inspirational, ಆರೋಗ್ಯ

ಗೆಣಸು ನಮ್ಮ ಶರೀರದ ಆಂತರಿಕ ಅಂಗಾಂಗಗಳಿಗೆ ಎಷ್ಟು ಉಪಯೋಗಕಾರಿ ಗೊತ್ತಾ..?ತಿಳಿಯಲು ಈ ಲೇಖನ ಓದಿ…

414

ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.

ಗೆಣಸು ನಮ್ಮ ಶರೀರದ ಆಂತರಿಕ ಅಂಗಾಂಗಗಳಿಗೆ ಆಗುವ ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುವ ಸ್ಪೋರಾಮಿನ್ ಪ್ರೋಟಿನ್‌ಗಳನ್ನು ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಗೆಣಸಿನ ಈ ಆರೋಗ್ಯಲಾಭಗಳು ಗೊತ್ತಾದರೆ ನೀವು ಖಂಡಿತ ನಿಮ್ಮ ಆಹಾರದಲ್ಲಿ ಅದನ್ನೂ ಸೇರಿಸಿಕೊಳ್ಳುತ್ತೀರಿ.

1.ಗೆಣಸು ಉತ್ತಮ ಉರಿಯೂತ ನಿವಾರಕ:-

ಗೆಣಸು ತನ್ನ ಪ್ರಬಲ ಉರಿಯೂತ ನಿವಾರಕ ಗುಣಕ್ಕಾಗಿ ಹೆಸರಾಗಿರುವ ಆ್ಯಂಥೊಸೈನಿನ್ ಅನ್ನು ಒಳಗೊಂಡಿದೆ. ಇದು ಅಂಗಾಂಗಗಳ ಉರಿಯೂತವನ್ನು ತಗ್ಗಿಸಿ ಅವುಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಗೆಣಸಿನಲ್ಲಿರುವ ಫೈಬ್ರಿನೋಜೆನ್ ರಕ್ತ ಹೆಪ್ಪುಗಟ್ಟಲು ನೆರವಾಗುತ್ತದೆ.

2.ವಯಸ್ಸಾಗುವಿಕೆಯ ಪರಿಣಾಮಗಳ ವಿರುದ್ಧ ರಕ್ಷಣೆ:-

ಗೆಣಸಿನಲ್ಲಿ ಕ್ಯಾರೊಟೆನಾಯ್ಡಾ ಮತ್ತು ಬಿಟಾ-ಕ್ಯಾರೊಟಿನ್ ಅಧಿಕ ಪ್ರಮಾಣದಲ್ಲಿದ್ದು, ಅವು ಶರೀರದಲ್ಲಿ ವಿಟಾಮಿನ್ ಎ ತಯಾರಿಕೆಗೆ ನೆರವಾಗುವ ಮೂಲಕ ಕಣ್ಣುಗಳ ದೃಷ್ಟಿಯನ್ನು ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತವೆ. ಪ್ರಬಲ ಉತ್ಕರ್ಷಣ ನಿರೋಧಕಗಳಾಗಿಯೂ ಕೆಲಸ ಮಾಡುವ ಅವು ನಮ್ಮ ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳ ಪರಿಣಾಮವನ್ನು ಕಡಿಮೆ ಮಾಡುತ್ತವೆ ಮತ್ತು ವಯಸ್ಸಾಗುತ್ತಿರುವುದರ ಲಕ್ಷಣಗಳನ್ನು ತಗ್ಗಿಸುತ್ತವೆ.

3.ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ:-

ನಮ್ಮ ಶರೀರಕ್ಕೆ ಅತ್ಯಗತ್ಯ ಖನಿಜವಾಗಿರುವ ಕಬ್ಬಿಣ ಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿದೆ . ಹೀಗಾಗಿ ಅದು ನಮ್ಮ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಮ್ಮ ನಿರೋಧಕ ಶಕ್ತಿಯ ಪ್ರಮುಖ ಭಾಗವಾಗಿರುವ ಬಿಳಿಯ ರಕ್ತಕಣಗಳ ಉತ್ಪಾದನೆಯಲ್ಲಿಯೂ ಅದು ನೆರವಾಗುತ್ತದೆ.

 

4.ಹೃದಯದ ಆರೋಗ್ಯಕ್ಕೆ ಒಳ್ಳೆಯದು:-

ಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಹೃದಯ ಬಡಿತವನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ನಮ್ಮ ಶರೀರದಲ್ಲಿನ ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಜೊತೆಗೆ ಗಾಯದಿಂದ ಹಾನಿಗೊಳಗಾದ ಸ್ನಾಯುಗಳು ಬೇಗನೇ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಗೆಣಸಿನಲ್ಲಿರುವ ಮ್ಯಾಗ್ನೀಷಿಯಂ ಆರೋಗ್ಯಕರ ರಕ್ತನಾಳಗಳು ಮತ್ತು ಹೃದಯದ ಸ್ನಾಯುಗಳಿಗೆ ಅಗತ್ಯವಾಗಿದೆ.

5.ಮೂಳೆಗಳನ್ನು ಆರೋಗ್ಯಯುತವಾಗಿಸುತ್ತದೆ:-

ವಿಟಾಮಿನ್ ಡಿ ಸಮೃದ್ಧವಾಗಿರುವ ಗೆಣಸು ಮೂಳೆಗಳನ್ನು ಸದೃಢಗೊಳಿಸುವಲ್ಲಿ ನೆರವಾಗುತ್ತದೆ. ಆಹಾರದ ಮೂಲಕ ದೊರೆಯುವ ಕ್ಯಾಲ್ಶಿಯಂ ಅನ್ನು ಸಂಸ್ಕರಿಸಲು ನಮ್ಮ ಶರೀರಕ್ಕೆ ವಿಟಾಮಿನ್ ಡಿ ಅಗತ್ಯವಾಗಿದೆ ಮತ್ತು ಅದು ಗೆಣಸಿನಲ್ಲಿದೆ.

6.ಚರ್ಮ ಮತ್ತು ತಲೆಗೂದಲಿನ ಆರೋಗ್ಯಕ್ಕೆ ಸಹಕಾರಿ:-

ಗೆಣಸಿನಲ್ಲಿಯ ಕೆಲವು ಸಂಯುಕ್ತಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಮೂಲಕ ವಯಸ್ಸಾಗುತ್ತಿರುವ ಲಕ್ಷಣಗಳನ್ನು ದೂರಮಾಡುತ್ತವೆ. ಚರ್ಮದಲ್ಲಿಯ ಕಪ್ಪುಕಲೆಗಳನ್ನೂ ಅವು ನಿವಾರಿಸುತ್ತವೆ. ದಪ್ಪ ತಲೆಗೂದಲಿಗಾಗಿ ಮತ್ತು ತಲೆಗೂದಲಿನ ಬೆಳವಣಿಗೆಗಾಗಿ ಶತಮಾನಗಳಿಂದಲೂ ಗೆಣಸು ಬಳಕೆಯಾಗುತ್ತಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    BSNL ಲ್ಯಾಂಡ್ ಲೈನ್ ಫೋನ್ ಬಳಸುವವರಿಗೆ ಬಹುಮಾನವಾಗಿ ಕೊಡಲಿದೆ ದುಡ್ಡು..!ಯಾಕೆ ಗೊತ್ತಾ?

    ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ. ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ…

  • KOLAR NEWS PAPER

    ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

    ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು…

  • ಉಪಯುಕ್ತ ಮಾಹಿತಿ

    ‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

    ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

  • ಉಪಯುಕ್ತ ಮಾಹಿತಿ

    ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

    ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

  • ಸುದ್ದಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಧಾಮುರ್ತಿ ದಂಪತಿಯ ಮಗ. ಇವರ ಮದುವೆ ಏಗೆ ನಡೆಯಿತು ಗೊತ್ತಾ.!

    ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು,  ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೋಹನ್ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ. ರೋಹನ್ ಮೂರ್ತಿ ಕ್ಲಾಸಿಕಲ್ ಲೈಬ್ರರಿ…

  • Histrocial, inspirational, karnataka

    ನೆಲ್ಲಿತೀರ್ಥ ಗುಹಾಲಯ ಮಂದಿರಾ – ಮಂಡೀ ಉರೀ ಶಿವನ ದರ್ಶನ

    ನೆಲ್ಲಿತೀರ್ಥ ಗುಹಾಲಯ ಮಂದಿರಾ ಇರುವುದು  ಮಂಗಳೂರು  ಕಟೀಲ್  ದುರ್ಗಾ  ಪರಮೇಶವರೀ  ದೇವಸ್ಥಾನ  ಮೂಡಬಿದ್ರಿ. ಸುಮಾರು  ೫ ಕೆ.ಮ್ ಅಷ್ಟು  ದೂರದಲೇ  ಇರುವುಧು ಈ  ಮಂದಿರ. ಇತೀಹಾಸ : ಸುಮಾರು  ೧೪೮೭ ಇತೀಹಾಸವೀರುವ  ಗುಹಾಲಯದಲೇ ಶಿವನ  ಲಿಂಗ  ಇರುವುಧು.  ೬೬೦ ಅಡೀ  ಉದ್ದಾ  ಹಾಗೂ  ೨ ಅಡೀ ಯಥರ  ಇರುವ  ಗುಹೆಯ್ಯ್ಯ ಲೀ  ಭಕತದೀಗಳು ಮಂಡೀ ಉರೀ ದರ್ಶನವನ್ನು ಪಡಯ  ಬೇಕು . ಗುಹೆಯ್ಯ್ಯ ಲೀ  ನೀರುಹರಿಯುತದೆ.ಇಲೆಯೇ ನೆಲ್ಲಿಯಾ ಗಾತ್ರಧಲೀ ಹನೀ ಹನೀಯಾಗೀ ನೀರು ಬೀಳುತದೆ. ಹಾಗಾಗೀ  ಈ …