ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಘವ ಲಾರೆನ್ಸ್ ಈಗ ಟಾಲೀವುಡ್, ಕೋಲೀವುಡ್ ನಲ್ಲಿ ಉತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರು ನಿರ್ದೇಶಕರಾಗುವ ಮೊದಲು ಕೊರಿಯಾಗ್ರಾಫರ್ ಆಗಿ ತನ್ನ ಜೀವನವನ್ನು ಆರಂಭಿಸಿದ್ದರು. ಪ್ರಭುದೇವಾ ಟ್ರೂಪ್ ನಲ್ಲಿ ಒಬ್ಬನಾಗಿದ್ದು..ಎಲ್ಲರನ್ನೂ ಆಕರ್ಷಿಸುವಂತೆ ನೃತ್ಯ ಅಭಿನಯಿಸಿ ಮೆಗಾಸ್ಟಾರ್ ಗಮನ ಸೆಳೆದಿದ್ದೇ ತಡ ಮೆಗಾಸ್ಟಾರ್ ರವರ ಹಿಟ್ಲರ್ ಚಿತ್ರದಲ್ಲಿ ಅವಕಾಶ ನೀಡಿದರು. ಆ ಚಿತ್ರವು ಹಿಟ್ ಆಗುವುದರ ಮೂಲಕ ಲಾರೆನ್ಸ್ ಕೊರಿಯೋಗ್ರಾಫರ್ ಆಗಿ ಸ್ಥಿರಪಟ್ಟಿದ್ದಾರೆ.
ಇದಕ್ಕೂ ಮೊದಲು ಅವರು ಏನು ಮಾಡುತ್ತಿದ್ದರು ಎಂಬುದನ್ನು ತಿಳಿದರೆ ಬೆಚ್ಚಿ ಅಚ್ಚರಿಗೊಳ್ಳುತ್ತೀರಿ. ಈ ಹಿಂದೆ ದಕ್ಷಿಣ ಭಾಗದಲ್ಲಿ ಸೂಪರ್ ಫೈಟ್ ಮಾಸ್ಟರ್ ಗಳಲ್ಲಿ ಸೂಪರ್ ಸುಬ್ಬರಾಯನ್ ಒಬ್ಬರಾಗಿದ್ದರು. ಅವರು ತಮ್ಮ ಫೈಟ್ ದೃಶ್ಯಗಳೊಂದಿಗೆ ಆಕರ್ಷಿಸುತ್ತಿದ್ದರು. ಸಣ್ಣಪುಟ್ಟ ಸ್ಟಾರ್ ಗಳಿಂದ ಹಿಡಿದು ಹೆಸರಾಂತ ಸ್ಟಾರ್ ಗಳಿಗೂ ಅವರೇ ಫೈಟ್ ಕಂಪೋಸ್ ಮಾಡುತ್ತಿದ್ದರು.
ಅದೇ ವೇಳೆ ಲಾರಿ ಕ್ಲೀನರ್ ಆಗಿದ್ದ ಲಾರೆನ್ಸ್ ,ಸುಬ್ಬರಾಯನ್ ಅವರ ಬಳಿ ಕಾರು ಕ್ಲೀನರ್ ಆಗಿ ಕೆಲಸಕ್ಕೆ ಸೇರಿದರು. ಡ್ಯಾನ್ಸ್ ಮಾಡುತ್ತಾ ಕಾರನ್ನು ಒರೆಸುತ್ತಿದ್ದರು. ಆ ದೃಶ್ಯ ಕೋಲೀವುಡ್ ಸೂಪರ್ ಸ್ಟಾರ್ ರಜನೀಕಾಂತ್ ರ ಗಮನ ಸೆಳೆಯಿತು. ಲಾರೆನ್ಸ್ ಡ್ಯಾನ್ಸ್ ಗೆ ಮಂತ್ರ ಮುಗ್ಧರಾದ ರಜನೀಕಾಂತ್ ತಕ್ಷಣವೇ ಲಾರೆನ್ಸ್ ರನ್ನು ಇಂಡಿಯನ್ ಮೈಖೇಲ್ ಜಾಕ್ಸನ್ ಆಗಿ ಹೆಸರುಗಳಿಸಿದ ಪ್ರಭುದೇವಾ ಟ್ರೂಪ್ ನಲ್ಲಿ ಸೇರಿಸಿದರು.
ಅಲ್ಲಿ ಪ್ರಭುದೇವಾ ಬಳಿ ಅರಿತುಕೊಂಡು, ಆ ಟ್ರೂಪ್ ನಲ್ಲಿ ಉತ್ತಮ ಡ್ಯಾನ್ಸರ್ ಆಗಿ ಹೆಸರುಗಳಿಸಿದರು. ಮುಠಾಮೇಸ್ತ್ರಿ ಚಿತ್ರದಲ್ಲಿ ಲಾರೆನ್ಸ್ ಡ್ಯಾನ್ಸ್ ಅನ್ನು ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ ತನ್ನ ಹಿಟ್ಲರ್ ಚಿತ್ರದಲ್ಲಿ ಅವಕಾಶ ಕಲ್ಪಿಸಿದರು.
ಆ ಚಿತ್ರದಲ್ಲಿ ಅದ್ಭುತವಾದ ಕೊರಿಯೋಗ್ರಫಿ ನೀಡಿದ ಲಾರೆನ್ಸ್ ಅಂದಿನಿಂದ ಮುಂದೆ ಸಾಗುತ್ತಲೇ ಇದ್ದಾರೆ. ಕೊರಿಯೋಗ್ರಫಿ ಮಾಡುತ್ತಲೇ ನಟನಾಗಿಯೂ ಒಳ್ಳೆಯ ಹೆಸರು ಗಳಿಸಿದ್ದಾರೆ. ಹೀಗೆ ತನ್ನಲ್ಲಿರುವ ಪ್ರತಿಭೆಯನ್ನು ತೋರಿದ ಅವರು ಮೆಗಾಫೋನ್ ನಿಂದ ನಿರ್ದೇಶನ ಮಾಡಿದ್ದಾರೆ.
ಪ್ರತಿಭೆ ಇದ್ದರೆ ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂಬುದು ಲಾರೆನ್ಸ್ ವಿಷಯದಲ್ಲಿ ಸ್ಪಷ್ಟವಾಗಿದೆ. ಈ ಉದಾಹರಣೆಯಿಂದ ಗಾಡ್ ಫಾದರ್ ಇಲ್ಲದಿದ್ದರೂ ಪ್ರತಿಭೆ ಇದ್ದರೆ ಸಾಕೆಂದು ಹೇಳಬಹುದು. ಕಾರು ಕ್ಲೀನರ್ ಆಗಿ ಕೆಲಸ ಮಾಡಿದ ರಾಘವ ಈಗ ಹತ್ತಾರು ಕಾರುಗಳಿಗೆ ಯಜಮಾನರಾಗಿದ್ದಾರೆ. ಆದರೂ ಅವರ ಹಿಂದೆ ನಡೆದದ್ದನ್ನು ಮರೆತಿಲ್ಲ. ತನ್ನ ಸಂಪಾದನೆಯಲ್ಲಿ ಸಾಕಷ್ಟು ಹಣವನ್ನು ಬಡವರಿಗೆ ಸಹಾಯ ಮಾಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು. ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ….
ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದ್ದು ಉಪಾಹಾರವನ್ನು ಯಾವುದೇ ಕಾರಣಕ್ಕೂ ಬಿಡಕೂಡದು. ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು ತಿನ್ನಲು ಇಷ್ಟಪಡ್ತಾರೆ.ಹೆಚ್ಚಿನವರು ಬೇನಗೇ ಉದ್ಯೋಗಸ್ಥಳಕ್ಕೆ ತಲುಪುವ ಧಾವಂತದ ಕಾರಣ ಉಪಾಹಾರವನ್ನೇ ತ್ಯಜಿಸುತ್ತಾರೆ. ಇಲ್ಲದಿದ್ದರೆ ಒಂದು ಬಾಳೆಹಣ್ಣನ್ನೋ, ಸೇಬನ್ನೋ ತಿಂದು ಹೊರಟುಬಿಡುತ್ತಾರೆ. ಆದ್ರೆ ಹಸಿದ ಹೊಟ್ಟೆಯಲ್ಲಿ ಫೈಬರ್, ಪೊಟ್ಯಾಶಿಯಂ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.ಬಾಳೆಹಣ್ಣು ಅತ್ಯಂತ ಪೌಷ್ಟಿಕ…
ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬಿಳಿ ಎಕ್ಕದ ಗಿಡದಲ್ಲಿ ನಮಗೆ ತಿಳಿಯದ ಔಷಧಿ ಗುಣಗಳು ತುಂಬಾನೇ ಇದೆ, ನಮ್ಮ ಮನೆ ಹತ್ತಿರ ಅಥವಾ ರೋಡ್ನಲ್ಲಿ ಒಂದು ಔಷಧಿ ಗಿಡ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಕೂಡ ಇದನ್ನು ಹಳ್ಳಿಕಡೆ ಬಳಸುತ್ತ ಬಂದಿದ್ದಾರೆ.ಎಕ್ಕದ ಗಿಡದಲ್ಲಿ ಎರಡು ಪ್ರಭೇದಗಳಿವೆ ಅವು ಬಿಳಿ ಮತ್ತು ಕೆಂಪು ಗಿಡಗಳು ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿ ಗೆ ಬೇಕಾದ ಶ್ರೇಷ್ಠ ವಾದ ಎಲೆ. ಈ ಒಂದು ಗಿಡ ಅಪ್ಪು ಸೈನಿಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು…
ಭಗವದ್ಗೀತೆಯ ಕಿರು ಪರಿಚಯ.. ಪ್ರಶ್ನೋತ್ತರಮಾಲಿಕೆ.. ಪ್ರತಿಯೊಬ್ಬರೂ ಓದಿ.. ಶೇರ್ ಮಾಡಿ.. * ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ ತಿಥಿಯಲ್ಲಿ..? ಉತ್ತರ : ಏಕಾದಶಿಯಂದು. * ಎಲ್ಲಿ ಬೋಧಿಸಿದ..? ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ. * ಎಷ್ಟು ಸಮಯ ಬೋಧಿಸಿದ..? ಉತ್ತರ : 45…
ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.