ರಾಜಕೀಯ

ಬುದ್ದಿವಂತ ಉಪ್ಪಿಯ 24 ಅಂಶಗಳ ಈ ಸೂಪರ್ ಪ್ರಣಾಳಿಕೆಯಲ್ಲಿ ಏನೇನಿವೆ ಗೊತ್ತಾ..?ನಾನುಗೆ ನೀವೂ ಕೂಡ ಸಲಹೆ ನೀಡಲು ಇಲ್ಲಿದೆ ಮೊಬೈಲ್ ನಂಬರ್ ವಿಳಾಸ…

1878

ಚುನಾವಣೆ ಹತ್ತಿರವಾದಂತೆ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಬಿರುಸುಗೊಂಡಿವೆ. ನಟ ಹಾಗೂ ನಿರ್ದೇಶಕ  ರಿಯಲ್​ ಸ್ಟಾರ್​ ಉಪೇಂದ್ರ ಸಾರಥ್ಯದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.

 

24 ಅಂಶಗಳಿರುವ ಈ ಪ್ರಣಾಳಿಕೆಯಲ್ಲಿ ಸಂಪೂರ್ಣ ಪಾರದರ್ಶಕ ಆಡಳಿತ ನೀಡುವ ಬಗ್ಗೆ ಆಶ್ವಾಸನೆ ನೀಡಲಾಗಿದೆ. ಈ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಓದಿದ್ರೆ, ನಿಮಗೆ ಅನ್ನಿಸಬಹುದು ಇದು ಯಾವುದೋ ಫಿಲ್ಮಗೆ ಬರೆದ ಸ್ಕ್ರಿಪ್ಟ್ ನಂತೆ ಇದೆಯಲ್ಲಾ ಎಂದು. ಯಾಕೆಂದ್ರೆ ಈ ರೀತಿ ಅಂಶಗಳನ್ನು ನಾವು ಚಲನಚಿತ್ರಗಳಲ್ಲಿ ಮಾತ್ರ ನೋಡಲಿಕ್ಕೆ ಸಾದ್ಯ.ಉಪೇಂದ್ರರವರು ಗೆದ್ದು ಈ ಪ್ರನಾಳಿಕೆಯಲ್ಲಿರುವಂತೆ ಆಡಳಿತ ಮಾಡಿದ್ದೇ ಆದಲ್ಲಿ ನಮ್ಮ ರಾಜ್ಯ 2020ಗೆ “ಸೂಪರ್ ರಾಜ್ಯ” ಆಗೋದ್ರಲ್ಲಿ ಡವ್’ಟೆ ಬೇಡ…

 

ಇಲ್ಲಿವೆ ನೋಡಿ ಈ ಪ್ರಣಾಳಿಕೆಯಲ್ಲಿರುವ 24 ಅಂಶಗಳು:-

  • ಪ್ರಜೆಗಳನ್ನು ಸೇರಿಸಿಕೊಂಡು ಸಂಪೂರ್ಣ ಪಾರದರ್ಶಕ ಆಡಳಿತ ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.
  • ಪ್ರಜೆಗಳ ನೇರ ಸಂಪರ್ಕಕ್ಕಾಗಿ ಟಿವಿ, ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್)ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು.
  • ಪ್ರಜೆಗಳು ಮೊಬೈಲ್ ಅಪ್ಲಿಕೇಶನ್‍ ಮೂಲಕ ತಮ್ಮ ಕ್ಷೇತ್ರ, ಗ್ರಾಮ, ನಗರಗಳ ಸಮಸ್ಯಗಳ ಕುರಿತು ಚಿತ್ರಗಳು, ವಿಡಿಯೋ, ಲಿಖಿತ ಪತ್ರ, ಮತ್ತು ಆಡಿಯೋ ಮಾಡಿ ಆ ಕ್ಷೇತ್ರಗಳಿಗೆ ಸಂಭಂದಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ದೂರುಗಳನ್ನು ಸಲ್ಲಿಸಬಹುದು, ಇದಕ್ಕೆ ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಈ ದೂರು ಮೇಲ್ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯವರೆಗೂ ವರ್ಗಾವಣೆಯಾಗುತ್ತದೆ.
  • ಸರಿಯಾದ ಸಮಯಕ್ಕೆ ಜನಗಳಿಗೆ ಸ್ಪಂದಿಸಿ ಅವರ ಸಮಸ್ಯಗಳನ್ನು ಪರಿಹರಿಸಿದಂತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಅವರ ಮುಂದಿನ ಚುನಾವಣೆಗೆ ಮತ್ತು ಅಧಿಕಾರಿಗಳ ಬಡ್ತಿಗೆ ಮಾನದಂಡವಾಗಲಿದೆ.
  • ಕಡಿಮೆ ಅಂಕಗಳಿಸಿದವರಿಗೆ ಶಿಸ್ತುಕ್ರಮ ಮತ್ತು ವೇತನ ಕಡಿತ ಮಾಡಲಾಗುವುದು.
  • ಪ್ರತಿ ಇಲಾಖೆಯ ನೌಕರರನ್ನು ಗುರುತಿಗೆ, ಆಯಾ ಇಲಾಖೆಗಳಿಗೆ ಸಂಬಂದಿಸಿದಂತೆ  ಸಮವಸ್ತ್ರ ಮತ್ತು ಇಲಾಖೆಯ ಬ್ಯಾಡ್ಜ್’ಗಳನ್ನು ಧರಿಸಬೇಕಾಗುತ್ತದೆ. ಪ್ರಜೆಗಳು ಇಲಾಖೆಗಳ ನೌಕರರನ್ನು ಗುರುತಿಸಲು ಇದು ಸಹಾಯವಾಗುತ್ತದೆ.
  • ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ.
  • ವಿಧಾನಸೌಧದ ಕಾರ್ಯ ಚಟುವಟಿಕೆ ಪರದೆ ಮೇಲೆ ಪ್ರಸಾರ ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯ ಚಟುವಟಿಕೆ, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.
  • ಮಾಧ್ಯಮಗಳಲ್ಲಿ ಎಲ್ಲ ಜನಪ್ರತಿನಿಧಿಗಳು ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ-ಪುರಾವೆಗಳೊಂದಿಗೆ ದೃಶ್ಯ ಮಾಧ್ಯಮಗಳ ಮುಖಾಂತರ ನೇರಪ್ರಸಾರದೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಈ ಪ್ರಕ್ರಿಯೆಗಳನ್ನು ಪ್ರಜೆಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸುವಂತೆ ಮಾಡಲಾಗುವುದು ಇದೆ ಸಮಯದಲ್ಲಿ ಪ್ರಜೆಗಳು ಸಹ ನೇರ ಚರ್ಚೆಯೊಂದಿಗೆ ಭಾಗವಹಿಸಿ ತಮ್ಮ ಸಮಸ್ಯಗಳನ್ನು ಬಗೆಹರಿಸಕೊಲ್ಲಬಹುದು.
  • ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಅದರ ಪ್ರತಿಯೊಂದು ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ಮತ್ತು ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಪಾರದರ್ಶಕವಾಗಿ ಪ್ರಸಾರ ಮಾಡಲಾಗುವುದು.
  • ಗುತ್ತಿಗೆದಾರರಿಗೆ ಕೊಡಲಾಗುವ ಯೋಜನೆಗಳ ಖರ್ಚು- ವೆಚ್ಚಗಳನ್ನು ಅಧಿಕೃತ ದೃಶ್ಯ ದಾಖಲೆಗಳ(ಬಿಲ್) ಮತ್ತು ಹಾಜರಾತಿ ವಿವರಣೆಗಳ ಆಧಾರದ ಮೇಲೆಯೇ ಕೊಡಲಾಗುವುದು. ಕಾರ್ಮಿಕರ ಹಾಜರಾತಿ ದಾಖಲೆಗಳನ್ನು ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸತಕ್ಕದ್ದು.
  • ಪ್ರತಿ ಕಾಮಗಾರಿಯ ಪ್ರತಿ ಹಂತವೂ ಬೆಳವಣಿಗೆಗಳ ದಾಖಲೆಗಳೊಂದಿಗೆ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ನೋಡಲು ಅವಕಾಶವಿರುತ್ತದೆ.
  • ಜನಪ್ರತಿನಿಧಿ, ನೌಕರರ ಕಾರ್ಯ ಟಿವಿಯಲ್ಲಿ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.
  • ತಿಂಗಳಿಗೊಮ್ಮೆ ಪ್ರಜೆಗಳು, ಜನಪ್ರತಿನಿಧಿ, ನೌಕರರ ಸಂವಾದಗಳು ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರಗೊಳ್ಳುತ್ತವೆ.
  • ಸಿಎಂ, ಸಚಿವರಿಂದ ಆಗಾಗ ಪರಿಶೀಲನೆ ಮತ್ತು ಪ್ರಜೆಗಳಿಗೆ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ.
  • ಆಡಳಿತ ಸರ್ಕಾರವು ಯಾವುದೇ ಸರ್ಕಾರೀ ವರ್ಗಾವಣೆಗಳನ್ನು ಮಾಡುವಾಗ ಸರಿಯಾದ ಕಾರಣ, ದಾಖಲೆಗಳು ಮತ್ತು ಸಾಕ್ಷಿಗಳನ್ನು ಕೊಟ್ಟು ನೇರ ಪ್ರಸಾರದೊಂದಿಗೆ ವರ್ಗಾವಣೆಗಳನ್ನು ಮಾಡಬೇಕು.
  • ಎಲ್ಲಾ ಸರ್ಕಾರೀ ಇಲಾಖೆಗಳ ಸಂದರ್ಶನಗಳು ಹಾಗೂ ಆಯ್ಕೆಗಳ ಪ್ರಕ್ರಿಯೆಗಳು ದೃಶ್ಯ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಲಾಗುವುದು.
  • ತಿಂಗಳಿಗೊಮ್ಮೆ ತೆರಿಗೆ ಸಂಗ್ರಹ, ಆದಾಯ ದಾಖಲೆ ಮಾಹಿತಿಗಳನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು.
  • ಮಾಹಿತಿ ಕೊಟ್ಟರೆ ಮಾತ್ರ ಚುನಾಯಿತ ಜನಪ್ರತಿನಿಧಿಗೆ ವೇತನಗಳು, ಸೌಲಭ್ಯಗಳು ದೊರೆಯುತ್ತದೆ.
  • ಪ್ರಜೆಗಳು ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡುವಂತೆ, ಮಾಜಿ ಜನಪ್ರತಿನಿಧಿ, ನೌಕರರು ಪಿಂಚಣಿಗಳನ್ನು ಬಿಡಬಹುದು.
  • ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟ ಪಿಂಚಣಿ ಹಣದಿಂದ, ವೃದ್ಧಾಶ್ರಮ, ವಸತಿರಹಿತರ ಅಭಿವೃಧ್ಧಿ ಮಾಡಲಾಗುವುದು.
  • ಎಲ್ಲಾ ಸರ್ಕಾರಿ ಯೋಜನೆಗಳು ಸಂಪೂರ್ಣಗೊಂಡು ಸಂಬಂಧಪಟ್ಟ ಅಧಿಕಾರಿಗಳ ಪರೀಕ್ಷೆ-ಅನುಮತಿ ನಂತರ ಸಾರ್ವಜನಿಕರ ಬಳಕೆಗೆ ನೇರವಾಗಿ ತೆರೆದಿಡಲಾಗುವುದು. ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು/ ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ.
  • ಶಾಸಕಾಂಗ ವೇತನ, ಪಿಂಚಣಿ & ಭತ್ಯೆ ಕಾಯ್ದೆ 1952ರ ಕಾನೂನು ತಿದ್ದುಪಡಿ ಮಾಡಲಾಗುವುದು.
  • ಮೇಲ್ಕಂಡ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರಲು ಅಗತ್ಯ ಕಾನೂನು ಜಾರಿ ಮಾಡಲಾಗುವುದು.

ಇಲ್ಲಿ ಓದಿ:-ಆಟೋ ಚಾಲಕನಿಂದ ಬುದ್ದಿವಂತನಿಗೆ ಬಂದ ಆ ಪತ್ರದಲ್ಲಿ, ಇದ್ದ ಅಸಲಿ ವಿಷಯ ಏನು ಗೊತ್ತಾ..?ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

ನೀವೂ ಸಲಹೆ ನೀಡಬಹುದು:-

ಇದು ಮೊದಲನೆ ಭಾಗವಾಗಿದ್ದು, ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಉಪೇಂದ್ರರವರು ಹೇಳಿದ್ದಾರೆ.

ಪ್ರಣಾಳಿಕೆಗೆ ಸಲಹೆ ಮತ್ತು ಅಭಿಪ್ರಾಯ ನೀಡಲು ಮೊಬೈಲ್‌- 9845396204, 9845396804 ಮತ್ತು ideaskpjpuppi@ gmail.com

 

 

 

 

 

 

 

 

 

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ