ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ, ಟಕಿಲ,ಜಸ್ಟ್ ಲವ್ ಮತ್ತು ಪರವಶನಾದೇನು ಹಾಡಿಗೆ ಸಮ್ಮತಿ ಸೂಚಿಸಿದರು..

ಮೊದಲಿಗೆ ಕಿಚನ್ ಏರಿಯಾದಲ್ಲಿ ಶೃತಿಯವರು ಲಿಪ್ ಬಾಮ್ ಕಳಿಸಿದ್ದಕ್ಕೆ ಧನ್ಯವಾದ ಹೇಳಿದರು.
ದಿವಾಕರ್ ಅವರು ಸಕ್ಕರೆ ಖಾಲಿಯಾದ ಕಾರಣಕ್ಕೆ ಹಾಲಿಗೆ ಜಾಮೂನು ಪಾಕವನ್ನು ಸುರುವಿ ಕುಡಿದರು..

“ಸವಿ-ಸವಿ ನೆನಪು” ಚಟುವಟಿಕೆಯಲ್ಲಿ ಕ್ಯಾನ್‌ವಾಸ್ ಕುಂಚದ ಮೇಲೆ ಬಣ್ಣವನ್ನು ಬಳಸಿ ಆಟೋಗ್ರಾಫ್ ರಚಿಸುವುದಾಗಿತ್ತು.. ಎಲ್ಲ ಸದಸ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಆಟೋಗ್ರಾಫ್ ರಚಿಸಿದರು.. ಅದರಲ್ಲಿ ಚಂದನ್ ಮತ್ತು ಜೆಕೆಯವರ ಆಟೋಗ್ರಾಫ್ ಸೃಜನಾತ್ಮಕವಾಗಿತ್ತು..

ಈ ವೇಳೆಯಲ್ಲಿ ನಿವೇದಿತಾ ಅವರು ಪೇಂಟ್ ಸುರುವಿ ಹೋಗಿದ್ದಕ್ಕೆ ಕಣ್ಣೀರು ಹಾಕಿದ್ದು ತರ್ಕಕ್ಕೆ ನಿಲುಕದ್ದು. ಈ ಹುಡುಗಿ ಇಷ್ಟೊಂದು ಸೂಕ್ಷ್ಮವಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ!

“ನನ್ನ ಬಿಗ್‌ಬಾಸ್ ಮನೆ” ಚಟುವಟಿಕೆಯಲ್ಲಿ ಬಿಗ್‌ಬಾಸ್ ಕೇಳಿದ 30ಪ್ರಶ್ನೆಗಳಲ್ಲಿ ಜೆಕೆಯವರು 15, ಶೃತಿ-ದಿವಾಕರ್ 10, ಮತ್ತು ಚಂದನ್ -ನಿವೇದಿತಾ 14 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು.

“ನನ್ನ ಹಾಡು ನನ್ನದು” ಉಳಿದ ಮೂರು ದಿನಗಳಲ್ಲಿ ಬೆಳಿಗ್ಗೆ ಹಾಕುವ ಮೂರು ಹಾಡನ್ನು ಸೂಚಿಸಲು ಬಿಗ್‌ಬಾಸ್ ಹೇಳಿದ್ದರು..ಆಗ ಚಂದನ್ ತಮ್ಮ ಟಕೀಲ ಸಿನಿಮಾದ ಹಾಡು ಮತ್ತು ಜೆಕೆ ತಮ್ಮ ಜಸ್ಟ್ ಲವ್ ಚಿತ್ರದ ಹಾಡಿಗೆ ಸಮ್ಮತಿ ಸೂಚಿಸಿದರು..

ನಿವೇದಿತಾ : ಮೆಲೊಡಿ ಸಾಂಗ್ ಇರಲಿ
ದಿವಾಕರ್: ಯಜಮಾನ ಮೂವಿ ನಮ್ಮ ಮನೆಯಲಿ ಸಾಂಗ್ ಇರಲಿ
ನಿವೇದಿತಾ: ವಿಷ್ಣುವರ್ಧನ್ ಅವರದ್ದೇ ಯಾವುದಾದರೂ ಮೆಲೊಡಿ ಸಾಂಗ್ ಹೇಳಿ.
ದಿ: ೩ದಿನವಾದ್ಮೇಲೆ ಮೆಲೊಡಿ ಸಾಂಗ್ ಹಾಕಿಸಿಕೊಡ್ತಿನಿ ಬಿಡು.. ಇವಾಗ ಇದು ಇರಲಿ..
ನಿವೇದಿತಾ: actually daily ಈ ಸಾಂಗ್ ಹಾಕಿ ಅಂತ ಬಿಗ್‌ಬಾಸ್ ಗೆ ಕೇಳ್ತಿದ್ದೆ.
ಜೆಕೆ: ನಂದು ಬೇಡ, ವಿಷ್ಣು ದು,ಟಕೀಲ, ಮೆಲೊಡಿ ಇರಲಿ.
ನಿವೇದಿತಾ:no problem ಯಾವುದಾದರೂ ಹಾಕೊಳ್ಳಿ!
ಚಂ: ಟಕೀಲ ಬೇಡ, ಫೀನಾಲೆಗೆ ಹಾಕೋಣ..
ದಿ: ಇವಳ್ದೆ ಹಾಕಿ, ನಂದು ಮನೆಗೆ ಹೋಗಿ ಕೇಳ್ಕೊತೀನಿ.
ನಿವೇದಿತಾ: ಇಷ್ಟೊತ್ತು ನೀವು ಹೇಳಾಯ್ತಲ್ವಾ!(ಇಲ್ಲಿಂದ ಶುರುವಾಯ್ತು)
ದಿ: ನೀ ಮುನಿಸ್ಕೊತಿಯಲ್ಲ..
ನೀ: ನೀನೇ ಮುನಿಸ್ಕೊಂಡು ರೇಗಾಡ್ತಿದೀಯಾ!
ದಿ: ನೀನು ಮಾತಾಡೋಕೆ ಬಿಟ್ರೆ ಮಾತಾಡಿಬಿಡ್ತಿಯಾ!
ನೀ: ಏನು ಹೇಳಿದ್ದು.
ದಿ: ಇಂತದ್ದು ಮಾತಾಡೋಕೆ ಬಿಟ್ರೆ ಮಾತಾಡ್ತಿಯಾ..
ನೀ: ಸುಮ್ನೆ ರೇಗಾಡ್ತಾರೆ.. ಒಂದು ಒಳ್ಳೆಯದು ಹೇಳ್ತಿದ್ರೆ!
ದಿ: ಸುಮ್ನೆ ತಲೆ ತಿಂತಾಳೆ!
ನೀ: ನೀವ್ಯಾಕೆ ತಲೆ ಕೊಡ್ತಿರಿ ನನಗೆ ತಿನ್ನೋಕೆ
ದಿ: ಮೆಂಟಲ್ ತರ ಆಡಬಾರದು.
ನೀ: ಯಾರ್ ಮೆಂಟಲ್ ಯಾರ್ ಮೆಂಟಲ್, ಮೆಂಟಲ್-ಗಿಂಟಲ್ ಅಂತೆಲ್ಲ ಹೇಳಬಾರ್ದು ಚಂದನ್
ದಿ: ಹೇಳು ಮಗ ಚಂದನ್ ಸಾಂಗ್ ಅವಳದ್ದೆ
ನೀ: ಯಾರು ಹೇಳ್ತಾರೆ ಅವರೇ ಮೆಂಟಲ್ ಆಗಿರ್ತಾರೆ.
ದಿ: ಏನ್ ಕಂಯ್ಯಾ ಕಂಯ್ಯಾ ಅಂತೀಯಾ
ನೀ: ಕಂಯ್ಯಾ ಕಂಯ್ಯಾ ಮಾಡಿಸ್ತಿರೋದು ಯಾರು..
ಬೇಗ ಹೇಳಿ
ಚಂ: ಜೆಕೆ ಲೈನ್ ಹಾಡ್ಬೇಕಂತೆ ಬನ್ನಿ, ನೀವಿ ನೀನು ಬಾ
ನೀ: ನಾನು ಬರಲ್ಲ
ಚಂ: ಏ!
ನೀ: ಎದ್ದು ಬರುತ್ತಾ, ತಲೆ ತಿಂತಾರೆ ಅಂತ ಯಾಕೆ ಕೊಡ್ಬೇಕು.
ದಿ: ಏನಾದರೂ ಹೊಸದು ಹೇಳು, ಹೇಳಿದ್ದೆ ಹೇಳ್ತಿಯಲ್ಲ.
ನೀ: ಚಂದನ್ ಗೆ ಹೊಡೆಯುತ್ತಿದ್ದಾಗ
ದಿ: ಸಿಟ್ಟು ಬಂದು ಹೊಡೆಯೋದಂತೆ..
ನೀ: ಚಂದನ್ ನಕ್ಕಿದ್ದಕ್ಕೆ ಹೊಡೆದಿದ್ದು, ನಿಮ್ಮ ಮೇಲಿನ ಸಿಟ್ಟಿಗೆ ಹೊಡೆದಿಲ್ಲ..
ದಿ: ಬೊರ್ ಹೊಡೆಯುತ್ತೆ ಜನರಿಗೆ.
ನೀ: ವಾಯಲಿನ್ ತರ ಕುಯ್ತಾರೆ.. ವಿಶ್ ಹೇರ್ ಬಂತು.
ಯಾರ ಸಾಂಗ್ ಕೂಡ ಪ್ಲೆ ಮಾಡ್ಬೇಡಿ. ನನ್ನ ಸಾಂಗ್ ಪ್ಲೆ ಮಾಡಿ..
ದಿ: ಹೊಟ್ಟೆ ಉರಿ
ನೀ: ನಾನು ನಿಮ್ಮ ಸಾಂಗ್ ಹಾಕ್ಬೇಡ ಅಂದ್ನಾ? ವಿಶ್ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಕರ್ಸ್ ಆಗುತ್ತೆ..
ದಿ: ಡಬ್ಬ ಎಲ್ಲ ಹೇಳ್ಬೇಡ, ನೀನು ಡವ್ ರಾಣಿ,ದಡ್ಡಿಯಂತೂ ಅಲ್ಲ,ಬುದ್ಧಿವಂತೆ.
ನೀ: ಚಂದನ್ ಕೈಯಿಂದ ಬಿಡಿಸಿಕೊಂಡು ಅಳ್ತಾ ಬೆಡ್‌ರೂಮ್ ಏರಿಯಾಗೆ ಹೋಗಿ ಅಲ್ಲಿಂದ ಕ್ಯಾಪ್ಟನ್ ರೂಮಿಗೆ ಹೋಗ್ತಾರೆ..

ಅಲ್ಲಿ ಚಂದನ್ ಅವರು ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆಹರಿಸ್ತಾರೆ..
ಅಂತೂ-ಇಂತೂ ವಿಷ್ಣುವರ್ಧನ್ ಹಾಡು ಕ್ಯಾನ್ಸಲ್ ಆಗೋಯ್ತು..ಇಲ್ಲಿ ಯಾರ ತಪ್ಪಿದೆ ನೀವೆ ನಿರ್ಧರಿಸಿ..
ಕೃಪೆ:ಉದಯ

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ. ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿ ದಿನ…
ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.
ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.
‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…
2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಂಡು ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ರಮೇಶ್ 3.2 ಕೋಟಿ ರೂ.ಮೌಲ್ಯದ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರನ್ನ ಕೊಂಡುಕೊಂಡಿದ್ದಾರೆ.ಜರ್ಮನಿಯಿಂದ ಆಮದು ಮಾಡಿಕೊಂಡಿರೋ ಈ ಕಾರ್ ಬೆಂಗಳೂರಿನಲ್ಲಿ ವಿಜಯ್ ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿ ಬಳಿ ಬಿಟ್ಟರೆ ಈಗ ರಮೇಶ್ ಅವರ ಬಳಿ ಮಾತ್ರ ಇರೋದು.
ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಯೊಬ್ಬರು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಎಂಬವರು ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದರೆ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ದೀಪಿಕಾ ತಮ್ಮ…