ದೇವರು-ಧರ್ಮ

ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ!ಈ ಆಚರಣೆ ಮಾಡಿದ್ರೆ ಏನಾಗುತ್ತೆ ಗೊತ್ತಾ..?

1343

ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಏನಿದು ವೈಕುಂಠ ಏಕಾದಶಿ..?

“ವೈಕುಂಠಏಕಾದಶಿ” ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”, ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ ಹೀಗಿದೆ: “ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತೆಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

“ಏಕಾದಶಿ” ಎಂದರೆ ಹನ್ನೊಂದನೆಯ ತಿಥಿ. “ಏಕಾದಶಿ” ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು. ಎಂದರೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.

ವೈಕುಂಠ ಏಕಾದಶಿಯ ಪ್ರಾಮುಖ್ಯತೆ…

ವೈಕುಂಠ ಏಕಾದಶಿಯ ಪ್ರಾಮುಖ್ಯತೆ ಪದ್ಮ ಪುರಾಣದಲ್ಲಿ ಉಲ್ಲೇಖವಾಗಿದೆ. ಪುರಾಣದ ಪ್ರಕಾರ ವಿಷ್ಣುವು ಏಕಾದಶಿ, ಅಂದರೆ ಹೆಣ್ಣಿನ ರೂಪ ಪಡೆದು ಮುರನ್ ಎಂಬ ರಾಕ್ಷಸನನ್ನು ಮಾರ್ಗಶಿರ ಮಾಸದಲ್ಲಿ ಕೊಲ್ಲುತ್ತಾನೆ. ಇಂದಿನ ದಿನ ವಿಷ್ಣುವನ್ನು ಯಾರು ಪೂಜಿಸುತ್ತಾರೋ ಅಂಥವರು ಸತ್ತ ಮೇಲೆ ಮೋಕ್ಷವನ್ನು ಪಡೆದು ವೈಕುಂಠವನ್ನು ಸೇರುತ್ತಾರೆ ಎಂದು ವಿಷ್ಣು ಹೇಳುತ್ತಾನೆ.

ಏಕಾದಶಿ ಆಚರಣೆ ಮಾಡುವುದು ಹೇಗೆ..?

ಅಂದು ವೈಕುಂಠ ಏಕಾದಶಿ ಆಚರಣೆ ಮಾಡಲು ಇಷ್ಟ ಪಟ್ಟವರು ಹುಳಿ, ಉಪ್ಪು, ಖಾರ ಇರುವ ತಿಂಡಿಗಳನ್ನು ಸೇವಿಸಬಾರದು.ಹಾಲು,ಬಾಳೆಹಣ್ಣು,ಸಜ್ಜಿಗೆ ತಿನ್ನಬಹುದು. ಎಲ್ಲಾ ಏಕಾದಶಿಯ ದಿನಗಳ ಹಾಗೆ ಇಂದಿನ ದಿನವೂ ಜನರು ಉಪವಾಸ ಮಾಡಿ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಕೆಲವರು ಜಪ, ತಪ್ಪಸ್ಸು ಹಾಗು ಹರಿ ಕೀರ್ತನೆಯನ್ನು ಹಾಡುತ್ತಾರೆ. ಏಕಾದಶಿಯಂದು ಅಕ್ಕಿ ಸೇವಿಸುವುದಲ್ಲಿ ಏಕೆಂದರೆ ನಂಬಿಕೆಗಳ ಪ್ರಕಾರ ಮುರನ್ ಎಂಬ ರಾಕ್ಷಸನು, ತಿಂದಿರುವ ಅನ್ನದ ಅಗಳಲ್ಲಿ ಏಕಾದಶಿಯ ದಿನ ಅವಿತುಕೊಂಡಿರುತ್ತಾನೆ.

ಭಗವಂತನ ದರ್ಶನ ಮಾಡುವುದು ಹೇಗೆ..?

ಇಂದಿನ ದಿನ ವೈಕುಂಠದ ಬಾಗಿಲಿಗಳು ತೆರೆದಿರುತ್ತದೆ. ವಿಷ್ಣು ದೇವಸ್ಥಾನಗಳಲ್ಲಿ ಈ ದಿನ ಅತಿ ವಿಶೇಷವಾದದ್ದು ಹಾಗು ಇಂದಿನ ದಿನ ವೈಕುಂಠ ದ್ವಾರ ಎಂಬ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭ ಗುಡಿಯ ಒಳಭಾಗವನ್ನು ಸುತ್ತುವರೆದಿರುವ ಈ ದ್ವಾರದ ಮೂಲಕ ಭಕ್ತರು ಪ್ರದಕ್ಷಿಣೆಯನ್ನು ಹಾಕುತ್ತಾರೆ. ವೈಕುಂಠ ಏಕಾದಶಿ ಶ್ರೀರಂಗಂ ನಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನ, ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ, ಭದ್ರಾಚಲಂ ದೇವಸ್ಥಾನ ಹಾಗು ಮುಂತಾದ ದೇವಸ್ಥಾನಗಳಲ್ಲಿ ಬಹಳ ವಿಶೇಷ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ.

ವೈಕುಂಠ ದ್ವಾರದಲ್ಲಿ ತೋರಿ ಹೋಗುವುದೆಂದರೆ ನಾವು ತಲೆ ಬಾಗಿ ಹೋಗಬೇಕು. ಇಲ್ಲಿ ತಲೆ ಬಾಗುವುದರ ಅರ್ಥ ಏನೆಂದರೆ,ನಮ್ಮ ಅಹಂಕಾರವನ್ನು ಕಳೆದುಕೊಳ್ಳುವುದು.ಅಂದರೆ ನಾವು ಅಹಂಕಾರ ಬಿಟ್ಟಾಗ ಮಾತ್ರ ನಿಜವಾದ ಭಗವಂತನ ದರ್ಶನವಾಗುತ್ತದೆ.

ಮುಕ್ಕೋಟಿ ದ್ವಾದಶಿ ಅಂದರೇನು..?

ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ. ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ. ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ. ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು . ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ.

 

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಜುಲೈ 1ರಿಂದ ಜಾರಿಗೆ ಬರುವ ಈ ವೆವಸ್ಥೆಯಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ!ತಿಳಿಯಲು ಈ ಲೇಖನಿ ಓದಿ…..

    ಜುಲೈ 1ರಿಂದ ಜಾರಿಗೆ ಬರುವ ಕೇಂದ್ರ ಸರ್ಕಾರದ ಏಕರೂಪ ತೆರಿಗೆ ವೆವಸ್ಥೆ ಜಿಎಸ್ಟಿದ(ಸರಕು ಮತ್ತು ಸೇವಾ ತೆರಿಗೆ),ಬೇರೆ ಬೇರೆ ಕ್ಷೇತ್ರಗಳಲ್ಲೂ ಬದಲಾವಣೆ ತರಲಿದೆ. ಆದ್ದರಿಂದ ಜುಲೈ 1 ರಿಂದ ಜಾರಿಗೆ ಬರುವ ಈ ತೆರಿಗೆ ವೆವಸ್ಥೆಯಿಂದ ನಮ್ಮ ದೇಶದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿಗಾಗಿ ಮುಂದೆ ಓದಿ…

  • ಸುದ್ದಿ

    ಪತಿಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಂತಹ ಮಹಿಳೆ.. ಕಾರಣ?

    ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ…

  • ಸಿನಿಮಾ

    ಹಾಲಿವುಡ್’ಗೆ ಹಾರಲಿರುವ ಸೂಪರ್ ಸ್ಟಾರ್ ‘ಕಿಚ್ಚ ಸುದೀಪ್’!

    ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್’ರವರು ಸ್ಯಾಂಡಲ್‍ವುಡ್,ಕಾಲಿವುಡ್, ಟಾಲಿವುಡ್, ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಈಗ ಹಾಲಿವುಡ್ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  • ಸಾಧನೆ, ಸ್ಪೂರ್ತಿ

    ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ.

    ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ…

  • bank

    ಎಟಿಎಂ ನಲ್ಲಿ ‘ನೋಟು’ ಬರದಿದ್ರೆ ಏನು ಮಾಡಬೇಕು…?

    ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ.ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಎಟಿಎಂಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬೇರೆ ಎಟಿಎಂಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತ್ರ ಬರುವ ಸ್ಲಿಪ್ ನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ. ಕೆಲವೊಮ್ಮೆ ಹಣ ಡ್ರಾ…