ಉದ್ಯೋಗ

ಶ್ರೀಮಂತರಾಗಲು ಭಾರತದಲ್ಲಿವೆ ಅತೀ ಹೆಚ್ಚು ಹಣ ಪಡೆಯುವ ಕೆಲಸಗಳು..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

782

ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿರುವ ಯಾವುದೇ ವ್ಯಕ್ತಿಗೆ ಹಣವಂತನಾಗುವ ಸಮಾನ ಅವಕಾಶವಿದೆ. ಇದಕ್ಕೆ ಸತತ ಪರಿಶ್ರಮ ಹಾಗೂ ಹಣಗಳಿಕೆಯ ಹಂತವನ್ನು ಮೆಟ್ಟಿಲು ಮೆಟ್ಟಿ ಲಾಗಿ ಏರಲು ಉತ್ತಮ ಉದ್ಯೋಗದ ನೆರವು ಬೇಕು. ಇದು ಸ್ವ ಉದ್ಯೊಗವೂ ಆಗಬಹುದು ಅಥವಾ ಅತಿಹೆಚ್ಚು ಗಳಿಕೆ ನೀಡುವ ಇತರ ಉದ್ಯೋಗವೂ ಆಗಬಹುದು.

ಅಂದ ಮಾತ್ರಕ್ಕೆ ಉದ್ಯೋಗ ಮಾಡುವ ಎಲ್ಲರೂ ಭಾರೀ ಹಣ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಈ ಉದ್ಯೋಗವನ್ನು ಮಾಡುವವರಿಗೆ ಅತಿಹೆಚ್ಚು ವೇತನ ನೀಡಬೇಕಾದರೆ ಬೇರಯವ ರಲ್ಲಿ ಇರದ ಬಹಳಷ್ಟು ಗುಣಗಳು, ಕೌಶಲ್ಯ ಹಾಗೂ ಅಪಾರವಾದ ಮಾಹಿತಿ ಇವರಲ್ಲಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಪಡೆದಿರುವುದು ಉತ್ತಮ ವಿಶ್ವವಿದ್ಯಾಲಯದಲ್ಲಿ ಎಂದು ಪ್ರಮಾಣಿ ಸಲೂಬೇಕಾಗುತ್ತದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿಯಾಗ ಬಹುದು. (ವೇತನವನ್ನು ವಾರ್ಷಿಕ ರೂ. ಗಳಲ್ಲಿ ನೀಡಲಾಗಿದೆ

ವೃತ್ತಿಪರ ಕಾರ್ಯನಿರ್ವಾಹಕರು  :-                                                                                                                                                   ವೃತ್ತಿಪರ ಕಾರ್ಯನಿರ್ವಾಹಕರನ್ನು ಸಂಸ್ಥೆ/ ಕಂಪನಿಗಳ ಆತ್ಮ ಎಂದು ಕರೆಯಬಹುದು. ಸಂಸ್ಥೆ ನಿರ್ವಹಿಸಬೇಕಾದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವುದು ಇವರ ಕಾಯಕ. ಇದಕ್ಕೆ ಪ್ರಾರಂಭಿಕ ಹಂತದಿಂದಲೇ ಕಠಿಣ ಪರಿಶ್ರಮ ಅಗತ್ಯ. ಒಂದು ಬಾರಿ ಪ್ರಾರಂಭಿಕ ಹಂತ ದಾಟಿದ ಬಳಿಕ ಮತ್ತೆ ಹಿಂದಿರುಗಿ ನೋಡುವ ಅವಶ್ಯಕತೆಯೇ ಇಲ್ಲ. ಈ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಪರಿಣಿತಿ ಪಡೆದಂತೆ ಹೆಚ್ಚು ಹೆಚ್ಚು ವೇತನವನ್ನು ನಿರೀಕ್ಷಿಸಬಹುದು. ಪ್ರಾರಂಭಿಕ ಹಂತ – ರೂ. 3,೦೦,೦೦೦, ಮಧ್ಯಮ ಹಂತ – ರೂ. 25,೦೦,೦೦೦, ಅನುಭವಿ ಹಂತ- ರೂ. 8೦,೦೦,೦೦೦

ಬ್ಯಾಂಕ್ ಹೂಡಿಕೆದಾರ:

ಈ ವೃತ್ತಿಯಲ್ಲಿರುವವರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಹಣ ಪಡೆಯುವಿಕೆ ಹಾಗೂ ಹೂಡಿಕೆಯ ಬಗ್ಗೆ ಸಲಹೆ ನೀಡುತ್ತಾರೆ. ಇವರು ಸತತವಾಗಿ ಮಾರುಕಟ್ಟೆಯ ಏರಿಳಿತ ಗಳನ್ನು ಅಭ್ಯಸಿಸುತ್ತಾ ಗ್ರಾಹಕರ ಮನೋಭಾವವನ್ನೂ ಪರಿಗಣಿಸಿ ಸಂಸ್ಥೆಗೆ ಲಾಭ ತರುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಇವರಿಗೆ “Money Man” ಎಂಬ ಅನ್ವರ್ಥ ನಾಮವನ್ನೂ ನೀಡಲಾಗಿದೆ. ಪ್ರಾರಂಭಿಕ ಹಂತ- ರೂ. 12,೦೦,೦೦೦, ಮಧ್ಯಮ ಹಂತ – ರೂ. 3೦,೦೦,೦೦೦, ಅನುಭವಿ ಹಂತ- ರೂ.5೦,೦೦,೦೦೦+

ಚಾರ್ಟರ್ಡ್ ಅಕೌಂಟೆಂಟ್:

ಇವರು ಒಂದುಸಂಸ್ಥೆಯ ಲೆಕ್ಕಪತ್ರ ಹಾಗೂ ವ್ಯಾಪಾರದ ಮೇಲೆ ಹಿಡಿತವನ್ನಿರಿಸಿ ಕೊಂಡಿರುತ್ತಾರೆ. ಇವರು ತಮ್ಮ ಕೆಲಸದ ಬಗ್ಗೆ ಜಾಗರೂಕರಾಗಿದ್ದು, ಸಂಸ್ಥೆಯ ಹಣದ ವಿಲೇವಾರಿ ಹಾಗೂ ಆದಾಯದ ಬಗ್ಗೆ ವಿವರಗಳನ್ನು ನೀಡುವಂತಿರಬೇಕು ಹಾಗೂ ಸದಾ ಉತ್ತಮವಾಗಿ ಕಾಣಿಸಿಕೊಳ್ಳುವಂತಿರಬೇಕು. ಈ ವೃತ್ತಿ ಭಾರತದಲ್ಲಿ ಅತಿ ಗೌರವಾತ ಹಾಗೂ ಹೆಚ್ಚಿನ ಆದಾಯ ತರುವಂತದ್ದಾಗಿದೆ. ಪ್ರಾರಂಭಿಕ ಹಂತ – ರೂ. 5,5೦,೦೦೦, ಮಧ್ಯಮ ಹಂತ – ರೂ. 12,8೦,೦೦೦, ಅನುಭವಿ ಹಂತ – ರೂ. 25,7೦,೦೦೦

ತೈಲ ಮತ್ತು ನೈಸರ್ಗಿಕ ಅನಿಲ ವಿಭಾಗದ ವೃತ್ತಿಪರರು:

ಈ ವಿಭಾಗ ಇದುವರೆಗೆ ಎಂದೂ ಬತ್ತದ ಲಾಭದ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ವಿಭಾಗದಲ್ಲಿರುವ ಕೆಲವು ವೃತ್ತಿಗಳು ಹೆಚ್ಚಿನ ವೇತನ ನೀಡುತ್ತವೆ. ಉದಾಹರಣೆಗೆ ಭೂ ಗರ್ಭ ಶಾಸ್ತ್ರಜ್ಞ, ಸಾಗರ ಅಭಿಯಂತರ ಇತ್ಯಾದಿ. ಅನುಭವಿ ಹಂತ – ರೂ. 15-2೦ ಲಕ್ಷ ನಿವ್ವಳ ಹಾಗೂ ಸಂಸ್ಥೆಯಿಂದ ಸಿಗುವ ಎಲ್ಲಾ ಸವಲತ್ತುಗಳು

ವಾಣಿಜ್ಯ ವಿಶ್ಲೇಷಕರು (ಬಿಸಿನೆಸ್ ಅನಾಲಿಸ್ಟ್):

ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರು ವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆಅತಿ ಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ. ಈ ವೃತ್ತಿಯಲ್ಲಿರುವವರು ವಾಣಿಜ್ಯದ ಅಂಕಿ ಅಂಶಗಳನ್ನು ಗಣಿತದ ಸೂತ್ರಗಳ ಮೂಲಕ ವಿವರಿಸಬಲ್ಲವರಾಗಿರಬೇಕು ಹಾಗೂ ನಿತ್ಯವೂ ಬದಲಾಗುವ ತಂತ್ರಜ್ಞಾನವನ್ನು ತಮ್ಮ ವಾಣಿಜ್ಯ ವಹಿವಾಟಿನ ಏಳಿಗೆಗೆ ಹೇಗೆ ಬಳಸಿಕೊಳ್ಳ ಬಹುದು ಎಂಬುದನ್ನು ಎಲ್ಲರಿ ಗಿಂತ ಮೊದಲು ಅರಿತು ಅಳವಡಿಸಿ ಕೊಳ್ಳುವುದು ಇವರ ವೃತ್ತಿಯ ಪ್ರಮುಖಸವಾಲಾಗಿದೆ. ಅಂದಾಜು ವೇತನ: ಪ್ರಾರಂಭಿಕ ಹಂತ: ರೂ. 6,೦೦,೦೦೦

ವೈದ್ಯಕೀಯ ವೃತ್ತಿಪರರು:

ಈ ವೃತ್ತಿಯಲ್ಲಿ ಹಿಂಜರಿತ ಎಂಬುದೇ ಎಲ್ಲ. ಎಲ್ಲಿಯವರೆಗೆ ಮನುಷ್ಯರು ಇರುತ್ತಾರೋ ಅಲ್ಲಿಯವರೆಗೆ ಈ ವೃತ್ತಿಯಲ್ಲಿ ಗಳಿಕೆ ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಗೌರವಾನ್ವಿತ ಹಾಗೂ ಆದ್ಯತೆಯ ವೃತ್ತಿಯಾದ ವೈದ್ಯ ವೃತ್ತಿಯಲ್ಲಿ ಜನರು ವೈದ್ಯೋ ನಾರಾಯಣಃ ಹರಿ ಎಂದೇ ಪರಿಗಣಿಸುತ್ತಾರೆ. ಈ ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿ ವೇತನ ಕಡಿಮೆ ಇದ್ದರೂ ದಿನಗಳೆದಂತೆ ವೇತನವೂ ಏರುತ್ತಾ ಹೋಗುತ್ತದೆ. ಸಾಮಾನ್ಯ ನೈಪುಣ್ಯತೆ – ರೂ. 4,8೦,೦೦೦, ಸಾಮಾನ್ಯ ಶಸ್ತ್ರ ಚಿಕಿತ್ಸಕ- ರೂ. 8,1೦,೦೦೦, ವೃತ್ತಿಪರ ವೈದ್ಯ- ರೂ.17,೦೦,೦೦೦

ವೈಮಾನಿಕ ವೃತ್ತಿ :

ಈ ವೃತ್ತಿಯಲ್ಲಿರುವವರಿಗೆ ಆದಾಯದ ಮಿತಿ ಆಗಸವೇ ಸರಿ. ಈ ವೃತ್ತಿಯಲ್ಲಿ ನೈಪುಣ್ಯತೆ ಪಡೆದವರು ವಾರ್ಷಿಕ ಇಪ್ಪತ್ತು ಲಕ್ಷದಷ್ಟು ವೇತನ ಪಡೆಯುತ್ತಾರೆ. ಸರಾಸರಿ ವೇತನ: ಕಮರ್ಷಿಯಲ್ ಪೈಲಟ್: ರೂ. 2೦,೦೦,೦೦೦, ಹೆಲಿಕಾಪ್ಟರ್ ಪೈಲಟ್- ರೂ. 18,೦೦,೦೦೦, ವಿಮಾನ ದುರಸ್ತಿ ಸಿಬ್ಬಂದಿ- ರೂ. 9,8೦,೦೦೦

ಕಾನೂನು ವೃತ್ತಿಪರರು :

ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರಾಗುವ ಅವಕಾಶ ತಾನೇ ತಾನಾಗಿ ಒದಗಿ ಬಂದಾಗ ಇದನ್ನು ಹಲವರು ನಿರಾಕರಿಸಿದ್ದಾರೆ. ಏಕೆಂದರೆ ವೃತ್ತಿಪರ ವಕೀಲರಾಗಿ ಗಳಿಸುದಷ್ಟು ವೇತನ ಉಚ್ಛನ್ಯಾಯಾಧೀಶರಿಗೆ ದೊರಕುವುದಿಲ್ಲ. ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಈ ವೃತ್ತಿಯಲ್ಲಿ ಪಳಗುತ್ತಾ ಹೋದಂತೆ ಪ್ರತಿವಾದಕ್ಕೂ ಹೆಚ್ಚು ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು. ಸರಾಸರಿ ವೇತನ: ಕಾರ್ಪೋರೇಟ್ (ಸಂಸ್ಥೆಗೆ ಮೀಸಲಾದ) ವಕೀಲರು- 6,1೦,೦೦೦, ಹಿರಿಯ ಅಟಾರ್ನಿ – 9,5೦,೦೦೦,

ಮಾರ್ಕೆಟಿಂಗ್ (ಮಾರುಕಟ್ಟೆ ಪ್ರವೀಣ):

ಯಾವುದೇ ವಹಿವಾಟಿನಲ್ಲಿ ಉತ್ಪನ್ನ ಅಥವಾ ಸೇವೆ ಮಾರಾಟ ವಾಗಿ ಹೋದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಈ ವೃತ್ತಿಯಲ್ಲಿರುವವರು ಗ್ರಾಹಕರ ಅಂತಃಕರಣವನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯ ಅಂತರಾಳವನ್ನು ಅರಿತು ಗ್ರಾಹಕರು ಈ ಉತ್ಪನ್ನಗಳಿಗೆ ಒಲವು ನೀಡುವಂತೆ ಉತ್ಪನ್ನ ಅಥವಾ ಸೇವೆಗಳನ್ನು ಬದಲಾವಣೆಗೊಳಪಡಿಸುವುದು ಸಹಾ ಇವರಿಗೆ ಕಾರ್ಯಗತ ವಾಗಿರಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 1,5೦,೦೦೦, ಮಧ್ಯಮ ಹಂತ- ರೂ. 5,೦೦,೦೦೦, ಅನುಭವಿ ಹಂತರೂ. 1೦,೦೦,೦೦೦+

 ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು:

ಇದೊಂದು ನಿತ್ಯಹರಿದ್ವರ್ಣದ ಉದ್ಯೋಗವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೇ ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 3,5೦,೦೦೦, ಮಧ್ಯಮ ಹಂತ- ರೂ. 8,3೦,೦೦೦, ಅನುಭವಿ ಹಂತ ರೂ. 15,5೦,೦೦೦

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಭೀಮ್ ಆ್ಯಪ್ ಇದ್ದವರಿಗೆ ಬಂಪರ್ ಆಫರ್.!1ರೂ ಕಳಿಸಿ 51ರೂಪಾಯಿಗಳ ಕ್ಯಾಶ್ಬ್ಯಾಕ್ ಪಡೆಯಿರಿ.!ಹೇಗೆಂದು ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡಿಜಿಟಲ್‌ ಪೇಮೆಂಟ್‌ ಮೊಬೈಲ್‌ ಆ್ಯಪ್‌ ಆಗಿರುವ ಭೀಮ್‌ ಅನ್ನು ಪ್ರಚಾರ ಪಡಿಸುವ ಸಲುವಾಗಿ ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ಗಳನ್ನು ನೀಡಲಿದೆ. ಭೀಮ್ ಆ್ಯಪ್’ನ್ನು ಪ್ರಧಾನಿ ನರೇಂದ್ರ ಮೋದಿಯವರು 30 ಡಿಸೆಂಬರ್ 2016ರಂದು ಬಿಡುಗಡೆ ಮಾಡಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ.   ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಭೀಮ್…

  • ಉಪಯುಕ್ತ ಮಾಹಿತಿ

    ರಥಸಪ್ತಮಿ ಮಹತ್ವ?

    *ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…

  • ಉಪಯುಕ್ತ ಮಾಹಿತಿ

    ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

    ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

  • ಉಪಯುಕ್ತ ಮಾಹಿತಿ

    ಬೆಳ್ಳುಳ್ಳಿ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ

    ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…

  • ಸುದ್ದಿ

    ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ,..!!

    ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು  ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ  ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು…

  • ಉಪಯುಕ್ತ ಮಾಹಿತಿ

    ಬಿಳಿ ಕೂದಲನ್ನು ಕಪ್ಪಾಗಿಸುವ ಅತೀ ಸುಲಭ ವಿಧಾನ..ಹೀಗೆ ಮಾಡಿ

    ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಗಳನ್ನು ಬಳಸುತ್ತಾರೆ. ಇಂತಹ ಕಲರ್ ಗಳು ಅನೇಕರಿಗೆ ಚರ್ಮದ ಖಾಯಿಲೆ ಅಥವಾ ಇನ್ಯಾವುದೋ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಅವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು ಇಲ್ಲಿವೆ. ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ. ತೆಂಗಿನೆಣ್ಣೆಯೊಡನೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಿ….