ಉಪಯುಕ್ತ ಮಾಹಿತಿ

ಈ ಸಾಮಾನುಗಳು ನೀವು ಉಪಯೋಗಿಸಿದ್ರೆ ಕ್ಯಾನ್ಸರ್ ಕಾಯಿಲೆಯನ್ನು ಉಂಟು ಮಾಡುತ್ತದೆ ..!ತಿಳಿಯಲು ಈ ಲೇಖನ ಓದಿ ..

367

ಈ ಗೃಹ ಉಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.

1.ಏರ್ ಫ್ರೆಶ್ನೆರ್:-

ಈ ಏರ್ ಫ್ರೆಶ್ನೆರ್ ಸ್ಪ್ರೇ, ಜೆಲ್ ಹೀಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತೆ. ಮನೆ ಒಳಗೆ, ಕಾರ್ ಒಳಗೆ ಘಮ ಘಮ ಅನ್ಲಿ ಅಂತ ಸಾಮಾನ್ಯವಾಗಿ ಇದನ್ನ ಬಳಸ್ತಾರೆ. ಇದ್ರಲ್ಲಿ ನಮ್ಮ ದೇಹಕ್ಕೆ ಹಾನಿ ಮಾಡೋ ವಿಷಾದ ಅಂಶ ಇರುತ್ತೆ.

ಅದ್ರಲ್ಲಿರೋ ಪಾಥಲಾಟ್ಸ್  ಅನ್ನೋ ಪದಾರ್ಥದಿಂದ ನಮ್ಮ ಸಂತಾನೋತ್ಪತ್ತಿ ಶಕ್ತಿಯನ್ನ ಹಾಳುಮಾಡೊದಲ್ದೆ ಅಸ್ತಮಾದಂತಹ ಕಾಯಿಲೆ ಗಂಭೀರ ರೂಪ ಪಡೆಯೋಹಾಗೆ ಮಾಡುತ್ತೆ.

2.ಸುವಾಸನೆಭರಿತ ಮೇಣದ ಬತ್ತಿ:-

ಈ ಸುವಾಸನೆಭರಿತ ಮೇಣದ ಬತ್ತಿ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬದಲ್ಲಿ ಹೀಗೆ ಹಲವಾರು ಸಲ ಇದನ್ನ ಉಪಯೋಗಿಸ್ತೀವಿ. ಕೆಲವೊಬ್ರು ಬೇರೆ ಫ್ರೆಶ್ನೆರ್ಗೆ ನೋಡಿದ್ರೆ ಇದು ಸ್ವಲ್ಪ ಕಡಿಮೆ ಬೆಲೆಗೆ ಸಿಗೋದ್ರಿಂದ ಇದನ್ನ ಬಚ್ಚಲಮನೇಲೇ ಇತ್ತು ಅಲ್ಲಿನ ವಾಸನೆ ಹೋಗಿಸೋದಕ್ಕೆ ಉಪಯೋಗಿಸ್ತಾರೆ.

ಇದ್ರಲ್ಲೂ ಕೂಡ ವಿಷಪದಾರ್ಥ ಇರಬಹುದು, ಯಾಕೆ ಅಂದ್ರೆ ಬಹಳಷ್ಟು ಜನ ಇದರ ಬತ್ತಿಯನ್ನ ಸೀಸದಿಂದ ಮಾಡಿರ್ತಾರೆ., ಒಂದುಸಲ ನೋಡ್ಕೊಳೋದು ಒಳ್ಳೇದು. ಹೇಗೆ ಪರೀಕ್ಷೆ ಮಾಡೋದು ಅಂದ್ರ ? ಒಂದು ಬಿಳಿ ಪೇಪರ್ ತೊಗೊಂಡು ಆ ಕ್ಯಾಂಡೆಲ್ನ ಬತ್ತಿ ತುದಿಯಿಂದ ಒಂದು ಲೈನ್ ಬರೆದಹಾಗೆ ಮಾಡಿ, ನಿಮಗೆ ಯಾವುದೇ ಲೈನ್ ಕಾಣಿಸಲಿಲ್ಲ ಅಂದ್ರೆ ಸೀಸ ಇಲ್ಲ ಅಂತ. ಅಕಸ್ಮಾತ್ ಲೈನ್ ಕಾಣಿಸಿದ್ರೇ ಇದ್ರಲ್ಲಿ ವಿಷಪದಾರ್ಥಗಳು ಇರೋದು ಗ್ಯಾರಂಟಿ.

3.ಬಚ್ಚಲುಮನೆಯ ಕರ್ಟನ್:-

ಇತ್ತೀಚಿನ ದಿನಗಳಲ್ಲಿ ಬಚ್ಚುಲು ಮನೇಲಿ ಶವರ್ ಇದ್ದೆ ಇರುತ್ತೆ. ತುಂಬಾ ಮನೆಗಳಲ್ಲಿ ಈ ಶವರ್ನಲ್ಲಿ  ಸ್ನಾನ ಮಾಡೋವಾಗ ನೀರು ಹಾರದೆ ಇರೋ ಹಾಗೆ ಕರ್ಟನ್ ಹಾಕ್ತಾರೆ. ಈ ಕರ್ಟನ್ ನಲ್ಲಿ ಪ್ಲಾಸ್ಟಿಕ್ ಹಾಗೂ PVC ಇರುತ್ತೆ. ಈ ಕಾರ್ಸಿನೋಜೆನಿಕ್ ಅನ್ನೋ ವಿಷಕಾರಿ ಪದಾರ್ಥನ ಹೊರ ಹಾಕುತ್ತೆ.

ಇದು ಪರಿಸರಕ್ಕೂ ತುಂಬಾ ಹಾನಿಮಾಡುತ್ತೆ. ಬಿಸಿ ನೀರಿನ ಶಾಖಕ್ಕೆ ಈ ವಿಷಾದ ಪದಾರ್ಥ ಹೊರಬರುತ್ತಲ್ಲ ಅದು ನಮ್ಮ  ಉಸಿರಾಟ ಹಾಗೆ ಸಂತಾನೋತ್ಪತ್ತಿ ಕ್ರಿಯೆಗೆ ಹಾನಿ ಮಾಡುತ್ತೆ. ಇದರ ಬದಲು ಕಾಟನ್ ಕರ್ಟನ್ ಬಳಸೋದು ಒಳ್ಳೇದು.

4.ಕಾರ್ಪೆಟ್ ಕ್ಲೀನರ್:-

ಕಾರ್ಪೆಟ್ ಗೆ ಅಂಟಿಕೊಂಡಿರು ಕಲೆ ಹೋಗ್ಬೇಕು ಅಂತ ಈ ವಸ್ತು ತಾಯಾರಿಸೋದಕ್ಕೆ ಅತ್ಯಂತ ಹೆಚ್ಚು ಹಾನಿಕಾರಿಕ ಕೆಮಿಕಲ್ ಉಪಯೋಗಿಸಿರ್ತಾರೆ. ಪರ್ಕ್ಲೋರೆಥೈಲಿನ್ ಮತ್ತು ನಾಫ್ಥಲೀನ್ ಅನ್ನೋ ಕೆಮಿಕಲ್ ಇದ್ರಲ್ಲಿ ಇರೋದ್ರಿಂದ ಇದನ್ನ ಉಸಿರಾಡಿದಾಗ ಶ್ವಾಸಕೋಶದ ಕ್ಯಾನ್ಸರ್ ಬಾರೋ ಸಾಧ್ಯತೆ ಹೆಚ್ಚು. ಈ ನುಸಿ ಗುಳಿಗೇಲೂ ಈ ಪದಾರ್ಥ ಇರುತ್ತೆ.

ಈ ಕಾರ್ಪೆಟ್ ಕ್ಲೀನ್ ಮಾಡಕ್ಕೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಶ್ರಣ ಉಪಯೋಗಿಸಿ ನೋಡಿ. ಇದ್ರಿಂದ ಯಾವುದೇ ತೊಂದರೆ ಇರಲ್ಲ.

5.ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳು:-

ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳಲ್ಲಿ ಎಟ್ರಾಕ್ಲೋರೆಥೈಲಿನ್ ಅಥವಾ ಪರ್ಚ್ಲೋರೆಥೈಲಿನ್ ಅನ್ನೋ ಕೆಮಿಕಲ್ ಇರುತ್ತೆ. ಇದನ್ನ ಬಳಸಿ ಕ್ಲೀನ್ ಮಾಡಿರೋ ಬಟ್ಟೆ ಹಾಕ್ಕೊಂಡ್ರೆ ಹಾನಿಕಾರಕ ಕಾರ್ಸಿನೋಜೆನ್ಸ್ ನಮ್ಮ ದೇಹಕ್ಕೆ ಸುಲಭವಾಗಿ ಹೋಗುತ್ತೆ.

ಇದ್ರಿಂದ ಹಲವಾರು ರೀತಿಯ ಕ್ಯಾನ್ಸರ್ ಆಗೋ ಸಾಧ್ಯತೆ ಇರೋದ್ರಿಂದ ಡ್ರೈ ಕ್ಲೀನ್ ಮಾಡಕ್ಕೆ ಕೊಡೋದಕ್ಕೆ ಮುಂಚೆ ಈ ವಿಷಕಾರಿ ಅಂಶ ಇರೋ ವಸ್ತು ಬಳಸಬೇಡಿ ಅಂತ ಹೇಳೋದು ಒಳ್ಳೇದು.

6.ಕೀಟನಾಶಕಗಳು.

ಎಲ್ಲರೂ ಒಂದಲ್ಲ ಒಂದುಸಲ ರೈತರು ಕ್ರಿಮಿ, ಕೀಟನಾಶಕ ಸಿಂಪಡಿಸೋವಾಗ ತೊಂದರೆ ಆಗಿ ಸತ್ರು, ಯಾವುದೊ ಸಮಸ್ಯೆಗೆ ಸಿಲುಕಿ ಇದನ್ನ ಕುಡಿದು ಆತ್ಮ ಹತ್ಯೆ ಮಾಡ್ಕೊಂಡ್ರು ಅಂತ ಓದಿರ್ತೀವಿ, ಕೇಳಿರ್ತೀವಿ. ಇದು ಬರಿ ಕ್ರಿಮಿ, ಕೀಟಗಳಿಗೆ ಅಷ್ಟೆ ಅಲ್ಲ ನಮಗೂ ಹಾಗೆ ನಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಹಾನಿ ಮಾಡುತ್ವೆ.

ಇದ್ರಲ್ಲಿ ಆರ್ಗನೋಫಾಸ್ಫೇಟ್ ಕೀಟನಾಶಕಗಳು, ಪೆರೆಥೆರಿನ್ ಮತ್ತು ಕಾರ್ಬಮೆಟ್ಗಳು ಇರುತ್ತೆ , ಇವುಗಳು ತುಂಬಾನೇ ಅಪಾಯಕಾರಿ ಮತ್ತು ಮನುಷ್ಯರಿಗೆ ಕ್ಯಾನ್ಸರ್ ತರೋ ಸಾಧ್ಯತೆ ಹೆಚ್ಚು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಎಸ್ಒಎಸ್ ಸಂಕೇತದಿಂದ ಪ್ರಾಣಾಪಾಯದಿಂದ ಪಾರಾದ ಮಹಿಳೆ,. ಹೇಗೆ ಗೊತ್ತಾ.?

    ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು  ಗೊತ್ತಾಗದೇ ದಾರಿ  ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ  ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ  ಮಹಿಳೆ ಪತ್ತೆಯಾಗಿದ್ದು        ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,… ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್  ದಾರಿ ತಪ್ಪಿದ್ದರು. ಹೀಗಾಗಿ,…

  • ಜ್ಯೋತಿಷ್ಯ

    ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಭಾನುವಾರ , 18/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದರೂ ದೇಹಾಯಾಸ ತಂದೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು. ಸೂಕ್ತ ಸಲಹೆಗಾಗಿ ಹಿತೈಷಿಗಳು ನಿಮ್ಮ ಮಾರ್ಗದರ್ಶನಕ್ಕೆ ಬಂದಾರು. ವೃಷಭ:- ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉದಾಸೀನತೆ ತೋರಿಸಿಯಾರು. ವೃತ್ತಿರಂಗದಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಯಾವುದೇ ಸಮಸ್ಯೆಗಳನ್ನು…

  • ಸುದ್ದಿ

    ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ಜಿಯೋ..!

    ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್‌ ಕೊಡಲು ರೆಡಿಯಾಗಿದೆ. ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್‌ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ. ಇದೇ ಹಾದಿಯಲ್ಲಿ ಸಾಗುವ…

  • inspirational

    ವಯಸ್ಸನ್ನು ಕಡಿಮೆ ಮಾಡುವ ಹಿಪ್ಪುನೇರಳೆ ಹಣ್ಣು, ಕಂಡರೆ ಬಿಡಬೇಡಿ. ಈ ಮಾಹಿತಿ ನೋಡಿ.

    ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ . ಪ್ರತಿ ನಿತ್ಯ ಹಲವು ರೀತಿಯ ಹಣ್ಣುಗಳನ್ನು ತಿನ್ನುತಾ ಇರ್ತೇವೆ. ನಾವು ಈಗ ತಿಳಿಸುವ ಹಣ್ಣು ಹೌದು ಹಿಪ್ಪುನೇರಳೆ ಹಣ್ಣು ಎಂದು ಕರೆಯುವ ಮಲ್ಬರಿ ಹಣ್ಣು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ, ಮತ್ತೆಮತ್ತೆ ತಿನ್ನಬೇಕೆಂಬ ರುಚಿಯುಳ್ಳ ಹಿಪ್ಪುನೇರಳೆಯಲ್ಲಿ ಬಹಳಷ್ಟು ಔಷಧಿ ಗುಣಗಳಿವೆ ರಕ್ತದಲ್ಲಿನ ಸಕ್ಕರೆ ಪ್ರಮಾಣ…

  • ಉಪಯುಕ್ತ ಮಾಹಿತಿ

    ನಿಮ್ಮ ಕೂದಲು ತುಂಬಾನೆ ಬಿಳಿಯಾಗಿದೆ ಎಂದು ನಿಮ್ಗೆ ಅನಿಸುತ್ತಿದೆಯಾ..?ಏನು ಮಾಡಬೇಕು ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.