ಸ್ಪೂರ್ತಿ

51ವರ್ಷದ ಮಹಿಳೆ ಮಾಡಿರುವ ಸಾಧನೆಯ ಬಗ್ಗೆ ನೀವು ತಿಳಿದ್ರೆ ಅಚ್ಚರಿ ಪಡೋದ್ರಲ್ಲಿ ಡೌಟ್ ಇಲ್ಲ.!

391

ಸಾಧನೆ ಅನ್ನೋದು ಸುಲಭದ ಮಾತಲ್ಲ. ‘ಆಗುವುದಿಲ್ಲ ಅನ್ನೋ ಮಾತನ್ನು ಬಿಟ್ಟು ಆಗುತ್ತೆ’ ಅನ್ನೋ ದಾರಿಯನ್ನು ಹುಡುಕಿದಾಗ ಮಾತ್ರ ಆ ಸಾಧನೆಯನ್ನು ಮಾಡಲು ಸಾಧ್ಯವಾಗುವುದು ಹಾಗು ಅದಕ್ಕೆ ಪ್ರತಿಫಲ ಸಿಗುವುದು.ಕಣ್ರೀ ನಾವು ನಿಮಗೆ ಹೇಳಲು ಹೊರಟಿರುವ ಕಥೆ ಎಲ್ಲರ ಕಣ್ಣು ಹುಬ್ಬೇರಿಸುವ ರೀತಿಯಲ್ಲಿರುವ ಕಥೆ ಇದು.

ಎಲ್ಲೋ ಬೇರೆ ದೇಶದಲ್ಲಿ ನಡೆದಿರುವಂತದಲ್ಲ ನಮ್ಮ ಹೆಮ್ಮೆಯ ಕರ್ನಾಟಕದಲ್ಲೇ ನಡೆದಿರುವಂತದ್ದು. ಈಗೇನೋ ಜನ ಮಳೆ ಬೇಡ ಅನ್ನುತ್ತಿದ್ದಾರೆ. ಈ ಹಿಂದೆ ಮಳೆ ಇಲ್ಲದೆ ಜನ ಬರಗಾಲ ಬಿಳತ್ತೆನೋ ಅನ್ನೋ ಭಯದಲ್ಲಿದ್ದರು, ಅಂದು ಜಲಪ್ರಳಯ ಆಗ ಭಯದಲ್ಲಿದ್ದರು.

ಈ ಹಿಂದೆ ಮಳೆ ಇಲ್ಲದ ಸಂದರ್ಭದಲ್ಲಿ, ಎಷ್ಟೋ ಅಡಿಕೆ ಗಿಡಗಳು ಒಣಗಿ ಹೋಗಿದ್ದವು. ಅಂತಹ ಸಂದರ್ಭದಲ್ಲಿ ಇವರು ಮಾಡಿದಂತ ಕೆಲಸ ಎಂತದ್ದು ಅಂದರೆ ನೀವು ಅಚ್ಚರಿ ಪಡುತ್ತೀರ. ಇವರ ಹೆಸರು ಗೌರಿ ನಾಯಕ್​. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಎಕರೆ ತೋಟ ಇದೆ. ಅದಕ್ಕೆ ನೀರು ಬೇಕು ಅನ್ನಿಸಿದಾಗ, ತಾವೇ ಸಲಕರಣೆ ಹಿಡಿದು 60 ಅಡಿ ಬಾವಿ ತೋಡಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಕೆಲಜನ ಸಲಕೆ ಮುಂತಾದ ಸಾಮಗ್ರಿಗಳನ್ನು ಹಿಡಿದು ಕೆಲಸ ಮಾಡೋಕೆ ಹಿಂದೆ ಮುಂದೆ ನೋಡುವಂತ ಕಾಲ ಇದೆ ಅಂತದ್ರಲ್ಲಿ ಇವರು ಪಾತಾಳದಿಂದ ಗಂಗೆ ಉಕ್ಕಿ ಬರೋವರೆಗೂ ಬಿಡದೇ, ಮಕ್ಕಳ ಸಹಾಯವನ್ನೂ ಪಡೆಯದೇ ದಿಟ್ಟತನ ಮೆರೆದ ಸಾಧಕಿ ಇವರು. ಇವರ ಸಾಧನೆಗೆ ಸಲ್ಯೂಟ್ ಹೊಡಿಯಲೇ ಬೇಕು ಬಿಡಿ.

ಇವರ ಸಾಧನೆಯನ್ನು ಗುರುತಿಸಿ ಕೆಲವೊಂದು ಸಂಘ ಸಂಸ್ಥೆಗಳು ಹಾಗು ಕೆಲವೊಂದು ಖಾಸಗಿ ವಾಹಿನಿಗಳು ಪ್ರಶಸ್ತಿಯನ್ನು ಕೊಟ್ಟಿದೆ ಹಾಗು ಗೌರವವನ್ನು ಸಲ್ಲಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ