ವಿಸ್ಮಯ ಜಗತ್ತು

ಏಳು ವರ್ಷದ ನಂತರವೂ ತನ್ನ ಪೋಷಕನನ್ನು ಗುರುತು ಹಿಡಿದು ಆತನ ಹಿಂದೆ ಬಿದ್ದ ಜಿಂಕೆ..!ಈ ಲೇಖನ ಓದಿ ಶಾಕ್ ಆಗ್ತೀರಾ…

690

ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.

ಸುಂದರಿ ಎಂಬ ಜಿಂಕೆಮರಿ :

ಬಳ್ಳಾರಿ ಮೃಗಾಲಯದಲ್ಲಿ 7 ವರ್ಷದ ಹಿಂದೆ ಸುಂದರಿ ಎಂಬ ಜಿಂಕೆಮರಿ ಜನ್ಮ ತಾಳಿತ್ತು, ಬಳ್ಳಾರಿ ಮೃಗಾಲಯದಲ್ಲಿದ್ದ 6೦ ಬ್ಲಾಕ್ ಬಕ್ಸ್ ಪೈಕಿ ಸುಂದರಿ ಕೂಡ ಒಬ್ಬಳಾಗಿದ್ದಳು. ಈಗ ಅವುಗಳನ್ನು ಸದ್ಯ ಹಂಪಿ ಬಳಿಯಿರುವ ಬಿಳಿಕ್ಕಲ್ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಮೃಗಾಲಯದಲ್ಲಿ ಬಸವರಾಜ್ ಪ್ರಾಣಿಗಳಿಗೆ ಆಹಾರ ನೀಡುವ ಹಾಗೂ ಊಟ ತಿನ್ನಿಸುವ ಮೇಲ್ವಿಚಾರಕರಾಗಿದ್ದರು. ಅರಣ್ಯ ಇಲಾಖೆಯ ವಾರ್ಷಿಕ ವರ್ಗಾವಣೆ ನಿಯಮದಂತೆ ಬಸವರಾಜ್ ಅವರನ್ನು ಕಮಲಪುರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಸದ್ಯ ಬಸವರಾಜ್ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದ ಪ್ರಾಣಿಗಳಿಗೆ ಆಹಾರ ತಿನ್ನಿಸುವ ಮೇಲ್ವಿಚಾರಕರಾಗಿ ವರ್ಗಾವಣೆ ಗೊಂಡಿದ್ದಾರೆ.

7 ವರ್ಷವಾದರು ಪೋಷಕನ ಮರೆತಿಲ್ಲ ಸುಂದರಿ:

ನವೆಂಬರ್ 3 ರಿಂದ ಈ ಮೃಗಾಲಯ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ, ಇಲ್ಲಿಯೇ  ವಾಸವಿರುವ ಸುಂದರಿ ಆಕಸ್ಮಿಕವಾಗಿ ತನ್ನ ಕೇರ್ ಟೇಕರ್ ನೋಡಿ, ಅವರನ್ನು ಗುರುತಿಸಿ ಆತನ ಹಿಂದೆ ಹಿಂದೆಯೇ ಸುತ್ತುತ್ತಿದ್ದಾಳೆ. 7 ವರ್ಷಗಳ ಹಿಂದೆ ಸುಂದರಿ ಹುಟ್ಟಿದಾಗ ತನಗೆ ಹಾಲು ಕುಡಿಸಿ ಬೆಳೆಸಿದ್ದ ಬಸವರಾಜ್ ನನ್ನು ಆಕೆ ಮರೆತಿಲ್ಲ, ಬಸವರಾಜ್ ಆಹಾರ ನೋಡಲು ಹೋದರೆ ಉಳಿದೆಲ್ಲಾ ಜಿಂಕೆಗಳು ಹೆದರಿ ದೂರ ಓಡುತ್ತಿದ್ದವು. ಆದರೆ ಸುಂದರಿ  ಮಾತ್ರ ಬಸವರಾಜ್ ಹಿಂದಿಂದೆಯೇ ಸುತ್ತುತ್ತಿದ್ದಳು.

ಜಿಂಕೆ ಮರಿ ನನ್ನ ನೆನಪಿಟ್ಟುಕೊಂಡಿರುವುದೇ ಆಶ್ಚರ್ಯ:

ಈ ಸುಂದರಿ ಜಿಂಕೆ ಯಾವಾಗಲು ನನ್ನ ಹಿಂದೆಯೇ ಇರುತಾ ಇತ್ತು , ನಾನು ಗೇಟ್ ಬಾಗಿಲು ಮುಚ್ಚಿದರೇ, ಸುಮಾರು ಅರ್ಧ ಗಂಟೆಗಳ ಕಾಲ ಕಾದು ನಂತರ ಬೇರೆ ಜಿಂಕೆಗಳ ಜೊತೆ ಹೋಗುತಿತ್ತು . ಪ್ರಾಣಿಗಳ ಈ ವರ್ತನೆ ನನಗೆ ತುಂಬಾ ಭಿನ್ನವೆನಿಸುತ್ತಿದೆ.ಈ ಜಿಂಕೆ ಮರಿ ನನ್ನನ್ನು ಇಷ್ಟೋಂದು  ನೆನಪಿನಲ್ಲಿಟ್ಟುಕೊಂಡಿರುವುದು ನನಗೆ ಆಶ್ಚರ್ಯ ತರಿಸಿದೆ ಎಂದು ಬಸವರಾಜ್ ಹೇಳಿದ್ದಾರೆ. ಬಳ್ಳಾರಿಯ ಗುದ್ದೂರು ಮೂಲದ ಬಸವರಾಜ್ ಅರಣ್ಯ ಇಲಾಖೆಯ ನೌಕರರಾಗಿದ್ದಾರೆ, ಬಸವರಾಜ್ ಸದ್ಯ ಕಾವಲುಗಾರನಾಗಿ
ನೇಮಕಗೊಂಡಿದ್ದಾರೆ.

ಸುಂದರಿ ಜೊತೆ ಅವರಿಗೆ ವಿಶೇಷ ಪ್ರೀತಿ ವಾತ್ಸಲ್ಯ ಬೆಳೆದಿದೆ:

ಪ್ರಾಣಿಗಳನ್ನು ಪ್ರೀತಿಸುವ ಅವರು ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಈಗ ಸುಂದರಿ ಜೊತೆ ಅವರಿಗೆ ವಿಶೇಷ ಪ್ರೀತಿ ವಾತ್ಸಲ್ಯ ಬೆಳೆದಿದೆ. ಸುಂದರಿಯನ್ನು ಬಸವರಾಜ್ ಸುಂದರಿ ಎಂದು ಕರೆಯುತ್ತಾರೆ, ಸುಂದರಿ ಎಂದು ಕರೆದ ಕೂಡಲೇ ಜಿಂಕೆ ಮರಿ ಪ್ರತಿಕ್ರಿಯಿಸುತ್ತದೆ. ಸುಂದರಿ ನನ್ನ ಮಗಳಿದ್ದಂತೆ ಎಂದು ಬಸವರಾಜ್ ಹೇಳಿದ್ದಾರೆ. ಬ್ಲ್ಯಾಕ್ ಬಕ್ಸ್ ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಒಣ ಭೂಮಿಯಲ್ಲಿ ಕಂಡುಬರುವ ಪ್ರಾಣಿಯಾಗಿದೆ ಅಳಿವಿನಂಚಿನಲ್ಲಿರುವ ಪ್ರಬೇಧದ
ಜಿಂಕೆಗಳನ್ನ ವನ್ಯ ಜೀವಿ ಕಾಯಿದೆ ಪ್ರಕಾರ ರಕ್ಷಿಸಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ