ತಂತ್ರಜ್ಞಾನ

ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

171

ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

ಇದಕ್ಕಾಗಿ ರೈಲ್ವೆ ಇಲಾಖೆ ಹಸುಗಳ ಬೆರಣಿಯನ್ನು ಬಳಸಿಕೊಳ್ಳಲಿದೆ. 42 ಕೋಟಿ ರೂಪಾಯಿ ವೆಚ್ಚ ಮಾಡಿ 3,350 ಲೋಡ್ ಹಸುವಿನ ಬೆರಣಿಯನ್ನು ಖರೀದಿ ಮಾಡಲಿದೆ. ಬೆರಣಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಬಳಸಿಕೊಂಡು ಬಯೋ ಟಾಯ್ಲೆಟ್ ಗಳನ್ನು ರೀಚಾರ್ಜ್ ಮಾಡುವುದು ಇಲಾಖೆಯ ಉದ್ದೇಶ.

ಈಗಾಗ್ಲೇ ರೈಲ್ವೆ ಇಲಾಖೆ ಶೇ.44.8 ರಷ್ಟು ಟ್ರೈನ್ ಗಳಲ್ಲಿ ಬಯೋ ಟಾಯ್ಲೆಟ್ ಗಳನ್ನು ಅಳವಡಿಸಿದೆ. ಟಾಯ್ಲೆಟ್ ಸೀಟ್ ಕೆಳಭಾಗದಲ್ಲಿ ಬಯೋ ಟಾಯ್ಲೆಟ್ ಅಳವಡಿಸಲಾಗಿದೆ. ಅದು ಸಣ್ಣ ಪ್ರಮಾಣದ ಚರಂಡಿ ಸಂಸ್ಕರಣಾ ವ್ಯವಸ್ಥೆಯನ್ನು ಒಳಗೊಂಡಿದೆ.

ಕಾಂಪೋಸ್ಟ್ ಚೇಂಬರ್ ನಲ್ಲಿರೋ ಬೆರಣಿಯ ಬ್ಯಾಕ್ಟೀರಿಯಾ ಮಾನವರ ಮಲ ಮೂತ್ರಗಳನ್ನು ಜೀರ್ಣಿಸಿಕೊಂಡು, ನೀರು ಮತ್ತು ಮಿಥೇನ್ ಅನ್ನು ಹೊರಹಾಕುತ್ತದೆ. ಇದಕ್ಕಾಗಿ ಬೆರಣಿಗಳನ್ನು ಖರೀದಿ ಮಾಡಲಾಗುತ್ತಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ