ಮನೆ

ಗೃಹಿಣಿ ನೆನಪಿಟ್ಟುಕೊಳ್ಳಬೇಕಾದ 10 ಸಂಗತಿಗಳು ಯಾವುವು ಗೋತಾ..?ತಿಳಿಯಲು ಈ ಲೇಖನ ಓದಿ ..

617

1.ಜಾಮ್‌ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.

2. ಚಹಾ ಶೋಧಿಸಿದ ನಂತರ ಜಾಲರಿಯ ಪುಟ್ಟ ಮೆಶ್‌ನಲ್ಲಿ ಚಹಾಪುಡಿ ಸಿಕ್ಕಿಕೊಂಡಿರುತ್ತವೆ. ಆಗ ಆದನ್ನು ಗ್ಯಾಸ್‌ ಉರಿಯಲ್ಲಿ ಒಂದು ನಿಮಿಷ ಇಟ್ಟರೆ ಜಾಲರಿ ಅದರಿಂದ ಮುಕ್ತವಾಗುವುದು.

3. ಮನೆಯಲ್ಲಿ ಬೋರೊಸಿಲ್‌ ಪಾತ್ರೆಗಳನ್ನು ತೊಳೆಯುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕೈಯಿಂದ ಜಾರಿದರೆ ಪಾತ್ರೆ ಒಡೆಯುವುದು ಖಚಿತ. ಅದಕ್ಕಾಗಿ ಸಿಂಕಿನ ಮೇಲೆ ಅಡ್ಡಲಾಗಿ ದಪ್ಪ ಟವೆಲ್ಲನ್ನು ಹರಡಿ. ಅಕಸ್ಮಾತ್‌ ಕೈಯಿಂದ ಜಾರಿದರೂ ಟವೆಲ್‌ ಮೇಲೆ ಬಿದ್ದು ಪಾತ್ರೆ ಸೇಫ್ ಆಗಿರುತ್ತದೆ.

4. ಗಾಜಿನ ಲೋಟ ಹಾಗೂ ತಟ್ಟೆಗಳನ್ನು ವಿನೆಗರ್‌ನಲ್ಲಿ ತೊಳೆದರೆ ಹೊಳಪು ಜಾಸ್ತಿ.

5. ಕಪ್ಪು ಬಟ್ಟೆಗಳನ್ನು ಶಿಕಾಕಾಯಿ ಪುಡಿಯಿಂದ ಒಗೆದರೆ ಬಣ್ಣ ಮಾಸುವುದಿಲ್ಲ.

6. ಒಗ್ಗರಣೆ ಹಾಕಿದ ಬಾಣಲೆಯನ್ನು ವಾಶಿಂಗ್‌ ಸೋಡಾ ವಿನೆಗರ್‌ ಹಾಗೂ ಲಿಕ್ವಿಡ್‌ ಸೋಪ್‌ ಹಾಕಿ ಉಜ್ಜಿದರೆ ಬಾಣಲೆ ಫ‌ಳಫ‌ಳನೆ ಹೊಳೆಯುವುದು.

7. ಸೌತೆಕಾಯಿ ಸಿಪ್ಪೆಯನ್ನು ಇಟ್ಟರೆ ಮನೆಯಲ್ಲಿ ಜಿರಳೆಗಳನ್ನು ನಾಶಮಾಡಬಹುದು.

8. ಮೆಣಸಿನಕಾಯಿಯನ್ನು ರುಬ್ಬಬೇಕಾದರೆ ಒಂದು ಚಮಚ ಸಾಸಿವೆ ಹಾಕಿದರೆ ಬಣ್ಣವು ಹಾಗೆಯೇ ಉಳಿಯುವುದು.
9. ಕೈ ಬೆರಳಿಗೆ ಅಥವಾ ಕಾಲಿನ ಮ್ಮಡಿಗೆ ಗಾಜು ಚುಚ್ಚುವುದು ಸಾಮಾನ್ಯ. ಅದನ್ನು ತೆಗೆಯಲು ಆ ಚುಚ್ಚಿದ ಜಾಗಕ್ಕೆ ಫೆವಿಕಾಲ್‌ ಹಾಕಿದರೆ ಗಾಜು ನಿದಾನವಾಗಿ ಫೆವಿಕಾಲ್‌ ಜೊತೆ ಪದರ ಪದರವಾಗಿ ಬರುವುದು.

10. ಚಿನ್ನದ ಸರವು ಒಮ್ಮೊಮ್ಮೆ ಗಂಟು ಗಂಟು ಬೀಳುವುದನ್ನು ತಡೆಯಲು ಸ್ವಲ್ಪ ಟಾಲ್ಕಮ್‌ ಫೇಸ್‌ ಪೌಡರ್‌ ಬಳಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ