ಹಣ ಕಾಸು

ಹಣ ನಮ್ಮದೇ, ಆದ್ರೆ ನಮ್ಗೆ ಇಷ್ಟ ಬಂದ ಹಾಗೆ ಖರ್ಚು ಮಾಡುವ ಹಾಗಿಲ್ಲ! ಯಾಕೆ ಗೊತ್ತಾ???

481

ನೀವು 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುತ್ತಿದ್ದೀರಾ. ಹಾಗಾದರೆ ಇಲ್ಲಿ ನೋಡಿ.

ಒಂದು ವೇಳೆ ನೀವು 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುವುದು ಕಂಡುಬಂದರೆ, ಅಷ್ಟೆ ಪ್ರಮಾಣದ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ

 

ಅಲ್ಲದೇ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಆ ಕುರಿತು ‘blackmoneyinfo@incometax.gov.in’. ಗೆ ಮೇಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಜನತೆಯನ್ನು ಕೋರಿದೆ.

ಕಪ್ಪು ಹಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 1, 2017ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವುದನ್ನು ನಿಷೇಧಿಸಿದೆ.

ಕೇಂದ್ರ ಸರ್ಕಾರ ಆದೇಶದ ಪ್ರಕಾರ ಒಂದೇ ವಹಿವಾಟಿನಲ್ಲಿ ಅಥವಾ ಒಂದೇ ಸಂದರ್ಭ, ಈವೆಂಟ್ ಅಥವಾ ಓರ್ವ ವ್ಯಕ್ತಿಗೆ ಸಂಬಂಧಪಟ್ಟಂತೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವನ್ನು ಯಾರೂ ನಡೆಸುವಂತಿಲ್ಲ.

2 ಲಕ್ಷ ರುಪಾಯಿಗಿಂತ ಮೇಲೆ ನೀವು ವ್ಯವಹಾರ ಮಾಡುವುದಾದರೆ ಅದನ್ನು ಚೆಕ್, ಅಥವಾ ಆನ್ಲೈನ್ನಲ್ಲಿ ನಿಮ್ಮ ವ್ಯವಹಾರ ಮಾಡಿಕೊಳ್ಳಬಹುದು.

ಒಂದು ವೇಳೆ ನಿಯಮ ತಪ್ಪಿದಲ್ಲಿ ಆದಾಯ ತೆರಿಗೆ ನೀತಿಯ ಸೆಕ್ಷನ್ 269ST ಅನ್ವಯ ಅಪರಾಧಿಗಳಿಗೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಉಪ್ಪನ್ನು ಹಾಕಿ ಮನೆ ಒರೆಸಿದ್ರೆ ನಿಮ್ಮ ಮನೆಯಲ್ಲಿ ಏನೇನಾಗುತ್ತೆ ಗೊತ್ತಾ! ಈ ಮಾಹಿತಿ ನೋಡಿ.

    ಉಪ್ಪು ಇದರ ಬಗ್ಗೆ ನಿಮಗೆ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇನೆ ಉಪ್ಪನ್ನು ನಾವು ಅಡುಗೆಗೆ ಮಾತ್ರ ಬಳಸುತ್ತೇವೆ ಎಂದು ತಿಳಿದುಕೊಂಡಿರುತ್ತೇವೆ ಅದು ತಪ್ಪು ಉಪ್ಪಿನ ಋಣವನ್ನು ನಾವು ಯಾವತ್ತೂ ತಿಳಿಸಲು ಸಾಧ್ಯವಿಲ್ಲ ನೀವು ನೋಡಿರಬಹುದು ಅಂಗಡಿಯ ಆಚೆ ಉಪ್ಪನ್ನು ಇಟ್ಟಿರುತ್ತಾರೆ ಆದರೆ ಅದನ್ನು ಯಾರು ಕಲಿಯುವುದಿಲ್ಲ ಏಕೆಂದರೆ ಉಪ್ಪಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಇಲ್ಲಿ ಒಂದು ವಿಷಯ ಏನಂದರೆ ಉಪ್ಪಿನಿಂದ ಆಗುವ ಉಪಯೋಗಗಳು ಯಾವುವು ಎಂಬುದನ್ನು ತಿಳಿಸುತ್ತೇನೆ ನೋಡಿ ಮತ್ತು ಯಾವುದಕ್ಕೆ ಬಳಕೆ ಮಾಡುತ್ತಾರೆ…

  • ಸುದ್ದಿ

    ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

    ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…

  • ಉದ್ಯೋಗ

    ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಕವಿದ ಆತಂಕದ ಕಾರ್ಮೋಡ!!!

    ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.

  • ಉಪಯುಕ್ತ ಮಾಹಿತಿ

    ‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

    ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

  • ಜ್ಯೋತಿಷ್ಯ

    ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಬುಧವಾರ, 14/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸ ಕಾರ್ಯಗಳಲ್ಲಿ ಅಡಚಣೆ. ಕಾರ್ಯಸಾಧನೆಗಾಗಿ ಸಂಚಾರದ ಸಾಧ್ಯತೆ. ನಿಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿಯು ಕೈಸೇರುವುದು.ಕುಟುಂಬದಲ್ಲಿ ಮಾತಿನ ಚಕಮಕಿ. ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿ. ಕೌಟುಂಬಿಕವಾಗಿ ಸಂತೋಷ. ವೃಷಭ:- ಬಂಧುಗಳೊಂದಿಗೆ ಮನಸ್ತಾಪ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಅನವಶ್ಯಕ ವೆಚ್ಚ. ದೂರದ ಪ್ರಯಾಣ ಉಚಿತವಲ್ಲ. ಯೋಗ್ಯ ವಯಸ್ಕರಿಗೆ ಕಂಕಣಬಲ. ಮನೆಯ ಹಿರಿಯರ ಮಾತಿಗೆ ಎದುರಾಡದಿರಿ. ವಿದ್ಯಾರ್ಥಿಗಳಿಗೆ ಆಗಾಗ ನಿರುತ್ಸಾಹ ತರಲಿದೆ. ಆರೋಗ್ಯದಲ್ಲಿ ಏರುಪೇರು. ಮಿಥುನ:– ವ್ಯಾಪಾರದಲ್ಲಿ…