ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ನಮಗಿರುವ ಸೌಲಭ್ಯಗಳನ್ನು ಬಳಸುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮ ಪ್ರಯತ್ನ ಮಾಡಬೇಕೆ ಹೊರತು ಇತರರ ಜತೆಗೆ ಹೋಲಿಸಿಕೊಂಡು ನರಳಬಾರದು. ಕೆಲವು ಪಕ್ಷಿಗಳ ಮೂಲಕ ನಮ್ಮ ಆಲೋಚನೆ ವಿಷಯವನ್ನು ಸರಳವಾಗಿ ಹೇಳಿದ್ದಾರೆ.
ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ.
ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು.
ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್ಲಾ ಬರುತ್ತಿದಾರೆ.’ ಇದರಿಂದ ನವಿಲು ಭಯದಿಂದ ‘ಹಾಂ ಏನು ಅದೃಷ್ಟ ಬಿಡಮ್ಮ…ಸುಂದರವಾಗಿದ್ದೀನಿ ಎಂದು ಈ ಜೂನಲ್ಲಿ ನನ್ನನ್ನು ತಂದು ಹಾಕಿದ್ದಾರೆ. ಇಲ್ಲಿ ಒಂದೇ ಒಂದು ಕಾಗೆ ಸಹ ಇಲ್ಲ. ಅವೆಲ್ಲಾ ಹಾಯಾಗಿ ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿವೆ. ನಾನು ಕಾಗೆಯಾಗಿ ಯಾಕೆ ಹುಟ್ಟಲಿಲ್ಲ ಎಂದು ಎಷ್ಟೋ ಸಲ ವ್ಯಥೆ ಪಟ್ಟಿದ್ದೇನೆ. ‘ ಎಂದು ನವಿಲು ಹೇಳಿದ ಬಳಿಕ ಕಾಗೆಗೆ ಜ್ಞಾನೋದಯವಾಯಿತು.
ಮನುಷ್ಯರಲ್ಲೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರಿಗೇನು ಬರವಿಲ್ಲ. ಈ ರೀತಿ ಮಾಡುತ್ತಾ ತಮ್ಮಲ್ಲಿನ ಜ್ಞಾನವನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರವರ ವಿಶೇಷತೆ ಅವರಿಗೆ ಇದ್ದೇ ಇರುತ್ತದೆ. ಅವರವರ ಸಮಸ್ಯೆಗಳೂ ಅವರವರಿಗೆ ಇರುತ್ತವೆ. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸದ್ಭಳಕೆ ಮಾಡಿಕೊಂಡರೆ ಸಂತೃಪ್ತಿಯಾಗಿ ಜೀವಿಸಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ. ಒಮ್ಮೆ ನೋಡಿ ಬದಲಾಗಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಂಡೀಗಢ, ಅ.9-ಚೀನಾ ಡ್ರೋಣ್‍ಗಳ ಮೂಲಕ ಪಾಕಿಸ್ತಾನದ ಉಗ್ರಗಾಮಿಗಳು ಪಂಜಾಬ್ ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕಾಗಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಭಾಗದಲ್ಲಿ ಎಸೆದ ಘಟನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಪ್ರಕರಣ ವರದಿಯಾಗಿದೆ. ಪಂಜಾಬ್‍ನಲ್ಲಿ ಮತ್ತೆ ಪಾಕಿಸ್ತಾನ ಮೂಲದ ಎರಡು ಡ್ರೋಣ್‍ಗಳು ಹಾರಾಟ ನಡೆಸಿವೆ.ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಡ್ರೋಣ್ ಭಾರತ ಪ್ರವೇಶಿಸುತ್ತಿರುವುದನ್ನು ಪತ್ತೆ ಮಾಡಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಫೀರೋಜïಪುರ ಹುಸೇನಿವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನದ ಕಡೆಯಿಂದ…
ಹಣದ ಯಾರಿಗೆ ತಾನೇ ಬೇಡ ಹೇಳಿ.ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ.ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ ಪ್ರಾಪ್ತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಣ ಮಾಡಿ. ಪ್ರತಿ ವಾರ ಮನೆ ಕ್ಲೀನ್ ಮಾಡುವಾಗ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದ್ರಿಂದ ಕೀಟಾಣುಗಳು ನಾಶವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಪ್ರತಿ…
ಇಂದು ಗುರುವಾರ, 08/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕಮ್ಮಿ ಇಲ್ಲ, ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಸಿಗರೇಟ್ ಸೇದುತ್ತಾರೆ, ಇನ್ನು ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರು ಮಾತ್ರ ಸಿಗರ್ಟ್ ಸೇದುತ್ತಿದ್ದರು ಆದರೆ ಈಗ ಶಾಲೆಗೆ ಹೋಗುವ ಮಕ್ಕಳು ಕೂಡ ಸಿಗರೇಟ್ ಗಳನ್ನ ಸೇದುತ್ತಿದ್ದಾರೆ ಮತ್ತು ಅದನ್ನ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 31 ಲಕ್ಷ ಸಿಗರೇಟ್ ಸೇದುತ್ತಿದ್ದಾರೆ ಜನರು, ಇನ್ನು ಜನರು ಸಿಗರೇಟ್ ಸೇದಿದ ಮೇಲೆ ಅದರ ತುದಿಯನ್ನ ಎಸೆಯುತ್ತಾರೆ ಮತ್ತು ಇನ್ನು ಕೆಲವರು ಅದನ್ನ…
ಕೈ ಚೀಲ ( ಹ್ಯಾಂಡ್ ಬ್ಯಾಗ್) ಮಹಿಳೆಯರ ಅಚ್ಚುಮೆಚ್ಚಿನ ವಸ್ತುಗಳಲ್ಲಿ ಒಂದು. ಸುಂದರ ಹ್ಯಾಂಡ್ ಬ್ಯಾಗ್ ಖರೀದಿ ಮಾಡಲು ಮಹಿಳೆಯರು ಇಷ್ಟಪಡ್ತಾರೆ. ಹಣವುಳ್ಳವರು ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಂಡ್ ಬ್ಯಾಗ್ ಖರೀದಿ ಮಾಡ್ತಾರೆ. ಆದ್ರೆ ಈ ಬ್ಯಾಗ್ ಬೆಲೆ ಕೇಳಿದ್ರೆ ದಂಗಾಗ್ತಿರಾ. ಈ ಕೈಚೀಲ ಸಾವಿರ, ಎರಡು ಸಾವಿರಕ್ಕಲ್ಲ, ಒಂದು ಕೋಟಿ 44 ಲಕ್ಷ ರೂಪಾಯಿಗೆ ಹರಾಜಾಗಿದೆ. ವಿಶ್ವದ ಅತ್ಯಂತ ದುಬಾರಿ ಕೈಚೀಲಗಳಲ್ಲಿ ಒಂದಾಗಿರುವ ಇದಕ್ಕೆ ದಿ 2015 ಹಿಮಾಲಯ್ ನಿಲೋಟಿಕಸ್ ಕ್ರೊಕೊಡಯಲ್ ಬರ್ಕಿನ್ 35 ಎಂದು…
ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…