ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.
ಇತ್ತೀಚೆಗೆ 13 ವರ್ಷದ ಬಾಲಕ ನಬಿ ಹುಸೈನ್ ಪ್ಲಾಸ್ಟಿಕ್ ತೈಲ ಡಬ್ಬವನ್ನು ಬಳಸಿ ಬಾಂಗ್ಲಾದೇಶಕ್ಕೆ ಬರುವ ಮೂಲಕ ತನ್ನ ಜೀವ ಉಳಿಸಿಕೊಂಡಿದ್ದಾರೆ. ಅವನಿಗೆ ಈಜಲು ಗೊತ್ತಿರಲಿಲ್ಲ ಹಾಗೂ ಮ್ಯಾನ್ಮಾರ್‌ನಲ್ಲಿನ ತನ್ನ ಗ್ರಾಮದಿಂದ ಪಲಾಯನಗೈಯುವ ಮೊದಲು ಸಮುದ್ರವನ್ನೂ ನೋಡಿರಲಿಲ್ಲ. ಆದರೆ, ಖಾಲಿ ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡ ನಬಿ ಹುಸೈನ್ ಬಂಗಾಳ ಕೊಲ್ಲಿಯಲ್ಲಿ 4 ಕಿ.ಮೀ. ದಾಟಿ ಬಾಂಗ್ಲಾದೇಶಕ್ಕೆ ಬಂದರು.
ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರು ಅಲ್ಲಿನ ಹಿಂಸಾಚಾರದಿಂದ ಎಷ್ಟು ಕಂಗೆಟ್ಟಿದ್ದಾರೆಂದರೆ, ಕೆಲವರು ಸಮುದ್ರವನ್ನು ಈಜಿ ದಾಟಲು ಪ್ರಯತ್ನಿಸುತ್ತಿದ್ದಾರೆ.
ಒಂದೇ ವಾರದಲ್ಲಿ, 40ಕ್ಕೂ ಅಧಿಕ ಬಾಲಕರು ಮತ್ತು ಯುವಕರು ಪ್ಲಾಸ್ಟಿಕ್ ಡಬ್ಬಗಳನ್ನು ತೆಪ್ಪದಂತೆ ಬಳಸಿಕೊಂಡು ನಾಫ್ ನದಿಯನ್ನು ಅಳಿವೆ ಪ್ರದೇಶದಲ್ಲಿ ದಾಟಿ ಶಾ ಪೊರಿರ್ ದ್ವೀಪಕ್ಕೆ ಬಂದಿದ್ದಾರೆ.
‘‘ನಾನು ತುಂಬಾ ಹೆದರಿದ್ದೆ. ಇದು ನನ್ನ ಕೊನೆಯ ದಿನವೆಂದೇ ನಾನು ಭಾವಿಸಿದ್ದೆ’’ ಎಂದು ನಬಿ ಹೇಳುತ್ತಾನೆ.
ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ, ಬೌದ್ಧ ಬಹುಸಂಖ್ಯಾತ ದೇಶವು ಅವರನ್ನು ಬಾಂಗ್ಲಾದೇಶದಿಂದ ಬಂದ ಅತಿಕ್ರಮಣಕಾರಿಗಳಂತೆ ಪರಗಣಿಸುತ್ತಿದೆ. ಅಲ್ಲಿನ ಸರಕಾರವು ಅವರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದೆ.
ರೊಹಿಂಗ್ಯಾ ಮುಸ್ಲಿಮರು ಜಗತ್ತಿನ ಅತ್ಯಂತ ಮರ್ದನಕ್ಕೊಳಗಾದ ಅಲ್ಪಸಂಖ್ಯಾತ ಗುಂಪು ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.
‘‘ಮ್ಯಾನ್ಮಾರ್‌ನಲ್ಲಿ ನಾವು ಸಂಕಷ್ಟ ಎದುರಿಸಬೇಕಾಗಿದೆ. ಹಾಗಾಗಿ, ಅದಕ್ಕಿಂತ ಸಮುದ್ರದಲ್ಲಿ ಮುಳುಗುವುದೇ ಉತ್ತಮ ಎಂದು ನಾವು ಯೋಚಿಸಿದೆವು’’ ಎಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದು ಈಜುತ್ತಾ ಬಾಂಗ್ಲಾದೇಶಕ್ಕೆ ಬಂದ 18 ವರ್ಷದ ಕಮಲ್ ಹುಸೈನ್ ಹೇಳುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದು ಈಗ ಹಳೆಯ ಮಾತು
ಮನೆ ಕಟ್ಟಲು ಮುಂದಾದವರಿಗೆ ಗುಡ್ ನ್ಯೂಸ್ ಇಲ್ಲಿದೆ. ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕ್ರಮಕೈಗೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮರಳು ನೀತಿ ಜಾರಿಗೆ ಕ್ರಮ ಕೈಗೊಂಡಿದ್ದು 2014ರಲ್ಲಿ ಮರಳು ನೀತಿ ಪ್ರಕಟಿಸಲಾಗಿತ್ತು. ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿ ರಚಿಸಲಾಗಿತ್ತು. ಮರಳು ದರ ನಿಗದಿ ಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ನೀಡಿ ಮರಳು ಬ್ಲಾಕ್ ಗಳನ್ನು ಗುರುತಿಸಿ ಲೋಕೋಪಯೋಗಿ…
ಹಾರ ಹಾಕುವ ವಧುವಿಗೆ ಸಹಾಯ ಮಾಡಲು ಹೋಗಿ ವಧುವಿನ ಕೈಯಿಂದ ಕಪಾಳಕ್ಕೆ ಮೋಕ್ಷ ಮಾಡಿಸಿಕೊಂಡ ಬಾವ..!
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ….
ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.
ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್, ಚಿಕ್ಕೋರ್ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.