ದೇವರು-ಧರ್ಮ

ಈ ರಾಜ್ಯದ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆ ಬ್ಯಾನ್..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

363

ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್‌’ ರಾಜ್ಯದ ದೇವಸ್ಥಾನಗಳಲ್ಲಿ ಹೊಸ ವರ್ಷ ಆಚರಿಸಿದಂತೆ ಆದೇಶ ಮಾಡಿದೆ.

ಈ ಆಚರಣೆ ಭಾರತೀಯ ವೇದ ಸಂಸ್ಕೃತಿಯಲ್ಲ ಎಂದು ಉಲ್ಲೇಖಿಸಲಾಗಿದ್ದು,ಚೈತ್ರಮಾಸದಲ್ಲಿ ಬರುವ ಯುಗಾದಿಯೇ ಹಿಂದುಗಳಿಗೆ ಹೊಸ ವರ್ಷದ ಮೊದಲ ದಿನ. ಹಾಗಾಗಿ ಜನವರಿ 1 ರಂದು ದೇವಸ್ಥಾನಗಳಿಗೆ (ಹೂ ಮತ್ತು ದೀಪಗಳಿಂದ) ವಿಶೇಷ ಅಲಂಕಾರ ಮಾಡಿ ಹಬ್ಬದ ವಾತಾವರಣ ಸೃಷ್ಟಿಸಬೇಡಿ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದು ನಮ್ಮ ಹಿಂದೂ ಭಾರತೀಯ ಸಂಸ್ಕೃತಿಯನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವದಾಗಿದೆ.ಹಾಗಾಗಿ ಜನವರಿ 1ರಂದು ದೇವಸ್ಥಾನಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡುವುದು ಸರಿಯಲ್ಲ ಎಂದು ಹೇಳಲಾಗಿದೆ.

ಆಂಧ್ರಪ್ರದೇಶದ ದೇವಸ್ಥಾನಗಳಲ್ಲಿ ಜನವರಿ 1ರಂದು ವಿಶೇಷ ಪೂಜೆ ಮತ್ತು ದರ್ಶನದ ವ್ಯವಸ್ಥೆ ಕಲ್ಪಿಸುವ ಆಚರಣೆ ಬಹಳ ವರ್ಷಗಳಿಂದ ಸಾಮಾನ್ಯವಾಗಿ ನಡೆದುಕೊಂಡು ಬಂದಿದೆ. ಈ ದಿನದಂದು ತಿರುಮಲ, ಶ್ರೀಶೈಲ ಮತ್ತು ವಿಜಯವಾಡದ ಕನಕ ದುರ್ಗ ಮಂದಿರಕ್ಕೆ ಸಹಸ್ರಾರು ಜನ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ