ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಡೆ ಹಲವಾರು ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.

ನೀವು ಈ ಮುಂಚೆ ಕೇಳಿರಬಹುದು. ರೋಡಿನಲ್ಲೂ ಚಲಿಸುವ, ಗಾಳಿಯಲ್ಲೂ ಹಾರುವ ವಾಹನ ಅನ್ವೇಷಣೆಯ ಹಂತದಲ್ಲಿದೆ ಎಂದು. ಹೌದು ಈಗ ಆ ಹಾರುವ ಕಾರಿನ ಅಭಿವೃದ್ಧಿ ಕಾರ್ಯ ಮುಗಿದಿದ್ದು, 2018 ರಲ್ಲಿ ಹಾರುವ ಕಾರು ರೋಡಿಗಿಳಿಯಲಿದೆ. ಅಲ್ಲಾ, ಗಾಳಿಯಲ್ಲಿ ಹಾರಲಿದೆ.
ಹಾರುವ ಕಾರು:-
ತಂತಾನೇ ಓಡಬಲ್ಲ ಕಾರಿದ್ದರೆ ಅಪಗಾತಗಳನ್ನು ತಡೆಗಟ್ಟಬಹುದು ಆದರೆ ರಸ್ತೆಯ ದಟ್ಟಣೆಗೆ ಏನು ಮಾಡುವುದು ? ಹಾರುವ ಕಾರು ಇಂತದೊಂದು ಕೇಳ್ವಿಗೆ ಉತ್ತರವಾಗಬಲ್ಲದು. ರಸ್ತೆಯಲ್ಲಿ ಓಡುವ ಕಾರು ಮತ್ತು ಬಾನಲ್ಲಿ ಹಾರುವ ವಿಮಾನದ ನಡುವಿನ ನಡೆ ಇದು.

ಕಾರು ಮೇಲೆ ಹಾರಬೇಕೆಂದರೆ ಅದು ನೆಲಸೆಳೆತವನ್ನು (earth’s gravity) ಮೀರಬೇಕು ಅಂದರೆ ಅದಕ್ಕೆ ಇದಿರು-ನೆಲಸೆಳೆತ (anti-gravity) ಒದಗಿಸುವಂತ ಚಳಕಗಳು ಎಟುಕಬೇಕು, ಅದೂ ಕಡಿಮೆ ಬೆಲೆಯಲ್ಲಿ.

ಸ್ಯಾಮ್ ಸನ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿರುವ ಹಾರುವ ಕಾರಿನ ಹೆಸರು ‘ಸ್ಯಾಮ್ ಸನ್ ಸ್ವಿಚ್ ಬ್ಲೇಡ್’ ಇದಕ್ಕೆ ಮೂರು ಚಕ್ರಗಳಿದ್ದು, ಎರಡು ಆಸನಗಳನ್ನು ಜೋಡಿಸಲಾಗಿದೆ. ರಸ್ತೆಯಲ್ಲೂ ಹಾಗೂ ಗಾಳಿಯಲ್ಲೂ ಹಾರುವ ಜಗತ್ತಿನ ಮೊದಲ ವಿಶಿಷ್ಟ ಕಾರು ಇದಾಗಿದೆ.

ಸ್ವಿಚ್ ಬ್ಲೇಡ್ ಕಾರನ್ನು ಎಲ್ಲೆಂದರಲ್ಲಿ ಹಾರಿಸುವಂತಿಲ್ಲ. ಬದಲಾಗಿ ಮೊದಲು ವಿಮಾನ ಹಾರುವಂತಹ ರನ್ ವೇ ಸ್ಥಳಕ್ಕೆ ಕಾರನ್ನು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಅಲ್ಲಿಂದ ಹಾರಿಸಬೇಕು. ಕಾರನ್ನು ಗಾಳಿಯಿಂದ ಕೆಳಗಿಳಿಸುವಾಗಲು ರನ್ ವೇ ಇರುವಂತಹ ಸ್ಥಳದಲ್ಲೆ ಇಳಿಸಬೇಕು. ಬಳಿಕ ತಲುಪಬೇಕಾದ ಜಾಗಕ್ಕೆ ಸಾಮಾನ್ಯ ಕಾರಿನಂತೆ ಚಲಾಯಿಸಿಕೊಂಡು ಹೋಗಬಹುದು.

ಗಂಟೆಗೆ 305 ಕಿ.ಮೀ ಓಡುವ,13,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಈ ಕಾರಿಗಿದೆ. 6.3 ಅಡಿ ಉದ್ದದ,8.2 ಅಡಿ ಅಗಲದ ರೆಕ್ಕೆಗಳನ್ನು ಬೇಕೆಂದಾಗ ಮಡಿಚುವ, ಬಿಚ್ಚುವ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ 77 ಲಕ್ಷ ರೂಪಾಯಿಯಾಗಿದ್ದು, ಅದರ ಬಿಡಿಭಾಗಗಳನ್ನು ಜೋಡಿಸಲು ಮತ್ತೆ 13 ಲಕ್ಷಕೊಡಬೇಕಾಗಿದೆ. 2018ರ ವರ್ಷದಲ್ಲಿ ಸ್ವಿಚ್ ಬ್ಲೇಡ್ ಕಾರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…
ದೇಹಕ್ಕೆ ಆರೋಗ್ಯಯುತ ರಕ್ತಕಣಗಳ ಸಂಖ್ಯೆ ಮುಖ್ಯ. ಇವುಗಳ ಸಂಖ್ಯೆ ಕುಂಠಿತವಾದರೆ ರಕ್ತಹೀನತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದು. ಈ ಮೂಲಕ ದೇಹದಲ್ಲಿ ಅಧಿಕ ರಕ್ತಕಣಗಳ ಸಂಖ್ಯೆ, ಅವುಗಳ ಉತ್ಪಾದನೆ ಹಾಗೂ ರಕ್ತಚಲನೆಯನ್ನು ಸರಿದೂಗಿಸಬಹುದು. ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಬೀಟ್ರೂಟ್ ಮೊದಲಾದ ಹಸಿ ತರಕಾರಿ ಹಾಗೂ ಹಣ್ಣುಗಳು ನಮಗೆ ಸಹಾಯ ಮಾಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ಆರೋಗ್ಯಯುತ ಬದುಕು ನಮ್ಮದಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಹಸಿ ತರಕಾರಿಗಳ ಸೇವನೆ ಹಾಗೂ ಡ್ರೈ…
ಜಪಾನ್ ವಾಹನ ತಯಾರಕ ಹೋಂಡಾ ತನ್ನ ಕ್ರೀಡಾ ಆವೃತಿಯ ಇ.ವಿ ಪರಿಕಲ್ಪನೆಯನ್ನು ಟೊಕಿಯೊ ಮೋಟಾರ್ ಪ್ರದರ್ಶನದಲ್ಲಿ ಬಹಿರಂಗಪಡಿಸಿದೆ. ಈ ವಾಹನವು ನಗರ ಇ.ವಿ ಪರಿಕಲ್ಪನೆಯನ್ನು ಆಧರಿಸಿದೆ
ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ. ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ….
ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು ಇಲ್ಲಿವೆ.. ಸುಟ್ಟ ಗಾಯಕ್ಕೆ ತಕ್ಷಣವೇ ಟೂತ್ ಪೇಸ್ಟ್ ಹಚ್ಚಿಕೊಂಡಲ್ಲಿ ಸುಟ್ಟ ಗಾಯದಿಂದಾಗುವ ಉರಿ ಶಮನವಾಗುತ್ತದೆ.ಶರೀರದ ಭಾಗ ಸುಟ್ಟ ತಕ್ಷಣವೇ ಹಸಿ ಮಣ್ಣನ್ನು ಆ ಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಏಳುವುದಿಲ್ಲ. ಸುಟ್ಟ ಭಾಗಕ್ಕೆ ಸತತವಾಗಿ ನೀರು ಬಿಡುತ್ತಿದ್ದಲ್ಲಿ ಗಾಯದ ಉರಿ ಕಡಿಮೆಯಾಗುತ್ತದೆ.ಚರ್ಮ ಸುಟ್ಟಿದ್ದ ಭಾಗಕ್ಕೆ…
ಇಂದು ಮಂಗಳವಾರ, 06/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…