ತು ತಿದ್ದುಪಡಿ ಮಾಡಲು ಅವಕಾಶ,ಇಲ್ಲಿದೆ ನೋಡಿ ಎಲ್ಲಾ ಮಾಹಿತಿ,.!

    18 ವರ್ಷಆಗಿರುವಯುವಕ-ಯುವತಿಯರೇ…  ನೀವು ಇನ್ನೂ ಮತದಾನದ ಹಕ್ಕು ಪಡೆದುಕೊಂಡಿಲ್ಲವೇ?,ಪಡೆದಿದ್ದರೂ ಏನಾದ್ರೂ ತಿದ್ದುಪಡಿಮಾಡಬೇಕೆ?ಚಿಂತೆಮಾಡ್ಬೇಡಿ.ಅಗತ್ಯ ದಾಖಲೆಗಳೊಂದಿಗೆ ರೆಡಿಯಾಗಿರಿ.ನಿಮ್ಮಮನೆಗೆ ಬಂದು ಮತದಾರರ ಪಟ್ಟಿಗೆ ಹೆಸರು ಬರೆದುಕೊಂಡುಹೋಗುತ್ತಾರೆ.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದು ಉತ್ತಮ ಅವಕಾಶವಾಗಿದೆ.ಮಿಸ್ಮಾಡ್ಕೋಬೇಡಿ.ಹಾಗಿದ್ರೆ ಇದಕ್ಕೆ ದಾಖಲಾತಿಗಳೇನುಬೇಕು ಅಂತೀರಾ?ಮುಂದೆ ಓದಿ ಎಲ್ಲಾ ಮಾಹಿತಿ ಇದೆ. ಬೆಂಗಳೂರು, ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ…

  • ರಾಜಕೀಯ

    ಸಿದ್ದರಾಮಯ್ಯ ಮಣಿಸಲು ಕೋಲಾರ ಜನ ಶಪಥ! ಸಂಸದ ಮುನಿಸ್ವಾಮಿ

    ‘ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ನಾಯಕ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಂದರೂ ಭಯವಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಕ್ಷೇತ್ರದ ಜನ ಶಪಥ ಮಾಡಿದ್ದಾರೆ! ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ವರ್ತೂರು ಪ್ರಕಾಶ್‌ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಹಳ್ಳಿಹಳ್ಳಿಗೂ ಹೋಗಿ ಜನರ ಕಷ್ಟ ಆಲಿಸುತ್ತಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಕೆಲಸ ಮಾಡುವವರಿಗೆ…

  • ಜೀವನಶೈಲಿ

    ನಿಮ್ಮ ‘ಬಾತ್ ರೂಂ’ ಸ್ವಚ್ಛವಾಗಿದ್ದರೆ ದೂರವಾಗುತ್ತೆ ನಿಮ್ಮ ಬಡತನ ..!ತಿಳಿಯಲು ಈ ಲೇಖನ ಓದಿ …

    ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

  • ಜ್ಯೋತಿಷ್ಯ

    ಶ್ರೀ ಗುರುರಾಯರನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿಅತ್ಯಂತ ಪ್ರಭಾವಿ…

  • ಸುದ್ದಿ

    ಮೊಬೈಲ್ ನಂಬರ್ ಬದಲಿಸುವ ಮುನ್ನ ಹೆಚ್ಚರ!..ಈ ಸುದ್ದಿ ತಿಳಿದರೆ ನಡುಕ ಹುಟ್ಟಿಸುತ್ತಿದೆ!

    ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೌದು, ಅಶ್ರಫ್ ಅವರು…