ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.
1.ನಿಮ್ಮ ಕರ್ಟನ್ ಮೇಲೆ ಯಾವತ್ತೂ ಫಂಗಸ್ ಕೂರ್ದೆ ಇರಕ್ಕೆ ಕರ್ಟನ್ ತಂದ ತಕ್ಷಣ ಉಪ್ಪು ನೀರಲ್ಲಿ ಒಗೆದು ನಂತರ ಉಪ್ಯೋಗ್ಸಿ.
2.ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ ಆಗ್ಬಾರ್ದು ಅಂದ್ರೆ, ಒದ್ದೆ ಬೆರಳನ್ನ ಉಪ್ಪಿಗೆ ಹಚ್ಕೊಂಡು, ತುರಿಕೆ ಆಗ್ತಿರೋ ಜಾಗದಲ್ಲಿ ಹಚ್ಚಿ.
3.ತಾಮ್ರದ ಪಾತ್ರೆ ಫಳಫಳ ಹೊಳೆಯೋಹಾಗೆ ಮಾಡೋಕೆ ಸ್ವಲ್ಪ ವಿನೆಗರ್, ಮೈದಾ ಹಿಟ್ಟು ಹಾಗು ನಿಂಬೆರಸದ ಜೊತೆ ಉಪ್ಪು ಮಿಕ್ಸ್ ಮಾಡಿ ಪಾತ್ರೆ ಉಜ್ಜಿ.
4.ಬಾಣಲೀಲಿ ನೀವು ಹುರಿಯೋ ಪದಾರ್ಥದಿಂದ ಎಣ್ಣೆ ಸಿಡಿಯದ ಹಾಗೆ ನೋಡಿಕೊಳ್ಳೋಕೆ ಮೊದಲು ಒಂದೆರಡು ಚಿಟಿಕೆ ಉಪ್ಪು ಹಾಕಿಡಿ.
5.ಕ್ಯಾಂಡಲ್ಲಿಂದ ಮೇಣ ಸೋರ್ಬಾರ್ದು ಅಂದ್ರೆ, ಕ್ಯಾಂಡಲ್ ಹಚ್ಚೋಕೆ ಮುಂಚೆ ಸಾಕಷ್ಟು ಹೊತ್ತು ಉಪ್ಪು ನೀರಲ್ಲಿ ಅದನ್ನ ನೆನೆಸಿಟ್ಟು ಒಣಗಿಸಿ ನಂತರ ಬಳಸಿ.
6.ನಿಮ್ಮ ಶೂ ವಾಸನೆ ಬರ್ತಿದ್ರೆ, ಒಂದು ಸಣ್ಣ ಬಟ್ಟೇಲಿ ಉಪ್ಪು ತುಂಬಿ ವಾಸನೆ ಇರೋ ಶೂನಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತೆಗೀರಿ, ವಾಸನೆ ಹೋಗಿರುತ್ತೆ!
7.ನಿಮ್ಮ ಮನೆಯಲ್ಲಿ ಇರುವೆ ಕಾಟ ಜಾಸ್ತೀನ? ಹಾಗಿದ್ದರೆ ಒಂದು ಭಾಗ ಉಪ್ಪಿಗೆ ನಾಲ್ಕು ಭಾಗ ನೀರನ್ನ ಹಾಕಿ ಮಿಕ್ಸ್ ಮಾಡಿ ಅದನ್ನ ಇರುವೆ ಇರೋ ಜಾಗದಲ್ಲಿ ಚಿಮುಕಿಸಿ.
8.ನಿಮ್ಮ ಮಕ್ಕಳಿಗೆ ಪೈಂಟಿಂಗ್ ಮಾಡೋವಾಗ ಅದು ಬಾಯಿಗೆ ಹೋಗಿ ಏನಾದ್ರೂ ಆಗ್ಬೋದು ಅನ್ನೋ ಭಯ ಇದ್ರೆ, ಒಂದು ಬಟ್ಟಲಲ್ಲಿ ಮೈದಾ ಮತ್ತು ಉಪ್ಪು ನೀರು ಹಾಕಿ ಅದಕ್ಕೆ ಫುಡ್ ಕಲರ್ ಬೆರೆಸಿ ಕೊಡಿ. ಮನೇಲೇ ಪೈಂಟ್ ರೆಡಿ!
9.ಅಪಲ್ ತರದ ಹಣ್ಣು ಮತ್ತು ತರಕಾರಿ ಕತ್ತರಿಸಿದಾಗ ಕಪ್ಪಾಗದ ಹಾಗೆ ನೋಡಿಕೊಳ್ಳೋಕೆ ಅದನ್ನ ಕತ್ತರಿಸಿದ ನಂತರ ಉಪ್ಪು ನೀರಲ್ಲಿ ನೆನೆಸಿಡಿ.
10.ನಿಮ್ಮ ಕೈಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಇದ್ರೆ, ಉಪ್ಪಿಂದ ಕೈ ತೊಳ್ಕೊಳಿ. ವಾಸ್ನೆ ಓಡಿ ಹೋಗತ್ತೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೌದು, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ರಾಜಕಾರಣದ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೌಡ್ತಿಯಲ್ಲ, ನಾಯ್ಡು ಎಂದು ಮಾತಿನುದ್ದಕ್ಕೂ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು. ಇದೀಗ ಶಿವರಾಮೇಗೌಡ ಮಾಡ್ತಿರೋ ಜಾತಿ ರಾಜಕಾರಣಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಯಾವುದೇ ಹೆಣ್ಣಿಗೂ ಮದುವೆಯಾಗಿ ಒಂದು…
ಶಿವಂದುಬೆಗೆ ಕೋವಿಡ್-19 ಪತ್ತೆಯಾಗಿದೆ.ವೀಡೀಯೊ ಅನಲಿಸ್ಟ್ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. ಶಿವಂದುಬೆ ಬದಲಿ ಆಟಗಾರನಾಗಿ ಸಾಯಿರಾಜ್ ಪಾಟೀಲ್ ಹೆಸರು ಘೋಷಣೆ ಮಾಡಿದ್ದಾರೆ. ಇಂದು ಮುಂಬೈ ತಂಡ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲ್ಕತ್ತಾ ನಗರಕ್ಕೆ ತೆರಳಬೇಕಿತ್ತು. ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಶಿವಂದುಬೆ ತೆರಳಲಿಲ್ಲ ಕೋವಿಡ್-19 ಕಾರಣದಿಂದ ರಣಜಿ ಟ್ರೋಫಿ ಪಂದ್ಯಾವಳಿಯನ್ನು 6 ನಗರಗಳಲ್ಲಿ ಆಯೋಜಿಸಲಾಗಿದೆ. ಅವು ಯಾವುವೆಂದರೆ ಕೋಲ್ಕತ್ತಾ ಬೆಂಗಳೂರು ಚೆನ್ನೈ ಅಹಮದಾಬಾದ್ ಮುಂಬೈ ತಿರುವನಂತಪುರಂ
ಬಳ್ಳಾರಿ ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇಲ್ಲಿನ ಟ್ಯಾಂಕ್ 1 ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ನೋಟಿನ ಬದಲು ಪೇಪರ್ ಬಂದ ಘಟನೆ ನಡೆದಿದೆ. ರಮೇಶ್ ಎನ್ನುವವರು 8000 ರೂಪಾಯಿ ಡ್ರಾ ಮಾಡಿದ್ದು 500 ರೂಪಾಯಿ ಮುಖಬೆಲೆಯ 15 ನೋಟುಗಳ ನಡುವೆ ಅದೇ ಗಾತ್ರದ ಚಲನ್ ಮಾದರಿಯ ಪೇಪರ್‌ವೊಂದು ಬಂದಿದೆ. ಹಣವನ್ನು ಎಣಿಸಿ ನೋಡುವಾಗ ಪೇಪರ್ ಕಂಡಿದ್ದು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಂದೋ ಹಣದ…
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…
ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.
ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪುಟ್ಟರಾಜು ಅವರು, ‘ಖಾಸಗಿ ಹೋಟೆಲ್ವೊಂದರಲ್ಲಿ ಸುಮಲತಾ ಈಗಾಗಲೇ ಬಿಜೆಪಿ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೇರಲು…