ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವೇನಾದರೂ ಹೊಸ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡರೆ, ವಿನ್ಯಾಸ ಅಥವಾ ಕಾರ್ಯಕ್ಷಮತೆಯ ಜೊತೆಗೆ ವಾಹನದ ಬೆಲೆಯ ಕಡೆ ನಿಮ್ಮಗೂ ನೀವು ಗಮನಹರಿಸುತ್ತೀರಿ. ಈ ಎಲ್ಲಾ ಲಕ್ಷಣಗಳನ್ನು ಪಡೆದ ಟಾಪ್ 5 ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮಧ್ಯಮ ವರ್ಗದ ಸಾಕಷ್ಟು ಯುವಕರಿಗೆ ಬೈಕ್ ಖರೀದಿಸುವುದು ಹೆಚ್ಚು ಖುಷಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಅದರಲ್ಲಿಯೂ ಸೂಕ್ತ ಸಮಯಕ್ಕೆ ಬಜೆಟ್ ಹೊಂದಾಣಿಕೆಯಾದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ..! ಹಣ ಹೊಂದಾಣಿಕೆಯಾಯಿತು, ಹಾಗಾದ್ರೆ ಯಾವ ವಾಹನ ಖರೀದಿ ಮಾಡಲಿ ಎಂದು ಗೊಂದಲ ಇರುವವರು ಇದನ್ನು ಓದಿ..
ಯಮಹಾ ಎಫ್‌ಝೆಡ್-ಎಸ್ ಎಫ್‌ಐ :-
2008ರಲ್ಲಿ ಬಿಡುಗಡೆಗೊಂಡ ಯಮಹಾ FZ16 ಬೈಕ್, ನಿಜವಾಗಿಯೂ ಮಾರುಕಟ್ಟೆಯ ಆಟವನ್ನು ಬದಲಾಯಿತು ಎನ್ನಬಹುದು. ಒಂದು ಕಾಲದಲ್ಲಿ ತನ್ನ 150 ಸಿಸಿ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿತ್ತು. ಹೆಚ್ಚು ಬಲಿಷ್ಠವಾಗಿರುವ ಈ ಮೋಟಾರ್ ಬೈಕ್, ಅತ್ಯುತ್ತಮ ನಿರ್ವಹಣೆ ಗುಣಲಕ್ಷಣ ಮತ್ತು ನವೀನ ರೀತಿಯ ವಿನ್ಯಾಸ ಶೈಲಿಯನ್ನು ಪಡೆದುಕೊಂಡಿದೆ.
ಬಜಾಜ್ ಅವೆಂಜರ್ 220 :-
2005ರಿಂದ ಅವೆಂಜರ್ ವಾಹನದೊಂದಿಗೆ ಬಜಾಜ್ ಸಂಸ್ಥೆಯು ಕ್ರೂಸರ್ ವಿಭಾಗದಲ್ಲಿ ಹೆಚ್ಚು ಹೆಸರುಗಳಿಸಿದೆ ಎನ್ನಬಹುದು. ಪ್ರಸ್ತುತ ಈ ಬೈಕ್, 150 ಸಿಸಿ ಮತ್ತು 220 ಸಿಸಿ ಆಯ್ಕೆಯಲ್ಲಿ ಲಭ್ಯವಿದೆ. ಎವೆಂಜರ್ 220 ಬೈಕ್, ಪಲ್ಸರ್ 220ಯಲ್ಲಿರುವ ಕಾರ್ಬ್ಯುರೇಟೆಡ್ 220 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಮತ್ತು ಆಯಿಲ್ ಕೋಲ್ಡ್, ಡಿಟಿಎಸ್-ಐ ಮೋಟರ್ ಎಂಜಿನ್ ಬಳಸುತ್ತದೆ.
ಪಲ್ಸರ್ ಬೈಕಿಗೆ ಹೋಲಿಸಿದರೆ, ಈ ಬೈಕಿನ ಪವರ್ ಮತ್ತು ಟಾರ್ಕ್ ಸ್ವಲ್ಪಮಟ್ಟಿನ ಇಳಿಮುಖವಾಗಿದೆ ಎನ್ನಬಹುದು. ಈ ಬೈಕ್ ಸ್ಟ್ರೀಟ್ ಮತ್ತು ಕ್ರೂಸ್ ಎಂಬ ಎರಡು ಟ್ರಿಮ್ ಆಯ್ಕೆಯಲ್ಲಿ ಮಾರಾಟಗೊಳುತ್ತಿದೆ. ಈ ಬೈಕ್, 19.03 ಬಿಎಚ್‌ಪಿ ಮತ್ತು 17.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ರೂ.87,738(ದೆಹಲಿ) ಬೆಲೆ ಪಡೆದುಕೊಂಡಿದೆ.
ಬಜಾಜ್ ಪಲ್ಸರ್ 200 ಎನ್ಎಸ್ :-
ಈ ಪಟ್ಟಿಯಲ್ಲಿ ಎರಡನೇ ಸ್ತನವನ್ನು ಈ ಬೈಕ್ ತನ್ನದಾಗಿಸಿಕೊಂಡಿದೆ. ಬಿಎಸ್-IV ಮಾದರಿಯಾಗಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಟ್ಟಿರುವ ಹೊಸ ಪಲ್ಸರ್ 200 ಎನ್ಎಸ್ ಬೈಕ್, ಸದ್ಯ ಓಡುವ ಕುದುರೆ ಎನ್ನಬಹುದು. 199.5 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೋಲ್ಡ್ ಪಡೆದಿರುವ ಈ ಬೈಕ್, ಕೆಟಿಎಂನೊಂದಿಗೆ ಸ್ಪರ್ಧೆ ನೆಡೆಸಲಿದೆ.
ಹೆಚ್ಚು ಸಮರ್ಥವಾದ ನಿರ್ವಹಣೆಯನ್ನು ಪಡೆದಿರುವ ಈ ಬೈಕ್, ನಗರ, ಹೆದ್ದಾರಿ ಅಥವಾ ಟ್ವಿಸ್ಟಿ ಪರ್ವತ ರಸ್ತೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. ಹೊಸದಾಗಿ ಬಿಡುಗಡೆಯಾದ ಪಲ್ಸರ್ 200 ಎನ್ಎಸ್ ಎಬಿಎಸ್ ರೂಪಾಂತರವು ರೂ.1 ಲಕ್ಷ ತಡೆಯಾಜ್ಞೆಯನ್ನು ದಾಟಿದರೂ ಸಹ ಉತ್ತಮ ಬೈಕ್ ಎನ್ನಬಹುದು.
ಸುಜುಕಿ ಜಿಕ್ಸರ್ ಎಸ್‌ಎಫ್ :-
ಭಾರತದಲ್ಲಿ ಅಗ್ಗದ ಕ್ರೀಡಾ ಬೈಕ್ ಗಳಲ್ಲಿ ಒಂದಾಗಿರುವ ಜಿಕ್ಸರ್ ಎಸ್ ಎಫ್ ಮಾದರಿಯು ಕಾರ್ಯಕ್ಷಮತೆ, ರೋಡ್ ಗ್ರಿಪ್ ಮತ್ತು ವಿನ್ಯಾಸದಿಂದ ಜನರ ಮೆಚ್ಚುಗೆ ಗಳಿಸಿಕೊಂಡಿದೆ.
ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ :-
ಸ್ಟ್ಯಾಂಡರ್ಡ್ ಪಿರೆಲಿ ಟೈರ್ ವ್ಯವಸ್ಥೆಯೊಂದಿಗೆ ಮಾರಾಟವಾಗುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, ಹೊರ ವಿನ್ಯಾಸದಲ್ಲಿ ಸಖತ್ ಲುಕ್ ಪಡೆದುಕೊಂಡಿದೆ.
ಈ ಬೈಕ್, ಬಿಎಸ್ IV ಎಂಜಿನ್ ಹಾಗೂ AHO (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯನ್ನು ಕೂಡಾ ಹೊಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!
ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.
ಹೈದರಾಬಾದ್, ಮಕ್ಕಳು ಪಡೆಯಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲಾ ತಾಯಿಯರಿಗೂ ಇರುತ್ತದೆ. ಆದರೆ ಒಂದು ವಯಸ್ಸಿನ ಮಿತಿಯಿರುತ್ತದೆ. ಸಾಮಾನ್ಯವಾಗಿ 50 ವಯಸ್ಸಿನ ನಂತರ ಮೆನೋಪಾಸ್ ಹಂತ ತಲುಪಿದ ಬಳಿಕ ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುವುದಿಲ್ಲ. ಮೊಮ್ಮಕ್ಕಳು, ಮುಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದ್ರಾಕ್ಷಾರಾಮಮ್ ಬ್ಲಾಕ್ನ ನೆಲಪಾರ್ತಿಪಾಡು ಗ್ರಾಮದ ಈರಮಟ್ಟಿ ಮಂಗಯಮ್ಮ ಎಂಬ 74ರ ಅಜ್ಜಿ ಮದುವೆಯಾದ 54 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ….
ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್…
ಈಗಂತೂ ಎಲ್ಲಾ ನಕಲಿ. ಸ್ವಲ್ಪ ಯಾಮಾರಿದರೂ ನಕಲಿ ಆಹಾರ ಪದಾರ್ಥಗಳನ್ನೂ ಸಹ ತಿನ್ನಿಸುವ ಕಾಲ ಇದು.ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆದರೆ ನಕಲಿ ಯಾವುದು ಅಸಲಿ ಯಾವುದು ಎಂಬುದನ್ನು ತಿಳಿಯೋದು ಕಷ್ಟ. ನಕಲಿ ಮೊಟ್ಟೆ ಬಗ್ಗೆ ನೀವೂ ಜಾಗರೂಕರಾಗಿರಬೇಕು. ನಕಲಿ ಮೊಟ್ಟೆ ಹೇಗಿರುತ್ತೆ ಎಂಬುದನ್ನು ತಿಳಿದುಕೊಂಡಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. *ಸಾಮಾನ್ಯವಾಗಿ ಅಸಲಿ ಮೊಟ್ಟೆ ಹೊಳಪಿರುವುದಿಲ್ಲ. ನಕಲಿ…