ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಂಡು ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ರಮೇಶ್ 3.2 ಕೋಟಿ ರೂ.ಮೌಲ್ಯದ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರನ್ನ ಕೊಂಡುಕೊಂಡಿದ್ದಾರೆ.
ಜರ್ಮನಿಯಿಂದ ಆಮದು ಮಾಡಿಕೊಂಡಿರೋ ಈ ಕಾರ್ ಬೆಂಗಳೂರಿನಲ್ಲಿ ವಿಜಯ್ ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿ ಬಳಿ ಬಿಟ್ಟರೆ ಈಗ ರಮೇಶ್ ಅವರ ಬಳಿ ಮಾತ್ರ ಇರೋದು.
ಇವರ ಬಳಿ ಈಗಾಗಲೇ ರೋಲ್ಸ್ ರಾಯ್ಸ್ ಕಾರು, 11 ಮರ್ಸಿಡಿಸ್, 10 ಬಿಎಂಡಬ್ಲ್ಯೂ, 3 ಆಡಿ ಹಾಗೂ 2 ಜಾಗ್ವಾರ್ ಕಾರುಗಳಿವೆ.
45 ವರ್ಷದ ರಮೇಶ್ ಕಳೆದ ತಿಂಗಳು ಬ್ಯಾಂಕ್ ಲೋನ್ ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಕೊಂಡುಕೊಂಡಿದ್ದಾರೆ. 1994ರಲ್ಲಿ ಮಾರುತಿ ಓಮ್ನಿ ಕಾರನ್ನು ಕೊಂಡು ಬಾಡಿಗೆಗೆ ಬಿಟ್ಟ ನಂತರ ರಮೇಶ್ ಅವರ ಅದೃಷ್ಟವೇ ಬದಲಾಯಿತು.
ಅಲ್ಲಿಂದ ರಮೇಶ್ ಅವರಿಗೆ ಕಾರ್‍ಗಳ ಮೇಲಿನ ಪ್ರೀತಿ ಶುರುವಾಯ್ತು. ಪ್ರಸ್ತುತ ರಮೇಶ್ ಅವರ ಬಳಿ 150 ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ ಕೆಲವನ್ನ ರಮೇಶ್ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗ್ತಾರೆ ಅಥವಾ ಒಳ್ಳೇ ಗ್ರಾಹಕರು ಸಿಕ್ಕರೆ ಬಾಡಿಗೆಗೆ ಕೊಡ್ತಾರೆ.
ನಾನು ಯಾವ ಮಟ್ಟದಿಂದ ಇಲ್ಲಿಯತನಕ ಬಂದೆ ಅನ್ನೋದನ್ನ ಮರೆಯಲು ಇಷ್ಟವಿಲ್ಲ. ನಾನು ಪಟ್ಟ ಕಷ್ಟ, ತಂದೆ ತೀರಿಕೊಂಡ ಬಳಿಕ ನನ್ನ ತಾಯಿ ಬಡತನದಲ್ಲೂ ನನ್ನನ್ನು ಕಷ್ಟಪಟ್ಟು ಸಾಕಿದ್ದನ್ನು ಮರೆಯೋಕಾಗಲ್ಲ.
ಈ ಕೆಲಸದಿಂದಲೇ ನಾನಿಂದು ಶ್ರೀಮಂತನಾಗಿದ್ದೀನಿ. ಆದ್ದರಿಂದ ಈ ಕೆಲಸವನ್ನು ಮುಂದುವರೆಸುತ್ತೇನೆ. ಈ ರೀತಿಯ ಇನ್ನೂ ಅನೇಕ ಕಾರ್‍ಗಳನ್ನು ಹೊಂದಬೇಕು ಎಂಬುದು ನನ್ನ ಡ್ರೀಮ್ ಅಂತಾರೆ ರಮೇಶ್.1979ರಲ್ಲಿ ಅವರ ತಂದೆ ತೀರಿಕೊಂಡಾದ ರಮೇಶ್‍ಗೆ 9 ವರ್ಷ.
ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ವಿದ್ಯಾಭ್ಯಾಸ ನಿಲ್ಲಿಸಿ ತಂದೆಯಂತೆಯೇ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿದ್ರು.ಸಲೂನ್‍ನಿಂದ ಇವರಿಗೆ ಬರುವ ಆದಾಯ ಸಾಧಾರಣವಾಗಿದ್ರೂ ಲಾಭದಾಯಕವಾದ ಕಾರ್ ಬಾಡಿಗೆಗೆ ಕೊಡುವ ಬಿಸಿನೆಸ್ ನಡೆಸಿಕೊಂಡು ಬರ್ತಿದ್ದಾರೆ ರಮೇಶ್ ಅವರು ತಮ್ಮ ಹೇರ್ ಸಲೂನ್‍ನಲ್ಲಿ 75 ರೂ.ಗೆ ಹೇರ್ ಕಟ್ ಮಾಡುವುದರ ಜೊತೆಗೆ ಐಷಾರಾಮಿ ಕಾರುಗಳನ್ನ ಬಾಡಿಗೆಗೆ ಕೊಡ್ತಾರೆ.
ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಇವರು ಬೌರಿಂಗ್ ಇನ್ಸ್ ಟಿಟ್ಯೂಟ್‍ನ ತಮ್ಮ ಸಲೂನ್‍ನಲ್ಲಿ ಪ್ರತಿದಿನ ಕನಿಷ್ಠ 5 ಗಂಟೆಗಳ ಕಾಲ ಗ್ರಾಹಕರಿಗೆ ಹೇರ್‍ಕಟ್ ಮಾಡ್ತಾರೆ. ತನ್ನ ಕಸುಬನ್ನು ಬಿಡಬಾರದು ಎಂಬ ಕಾರಣಕ್ಕೆ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ.
ತಮ್ಮ ಬಿಳಿ ಬಣ್ಣದ ರಾಲ್ಸ್ ರಾಯ್ಸ್ ಕಾರಿನಲ್ಲೇ ಕೆಲಸಕ್ಕೆ ರಮೇಶ್ ಹೋಗುವುದು ವಿಶೇಷ.ವಿಜಯ್ ಮಲ್ಯ ಬಳಿ ಕೂಡ ಚಿನ್ನದ ಬಣ್ಣದ ಮೇಬ್ಯಾಕ್ ಕಾರ್ ಇತ್ತು. ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿಯನ್ನು ಬಿಟ್ಟರೆ.
ಆ ಕ್ಷೌರಿಕ ಇತ್ತೀಚೆಗಷ್ಟೇ ಜರ್ಮನಿಯಿಂದ ಆ ಕಾರನ್ನು ಆಮದು ಮಾಡಿಕೊಂಡಿದ್ದರು. ಅವರು ಬೇರಾರೂ ಅಲ್ಲ, ಬೆಂಗಳೂರಿನ ದಂತಕತೆಯಾಗಿರುವ ಕ್ಷೌರಿಕ ರಮೇಶ್ ಬಾಬು. 75 ರೂ.ಗಳಿಗೆ ಕ್ಷೌರ ಸೇವೆ ನೀಡುವ ಅವರಿಗೆ ದುಬಾರಿ ಕಾರುಗಳನ್ನು ಸಂಗ್ರಹಿಸುವುದೇ ಹವ್ಯಾಸ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ. ನೌಕರರು, ವರ್ತಕರು,…
ನಮ್ಮ ಜಗತ್ತಿನಲ್ಲಿ ಅವರ ಬೇಳೆ ಬೇಯಿಸಿಕೊಳ್ಳಲು ಜನ ಯೋಚಿಸುತ್ತಾರೆ ಹೊರತು ಮತ್ತೊಬ್ಬರಿಗೆ ಯಾವ ವಿಷಯದಲ್ಲೂ ಸಹಾಯಮಾಡುವುದಿಲ್ಲ, ಇನ್ನೊಬ್ಬರ ಕಷ್ಟ ಕಣ್ಣಿಗೆ ಕಂಡರೂ ಕಾಣದಂತೆ ಓಡಾಡುವ ಜನರೇ ಹೆಚ್ಚು ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದರೆ ಇವರು ನಿಜವಾಗಲೂ ಗ್ರೇಟ್.
ಸರಹ ಆ್ಯಪ್ ಎಂಬ ಹೆಸರಿನ ಈ ಅಪ್ಲಿಕೇಷನ್ ಈಗಂತೂ ತುಂಬಾ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದರ ಮೂಲಕ ಯಾರಿಗೂ ನೀವು ರಹಸ್ಯ ಮೆಸೇಜ್ ಕಳುಹಿಸಬಹುದು ಅಗಿದೆ. ಜೈನ್ ಅಲಾಬ್ದೀನ್ ತೌಫಿಕ್ ಎಂಬ ಸೌದಿಅರೇಬಿಯಾದ ವ್ಯಕ್ತಿ ತಯಾರಿಸಿರುವ ಅಪ್ಲಿಕೇಷನ್ ಇದಾಗಿದೆ .
ಈಗಿನ ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ….
ಈ ಪಟ್ಟಿಯಲ್ಲಿ ಇರುವ ಎಲ್ಲ ಕಲಾವಿದರು ಮನೆ ಸೇರುತ್ತಾರಾ ಇಲ್ಲವೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಈ ಕಲಾವಿದರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಭಾನುವಾರ ಅಧಿಕೃತವಾಗಿ ಆರಂಭವಾಗುತ್ತಿದೆ. ಈ ಸಲ ಒಟ್ಟು 17 ಜನ ಸ್ಪರ್ಧಿಗಳು ಬಿಗ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಸ್ವತಃ ವಾಹಿನಿ ಅಧಿಕೃತಪಡಿಸಿದೆ. ಯಾರೆಲ್ಲ ಹೋಗಬಹುದು, ಆದರೂ, ದೊಡ್ಮನೆಯೊಳಗೆ ಹೋಗುವ ಹದಿನೇಳು ಜನರ ಸಂಭಾವ್ಯ ಪಟ್ಟಿ ಮೂಲಗಳಿಂದ ಬಹಿರಂಗವಾಗಿದೆ….
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.