ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಬೆಳಿಗ್ಗೆ ಆರೋಗ್ಯಕರ ಆಹಾರ ಸೇವನೆಯಿಂದ ದಿನವನ್ನು ಆರಂಭಿಸುವವರಿಗೆ ಹೋಲಿಸಿದರೆ ಬ್ರೇಕ್ಫಾಸ್ಟ್ ತಪ್ಪಿಸಿಕೊಳ್ಳುವವರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ.

ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತವೆ.

ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಊಟದ ವೇಳೆ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ. ಪರಿಣಾಮವಾಗಿ ಆಹಾರವನ್ನು ಜೀರ್ಣಿಸುವ ಕರುಳುಗಳ ಮೇಲೆ ಅಧಿಕ ಹೊರೆ ಬೀಳುತ್ತದೆ ಮತ್ತು ಇದು ಅಲ್ಸರ್,ಗ್ಯಾಸ್ಟ್ರಿಕ್ಸ್, ಅಜೀರ್ಣ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಬ್ರೇಕ್ಫಾಸ್ಟ್ ತಪ್ಪಿಸುವವರಿಗೆ ಹೋಲಿಸಿದರೆ ಬೆಳಿಗ್ಗೆ ಆರೋಗ್ಯಕರ ತಿಂಡಿ ತಿನ್ನುವವವರು ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಹಿಳೆಯರು ತಮ್ಮ ಕೆಲಸದ ಭರಾಟೆಯಲ್ಲಿ ಹೆಚ್ಚಿನ ಸಲ ಬೆಳಗಿನ ತಿಂಡಿಯನ್ನು ಕಡೆಗಣಿಸುವುದರಿಂದ ಮಧುಮೇಹಕ್ಕೆ ತುತ್ತಾಗುವುದು ಹೆಚ್ಚು.

ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವವರೆಗೆ ಉಪವಾಸವಿರುವುದರಿಂದ ಬ್ರೇಕ್ಫಾಸ್ಟ್ ತಪ್ಪಿಸುವುದು ಈ ಉಪವಾಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

ಸುಂದರ ತಲೆಗೂದಲನ್ನು ಹೊಂದಿರಲು ಪೌಷ್ಟಿಕ ಬ್ರೇಕ್ಫಾಸ್ಟ್ ಅಗತ್ಯವಾಗಿದೆ. ಪ್ರೋಟಿನ್ಭರಿತ ಬ್ರೇಕ್ಫಾಸ್ಟ್ ಕೆರಾಟಿನ್ ಉತ್ಪತ್ತಿಗೆ ನೆರವಾಗುತ್ತದೆ ಮತ್ತು ಕೆರಾಟಿನ್ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇದನ್ನು ಓದಿದರೆ ಅಚ್ಚರಿಯೆನ್ನಿಸಬಹುದು. ನೀವು ದೇಹತೂಕ ಇಳಿಸಲು ಬಯಸಿದ್ದೀರಾದರೆ ಕಡಿಮೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಇದು ಬ್ರೇಕ್ಫಾಸ್ಟ್ ತಪ್ಪಿಸಿಕೊಳ್ಳುವುದಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ ಊಟದ ವೇಳೆ ಹಸಿವು ತೀವ್ರವಾಗಿರುತ್ತದೆ.

ಪರಿಣಾಮವಾಗಿ ಹೆಚ್ಚಿನ ಊಟ ಮಾಡುವಂತಾಗುತ್ತದೆ ಮತ್ತು ದಿನದ ಅತ್ಯಂತ ಹೆಚ್ಚು ಜಡತೆಯ ಸಮಯದಲ್ಲಿ ಹೆಚ್ಚಿನ ಕ್ಯಾಲರಿಗಳು ಶರೀರದಲ್ಲಿ ಸೇರಿಕೊಂಡು ಅಂತಿಮವಾಗಿ ತೂಕ ಹೆಚ್ಚುತ್ತದೆ.

ಬ್ರೇಕ್ಫಾಸ್ಟ್ 12 ಗಂಟೆಗಳ ಸುದೀರ್ಘ ಉಪವಾಸದ ಬಳಿಕ ನಾವು ಸೇವಿಸುವ ಮೊದಲ ಆಹಾರವಾಗಿದೆ ಮತ್ತು ಇದನ್ನು ತಪ್ಪಿಸಿದರೆ ನಮ್ಮ ಶರೀರಕ್ಕೆ ಉತ್ತಮ ಆರಂಭ ದೊರೆಯುವುದಿಲ್ಲ. ನಮ್ಮ ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಇಡೀ ದಿನ ಆಲಸ್ಯ ಕಾಡುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ಭೌಗೋಳಿಕ ಸಂಪತ್ತನ್ನು ಹುಡುಕುವ ಪ್ರಯತ್ನವನ್ನು ಯಾವಾಗಲೂ ಕೂಡ ಮಾಡುತ್ತಲೇ ಇರುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅದೆಷ್ಟೋ ಭಾಗಗಲ್ಲಿ ಚಿನ್ನದ ಗಣಿಯನ್ನು ಹುಡುಕುವ ಅದೆಷ್ಟೋ ಪ್ರಯತ್ನಗಳು ನಡೆದಿದ್ದವು. ಆದರೆ ಯಾವುದು ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಆದರೆ ಸದ್ಯಕ್ಕೆ ಈಗ ಭಾರತದಲ್ಲಿ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಹೆಚ್ಚು ಚಿನ್ನದ ಗಣಿ ಪತ್ತೆಯಾಗಿದೆ ಎನ್ನುವ ಸುದ್ದಿಯೊಂದು ಇದ್ದಕಿದ್ದಂತೆ ದೇಶದ ಎಲ್ಲ ಮಾಧ್ಯಮಗಳು ಈ ಸುದ್ದಿ…
ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಇಂದು ಬೆಳಗ್ಗಿನ ಜಾವ ಪೂಜಾ ವಿಧಿ-ವಿಧಾನದ ಮಾಡುವಾಗ ಚಪ್ಪಲಿ ಹಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ದೇವಾಲಯದ ಬಾಗಿಲು ತೆರೆದಾಗ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡು ಬಂದಿದೆ. ರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ…
ಭಾರತೀಯರು ಬಿಸಾಕಿದ ತಲೆಕೂದಲ ಬೆಲೆ ಗೊತ್ತಾ ನಿಮ್ಮ ತಲೆಕೂದಲು ಎಲ್ಲಿಗೆ ಹೋಗ್ತಾ ಇದೆ ಗೊತ್ತಾ,ಇದು ಕೂದಲಲ್ಲ ಕಪ್ಪು ಚಿನ್ನ.ವೀಕ್ಷಕರೇ ಬೀದಿಬೀದಿಗಳಲ್ಲಿ ಮತ್ತು ಮನೆಬಾಗಿಲಿಗೆ ಹೋಗಿ ನಿಮ್ಮ ಹತ್ತಿರ ವೇಸ್ಟ್ ತಲೆಕೂದಲು ಇದಿಯಾ ಎಂದು ಕೇಳಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿ ಕ್ಲಿಪ್ ಗಳು ಹೇರ್ ಬ್ಯಾಂಡ್ ಗಳು ಕೊಟ್ಟಿ ತಲೆ ಕೂದಲುಗಳನ್ನು ತೆಗೆದುಕೊಂಡು ಹೋಗುತ್ತಾರೆ ತಲೆಕೂದಲನ್ನು ತೆಗೆದುಕೊಂಡು ಏನು ಮಾಡುತ್ತಾರೆ ಮತ್ತು ಎಲ್ಲಿಗೆ ಹೋಗುತ್ತದೆ ಯಾವುದು ಕೂಡ ಸಾಕಷ್ಟು ಜನರಿಗೆ ಗೊತ್ತಿಲ್ಲ ವೀಕ್ಷಕರೆ ತಿರುಪತಿ ಒಂದರಲ್ಲಿ ಒಂದು…
ಸರಕು ಸೇವಾ ತೆರಿಗೆ (GST) ಜಾರಿಗೆ ಬಂದಲ್ಲಿ ಬಿಂದಾಸ್ ಆಗಿ ಒಳ್ಳೆಯ ಊಟ, ಉಪಾಹಾರ ನೀವು ತೃಪ್ತಿಯಾಗುವಷ್ಟು ಮಾಡಬಹುದು. ಹಾಗೂ ಒಂದು ಸಿನೆಮಾ ನೋಡಿದ ಮೇಲೂ ಮತ್ತೊಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು.
ಎವಾನ್ ಮೋಟಾರ್ಸ್ ಎರಡು ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪುಣೆ ಮೋಟಾರ್ ಶೋದಲ್ಲಿ ಪ್ರದರ್ಶಿಸಿದೆ. ಪ್ರದರ್ಶಿಸಲಾದ ಈ ಎರಡು ಸ್ಕೂಟರ್ಗಳ ಪೈಕಿ, ಟಾಪ್ ಎಂಡ್ ಸ್ಕೂಟರ್, ಸಿಂಗಲ್ ಜಾರ್ಜ್ನಿಂದ 200 ಕಿ.ಮೀ ದೂರ ಚಲಿಸಲಿದೆ. ಫ್ಲಾಗ್ಶಿಪ್ ಸ್ಕೂಟರ್ 72 ವಿ 22ಎಎಚ್ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 1200ಡಬ್ಲ್ಯು ಮೋಟರ್ ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ. ಲೊವರ್-ಸ್ಪೆಕ್ ಮಾದರಿಯನ್ನು ಪೂರ್ತಿಯಾಗಿ ಜಾರ್ಚ್ ಮಾಡಿದರೆ 80 ಕಿ.ಮೀ ಚಲಿಸುತ್ತದೆ. ಎಂಟ್ರಿ-ಲೆವೆಲ್ ಸ್ಕೂಟರ್ 60 ವಿ…
ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…