ಆರೋಗ್ಯ

ಕರ್ಜೂರದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

657

ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.

ಕರ್ಜೂರದ ರುಚಿ ಕಂಡವರು ತಿನ್ನೋದನ್ನು ಬಿಡೋದಿಲ್ಲ. ಈ ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆ್ಯಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮಧುಮೇಹಿಗಳಿಗೆ ಇದು ಒಳ್ಳೆಯದು.

ದೇಹದಲ್ಲಿ ರಕ್ತ ಕಡಿಮೆಯಿರುವವರು ಪ್ರತಿದಿನ ಕರ್ಜೂರವನ್ನು ತಿನ್ನುವುದು ಬಹಳ ಒಳ್ಳೆಯದು. ಇದ್ರಲ್ಲಿರುವ ಕಬ್ಬಿಣಾಂಶ ರಕ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಕರ್ಜೂರದಲ್ಲಿರುವ ವಿಟಮಿನ್ ಬಿ ಕೂದಲಿಗೆ ಒಳ್ಳೆಯದು. ನಿಯಮಿತವಾಗಿ ಕರ್ಜೂರ ಸೇವನೆ ಮಾಡುವುದ್ರಿಂದ ಕೂದಲುದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್ ಸಾಕಷ್ಟಿರುತ್ತದೆ. ಹಾಗಾಗಿ ಕರ್ಜೂರ ತಿಂದ ತಕ್ಷಣ ಶಕ್ತಿ ಉತ್ಪತ್ತಿಯಾಗುತ್ತದೆ. ಎರಡರಿಂದ ನಾಲ್ಕು ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ.

ಕಡಿಮೆ ತೂಕವುಳ್ಳವರು ಅವಶ್ಯವಾಗಿ ಕರ್ಜೂರ ತಿನ್ನಬೇಕು. ಇದ್ರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಲು ಸಹಾಯ ಮಾಡುತ್ತವೆ.ಕರ್ಜೂರ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ತಾಮ್ರವನ್ನು ಒಳಗೊಂಡಿರುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.

ಮಲಬದ್ಧತೆ ಸಮಸ್ಯೆಯುಳ್ಳವರು ಅವಶ್ಯವಾಗಿ ಕರ್ಜೂರ ಸೇವನೆ ಮಾಡಬೇಕು. ರಾತ್ರಿ ನಾಲ್ಕು ಕರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ತಾಯಿ ಚಾಮುಂಡಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

    ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…

  • ಉಪಯುಕ್ತ ಮಾಹಿತಿ

    ಡಿಸೆಂಬರ್ 1ರಂದು ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ..!ಹೇಗೆ ಎಂದು ತಿಳಿಯಲು ಇದನ್ನು ಓದಿ ..

    ಹೈದ್ರಾಬಾದ್ ನಲ್ಲಿ ಡಿಸೆಂಬರ್ 1ರಂದು ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹೈದ್ರಾಬಾದ್ ಗೆ ಆಗಮಿಸ್ತಿದ್ದಾರೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ರಾಶಿಗಳಿಗೆ ವಿಪರೀತ ಧನಯೋಗವಿದ್ದು, ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಫೆಬ್ರವರಿ, 2019) ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಸುದ್ದಿ ನಿಮ್ಮ ಕುಟುಂಬದ…

  • ಸುದ್ದಿ

    ಪೇಪರ್ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಹೇಗಿದ್ದಾನೆ ಗೊತ್ತ…?

    ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…

  • ಸುದ್ದಿ

    ಮಗಳ ಮದುವೆಗೆ ಲಕ್ಷಾಂತರ ರೂ. ಸಾಲ ಮಾಡಿ ರೈಲಿಗೆ ಸಿಕ್ಕಿ ತಂದೆ ಆತ್ಮಹತ್ಯೆ…!

    ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು. ಈ ಮದುವೆ ಸಾಲದ ಜೊತೆಗೆ ಟ್ಯಾಕ್ಸಿ ಕೂಡಾ ಅಪಘಾತಕ್ಕೀಡಾಗಿತ್ತು. ಇದರಿಂದ ಚಿಂತೆಗೀಡಾಗಿದ್ದ ದಿನೇಶ್, ಉಡುಪಿಯ ಇಂದ್ರಾಳಿ ಬಳಿಯ ರೈಲ್ವೆ ಟ್ರ್ಯಾಕ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿಯಲ್ಲಿ ದುಡಿದು ಮನೆ ನಿಭಾಯಿಸುವ ಜೊತೆಗೆ ಮದುವೆಗೆ ಮಾಡಿದ್ದ ಸಾಲ…

  • ಉಪಯುಕ್ತ ಮಾಹಿತಿ

    ಆಧಾರ್ ಕಾರ್ಡ್ ನಲ್ಲಿರುವ ಈ ಮಾಹಿತಿಯನ್ನು ತಿದ್ದುಪಡಿ ಮಾಡಲು ಇರುವುದೇ ಒಂದೇ ಅವಕಾಶ ನಿಮಗೆ?

    ಆಧಾರ್ ನಲ್ಲಾದ ಈ ತಪ್ಪನ್ನು ತಿದ್ದಲು ನಿಮಗೆ ಇನ್ನೊಂದೇ ಅವಕಾಶ ಸಿಗಲಿದೆ. ಆಧಾರ್ ಕಾರ್ಡ್ ಸಿದ್ಧವಾಗಿದ್ದು, ಜನ್ಮ ದಿನಾಂಕ ತಪ್ಪಾಗಿದ್ದರೆ ಪದೇ ಪದೇ ಇದನ್ನು ಬದಲಿಸಲು ಸಾಧ್ಯವಿಲ್ಲ. ಒಮ್ಮೆ ಮಾತ್ರ ನೀವು ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಯುಐಡಿಎಐ ಅಧಿಕೃತ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದೆ. ವಿಳಾಸ ಬಿಟ್ಟು ಆಧಾರ್ ನಲ್ಲಾಗಿರುವ ಯಾವುದೇ ತಪ್ಪನ್ನು ತಿದ್ದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕವನ್ನು ಕೂಡ ಆಧಾರ್ ಕೇಂದ್ರಕ್ಕೆ ಹೋಗಿಯೇ ತಿದ್ದಬೇಕು. ಜನ್ಮ ದಿನಾಂಕ ತಿದ್ದುಪಡಿ ಮಾಡುವಾಗ ಸೂಕ್ತ…