ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಆದರೂ ಇನ್ನೂ ಸಾಕಷ್ಟು ಆಪ್ಸ್ ಇವೆಯಂತೆ. ಅಂತಹವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ. ಇವುಗಳಲ್ಲಿ ಯಾವುದಾದರೂ ಆಪ್‌ನ್ನು ನೀವು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೆ ತೆಗೆದುಬಿಡಿ. ಇಲ್ಲದಿದ್ದರೆ ಎಷ್ಟೋ ಬೆಲೆಬಾಳುವ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹ್ಯಾಕರ್‌ಗಳ ಪಾಲಾಗುವ ಅಪಾಯವಿದೆ. ಆ ಆಪ್ಸ್ ಯಾವುದು ಎಂದು ಈಗ ನೋಡೋಣ.
1. ಗೈಡ್ ಫಾರ್ ಫಿಫಾ ಮೊಬೈಲ್ (Guide for FIFA Mobile)
ಗೂಗಲ್ ಪ್ಲೇಸ್ಟೋರ್‌ನಲ್ಲಿ ಇರುವ ಈ ಆಪ್‌ನಲ್ಲಿ ವೈರಸ್ ಇದೆ. ಇದನ್ನು ಕೂಡಲೆ ತೆಗೆದುಬಿಡಿ. ಈಗಾಗಲೆ ಇದನ್ನು ಲಕ್ಷದಷ್ಟು ಜನ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ನಿಮ್ಮ ಡಿವೈಸ್‌ನಲ್ಲಿದ್ದರೆ ಕೂಡಲೆ ಅನ್‌ಇನ್‌ಸ್ಟಾಲ್ ಮಾಡಿ.
2. ಗೈಡ್ ಫಾರ್ ಲೆಗೋ ನೆಕ್ಸೋ ನೈಟ್ಸ್ (Guide for LEGO Nexo Knights)
ಪ್ಲೇ ಸ್ಟೋರ್‌ನಲ್ಲಿರುವ ಈ ಆಪ್‌ನಲ್ಲಿ ಮಾಲ್‌ವೇರ್ ಇದೆ. ಇದನ್ನು ಈಗಾಗಲೆ 50 ಸಾವಿರಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ನೀವೂ ಡೌನ್‌ಲೋಡ್ ಮಾಡಿಕೊಂಡಿದ್ದರೆ ಕೂಡಲೆ ರಿಮೂವ್ ಮಾಡಿ.
3. ಗೈಡ್ ಫಾರ್ ರೋಲಿಂಗ್ ಸ್ಕೈ (Guide for Rolling sky)
ಇದನ್ನು 10 ಸಾವಿರ ಮಂದಿ ಬಳಕೆದಾರರು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ಸಹ ಅಪಾಯಕಾರಿ. ಆದಕಾರಣ ಇದನ್ನೂ ತೆಗೆದುಬಿಡಿ.

4. ಗೈಡ್ ಫಾರ್ ಲೆಗೋ ಸಿಟಿ ಮೈ ಸಿಟಿ (Guide for LEGO City My City)
ಈ ಆಪ್‌ನ್ನು 50 ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿಯಾದ ಆಪ್. ಕೂಡಲೆ ತೆಗೆದುಬಿಡಿ.
5. ಗೈಡ್ ಫಾರ್ ಪೋಕಿಮಾನ್ ಗೋ (Guide for Pokemon GO)
ಪೋಕಿಮಾನ್ ಗೇಮ್‌ಗೆ ಸೇರಿದ ಗೈಡ್ ಆಪ್ ಆಗಿರುವ ಇದು ಪ್ಲೇಸ್ಟೋರಲ್ಲಿದೆ. ಇದನ್ನು ಲಕ್ಷ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಆದಕಾರಣ ಇದನ್ನು ಅನ್‌ಇನ್‌ಸ್ಟಾಲ್ ಮಾಡಿಬಿಡಿ.
6. ಗೈಡ್ ಡ್ರೀಮ್ ಲೀಗ್ ಸಾಕರ್ (Guide Dream League Soccer)
ಈ ಆಪ್‌ನ್ನು 50 ಸಾವಿರ ಮಂದಿ ಈಗಾಗಲೆ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್‌ನಲ್ಲೂ ಸಹ ಮಾಲ್‌ವೇರ್ ಇದೆ. ಆದಕಾರಣ ಇದನ್ನು ನಿಮ್ಮ ಫೋನ್‌ನಿಂದ ಕೂಡಲೆ ತೆಗೆದುಬಿಡಿ.
7. ಲೀಗೈಡ್ ಲೆಗೋ ಸಿಟಿ ಅಂಡರ್ ಕವರ್ (LEGUIDE LEGO City Undercover)
ಇದು ಸಹ ಅಪಾಯಕಾರಿ ಆಪ್. ಇದನ್ನು ಈಗಾಗಲೆ 50 ಸಾವಿರ ಮಂದಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ನೀವು ಸಹ ಆ ಕೆಲಸ ಮಾಡಿದ್ದರೆ ಕೂಡಲೆ ತೆಗೆದುಬಿಡಿ.
8. ಗೈಡ್ ಫರ್ ಕಾಡಿಲ್ಲಾಕ್ಸ್ (Guide for Cadillacs)
ಇದನ್ನು 10 ಸಾವಿರ ಮಂದಿವರೆಗೂ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ವೈರಸ್ ಇರುವುದಾಗಿ ಗುರುತಿಸಲಾಗಿದೆ. ಆದಕಾರಣ ಇದನ್ನು ಇನ್‌ಸ್ಟಾಲ್ ಮಾಡಿಕೊಂಡಿರುವವರು ಕೂಡಲೆ ತೆಗೆದುಬಿಡಿ.

9. ಲೀ ಗೈಡ್ ಲೆಗೋ ಸಿಟಿ ಮೈ ಸಿಟಿ (LEGUIDE LEGO City My City)
ಇದನ್ನು 10 ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಇದನ್ನು ಕೂಡಲೆ ತೆಗೆದುಬಿಡಿ.
10. ಗೈಡ್ ಫಾರ್ ಫೀಫಾ 17 (Guide For FIFA 17)
ಈ ಆಪ್ ಸಹ 50 ಸಾವಿರ ಮಂದಿ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ಮಾಲ್‍ವೇರ್ ಇದೆ. ಆದಕಾರಣ ಇದನ್ನೂ ಸಹ ತೆಗೆದುಬಿಡಿ.
11. ಗೈಡ್ ಫಾರ್ ಸ್ಲಿತರ್.ಐಓ (Guide for slither.io)
ಸುಮಾರು 1 ಲಕ್ಷ ಮಂದಿ ಬಳಕೆದಾರರು ಈ ಆಪನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆ ರೀತಿ ನೀವು ಮಾಡಿದ್ದರೆ ಕೂಡಲೆ ಈ ಆಪನ್ನು ತೆಗೆದುಬಿಡುವುದು ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.
ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ .
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ಇತ್ತೀಚೆಗಷ್ಟೇ ಮುಂಬೈನ ಕಮಲಾ ಮಿಲ್ಸ್’ನಲ್ಲಿ ಅಗ್ನಿ ದುರಂತ ನಡೆದಿದ್ದು, ಸರಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡು, ತುಂಬಾ ಚರ್ಚೆಗೆ ಕಾರಣವಾಗಿದೆ.ಇದೇ ಸಮಯದಲ್ಲಿ ಒಬ್ಬ ಪೋಲೀಸ್ ಪೇದೆ ರಿಯಲ್ ಹಿರೋನಂತೆ ಮಾಡಿರುವ ಸಾಹಸ, ನಿಜಕ್ಕೂ ಮೈ ಜುಮ್ಮೆನಿಸುವನ್ತಾಗಿದ್ದು,ಅದರಲ್ಲಿನ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.
ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ.
ಮೂರ್ಖತನ ಹಾಗೂ ಉಗ್ಘಟತನದ ಪರಮಾವಧಿ ಎಂದರೆ ಇದೇ ಅಲ್ಲವೇ?
ಸರ್ಕಾರ ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ನಿರ್ದೇಶನ ನೀಡಿದ್ದರೂ ಈ ಮೂರ್ಖರು ಏನು ಮಾಡಿದ್ದಾರೆ ಎಂಬುದನ್ನು ನೋಡಿ.