ಕರ್ನಾಟಕ

ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್‌ ಡೂಡಲ್‌ ಗೌರವ…ಗೂಗಲ್‌ ಮುಖಪುಟದಲ್ಲಿ ರಾರಾಜಿಸುತ್ತಿರುವ ಕನ್ನಡದ ಕಂಪು…

1127

ಇಂದು ಡಿಸೆಂಬರ್‌ 29  ರಾಷ್ಟ್ರಕವಿ  ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

ಮಲೆನಾಡಿನ ಹಚ್ಚಹಸಿರು ಪರಿಸರ, ಕಾಜಾಣ, ಕವಿಶೈಲ, ಬಂಡೆ ಕಲ್ಲಿನ ಮೇಲೆ ಕುಳಿತಿರುವ ಕುವೆಂಪು ಅವರು ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಚಿತ್ರದ ಹಿಂಬದಿ ಕನ್ನಡದಲ್ಲಿ ಗೂಗಲ್‌ ಎಂದು ಬರೆಯಲಾಗಿದೆ.

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ 29, 1904 – ನವೆಂಬರ್ 11, 1994), ಕನ್ನಡದ ಅಗ್ರಮಾನ್ಯ ಕವಿ,ಕಾದಂಬರಿಕಾರ,ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ‘ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಬಾಲ್ಯ

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಶಿಕ್ಷಣ

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಪಡೆದರು. ಟಿ.ಎಸ್.ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ನಂತರ ಪ್ರಾಂಶುಪಾಲರೂ ಆಗಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ

ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ನಿಧನ

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಸಾಹಿತ್ಯ:-

ಬೊಮ್ಮನಹಳ್ಳಿ ಕಿಂದರಿ ಜೋಗಿ, ಕೊಳಲು, ಕಥನ ಕವನಗಳು, ಕಲಾ ಸುಂದರಿ, ನವಿಲು, ಪಕ್ಷಿಕಾಶಿ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ 30ಕ್ಕೂ ಹೆಚ್ಚು ಕಾವ್ಯ ಕೃತಿಗಳು. ಜಲಗಾರ, ಯಮನಸೋಲು, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಇತರೆ ನಾಟಕಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ವಿಮರ್ಶೆ/ಕಾವ್ಯ ಮೀಮಾಂಸೆ-ಕಾವ್ಯ ,ಶಿಶುಸಾಹಿತ್ಯ ಹೀಗೆ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಜ್ಞಾನಪೀಠ, ರಾಜ್ಯ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿವೆ.

ಮೂಲ:

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕದ ಸಾಧಕರು, ದೇಗುಲ ದರ್ಶನ

    ಕ್ಯಾನ್ಸರ್ ಖಾಯಿಲೆ ಹೋಗಲಾಡಿಸಲು ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ. ಇಲ್ಲಿದೆ ಅಗೋಚರ ಶಕ್ತಿ.

    ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ್ಟೇ ಎಂದು ಕೈ ಚೆಲ್ಲಿಬಿಡುತ್ತಾರೆ. ಮನುಷ್ಯರೂ ಅಷ್ಟೇ ಕೊನೆಯ ಕ್ಷಣದಲ್ಲಿ ಏನಾದರೂ ಚಮತ್ಕಾರ ಆಗುತ್ತದೋ ಎಂದು ದೇವರ ಮೊರೆ ಹೋಗುತ್ತಾರೆ. ದೇವರ ಕೃಪೆಯಿಂದ ಸಾಕಷ್ಟು ಚಮತ್ಕಾರಗಳಾಗಿರುವುದರ ಬಗ್ಗೆ ನೀವು ಕೇಳಿರಬಹುದು. ಅಂತಹದ್ದೇ ಒಂದು ಚಮತ್ಕಾರವನ್ನು ಉಂಟು ಮಾಡುವ ದೇವಸ್ಥಾನ ತುಮಕೂರಿನಲ್ಲಿದೆ. ಜನರು ತಮ್ಮ ಯಾವುದೇ ದೊಡ್ಡ ದೊಡ್ಡ ಕಾಯಿಲೆಗಳಿಗೆ…

  • ಸ್ಪೂರ್ತಿ

    ಈಕೆಯ ಅತೀ ಉದ್ದವಾದ ಕೂದಲು ಗಿನ್ನಿಸ್ ದಾಖಲೆಗೆ ಸೇರಿದೆ..!ತಿಳಿಯಲು ಈ ಲೇಖನ ಓದಿ..

    ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.

  • ದೇಶ-ವಿದೇಶ

    2018ರ ಮೊದಲ ದಿನದ ಯಾವ ದೇಶದಲ್ಲಿ ಎಷ್ಟು ಶಿಶುಗಳ ಜನನ..!ತಿಳಿಯಲು ಈ ಲೇಖನ ಓದಿ..

    2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.

  • ಜ್ಯೋತಿಷ್ಯ

    ಪ್ರೇಮಿಗಳ ದಿನದಂದು ಈ ರಾಶಿಗಳ ವ್ಯಕ್ತಿಗಳಿಗೆ ಸಿಗಲಿದೆ ಪ್ರೀತಿ..!

    ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…

  • ಸಿನಿಮಾ

    ಮುಂಬೈನ ರಸ್ತೆ ರಸ್ತೆಗಳಲ್ಲಿ ಕನ್ನಡದ KGF ಹವಾ..!

    ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…

  • ಸಿನಿಮಾ

    ನಾಯಕ ನಟ ದುನಿಯಾ ವಿಜಿ ರವರಿಗೆ ಕೋಲಾರದಲ್ಲಿ ಭರ್ಜರಿ ಸ್ವಾಗತ

    ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…