ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ರಹಸ್ಯಗಳನ್ನು ಎಂದಿಗೂ ಭೇದಿಸಲಾಗುವುದಿಲ್ಲ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಮಂದಿರಕ್ಕೆ ಸಿಡಿಲು ಬಡಿಯುತ್ತೆ. ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ. ಹೀಗೇಕೆ ಆಗುತ್ತದೆಂದು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ. ಗುಡುಗು…ಸಿಡಿಲು…ಈ ವಿಕೃತ ಶಬ್ಧಕ್ಕೆ ಸುತ್ತ ಮುತ್ತಲಿನ ಬೆಟ್ಟಗಳು ಕಂಪಿಸುತ್ತವೆ. ಜನ ಹೆದರಿ ನಡುಗುತ್ತಾರೆ. ಪಶು ಪಕ್ಷಿಗಳು ಬೆದರಿ ಓಡುತ್ತವೆ.
ಸಿಡಿಲಿನ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತದೆ. ಆದರೆ, ಮಂದಿರಕ್ಕೆ ಮಾತ್ರ ಯಾವುದೇ ಹಾನಿ ಸಂಭವಿಸುವುದಿಲ್ಲ. ಬೆಟ್ಟದ ಮೇಲಿನ ಕಲ್ಲುಗಳು ಕೆಳಗೆ ಬೀಳುವುದಿಲ್ಲ. ಮಾರನೇ ದಿನ ದೇವಾಲಯಕ್ಕೆ ಅರ್ಚಕ ಹೋಗಿ…ತುಂಡು ತುಂಡಾಗಿದ್ದ ಶಿವಲಿಂಗದ ತುಣುಕುಗಳನ್ನು ಒಂದು ಕಡೆ ಸೇರಿಸಿ ಅಭಿಷೇಕ ಮಾಡುತ್ತಾರೆ. ಒಂದು ದಿನ ಕಳೆಯುವಷ್ಟರಲ್ಲಿ ಶಿವಲಿಂಗಕ್ಕೆ ಯಥಾರೂಪ ಬಂದು ಹಿಂದಿನಂತೆಯೇ ಆಗಿರುತ್ತದೆ. ಅಲ್ಲಿ ಏನೂ ನಡೆದಿಲ್ಲವೇನೋ ಎನ್ನುವಂತೆ ಕಾಣುತ್ತದೆ. ಇದನ್ನು ವಿಚಿತ್ರವೆನ್ನಬೇಕೋ..ಶಿವನ ಲೀಲೆ ಎನ್ನಬೇಕೊ ಎಂದು ಅರ್ಥವಾಗದ ಸ್ಥಿತಿಯಲ್ಲಿ ಭಕ್ತರಿದ್ದಾರೆ.
ಈ ರೀತಿ ಆಗುತ್ತಿರುವುದು ಮೊದಲೇನಲ್ಲ. ನೂರಾರು ವರ್ಷಗಳಿಂದ ಹೀಗೇ ನಡೆಯುತ್ತಿದೆ. ಪ್ರತೀ 12 ವರ್ಷಕ್ಕೊಮ್ಮೆ ಇಂತಹ ವಿಧ್ಯಮಾನ ನಡೆಯುವ ದೇವಾಲಯದ ಹೆಸರು…’ ಬಿಜಲೀ ಮಹಾದೇವ್ ವದಿರ್ ‘. ಹಿಮಾಚಲ ಪ್ರದೇಶದ ಕುಲೂ ಕಣಿವೆಯಲ್ಲಿ ಈ ದೇವಾಲಯವಿದೆ. ಹೀಗೆ ನಡೆಯಲು ಕಾರಣವೇನೆಂಬುವುದನ್ನು ತಿಳಿಸುವ ಒಂದು ಕತೆ ಇಲ್ಲಿ ಪ್ರಚಾರದಲ್ಲಿದೆ.
ಹಿಂದೆ ಕುಲೂ ಕಣಿವೆಯಲ್ಲಿ ಬಲಿಷ್ಟನಾದ ರಾಕ್ಷಸನೊಬ್ಬನಿದ್ದನಂತೆ. ಅಲ್ಲಿರುವ ಜನರನ್ನು , ಪಶು ಪಕ್ಷಿಗಳನ್ನು ಅಂತ್ಯಮಾಡಲು ಆತ ಒಂದು ಹಾವಿನ ರೂಪ ತಳೆದನಂತೆ. ಬೀಯಾಸ್ ನದಿ ಪ್ರವಾಹಕ್ಕೆ ಅಡ್ಡಲಾಗಿ ಮಲಗಿ ಸುತ್ತ ಮುತ್ತಲ ಗ್ರಾಮಗಳನ್ನು ಮುಳುಗಿಸಲು ಪ್ರಯತ್ನಿಸುತ್ತಾನಂತೆ. ಇದನ್ನು ನೋಡಿದ ಈಶ್ವರ ತನ್ನ ತ್ರಿಶೂಲದಿಂದ ಆ ರಾಕ್ಷಸನನ್ನು ಸಂಹರಿಸುತ್ತಾನೆ. ಆ ರಾಕ್ಷಸ ಸಾಯುತ್ತಾ ದೊಡ್ಡ ಬೆಟ್ಟವಾಗಿ ರೂಪತಳೆಯುತ್ತಾನೆ.ಒಂದು ವೇಳೆ ಸಿಡಿಲು ಬಡಿದರೆ, ಅಲ್ಲಿರುವ ಜನ, ಪಶು ,ಪಕ್ಷಿಗಳು ನಾಶವಾಗುವುದನ್ನು ತಡೆಯಲು ,ಶಿವ ಆ ಸಿಡಿಲು ತನಗೇ ಬಡಿಯುವಂತೆ ಮಾಡಿದ್ದಾನೆಂದು ಪುರಾಣ ಹೇಳುತ್ತದೆ. ಮಹಾದೇವನ ಆಜ್ಞೆಯಂತೆಯೇ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆಂದು…ನಂತರ ಆ ಶಿವಲಿಂಗ ಒಂದುಗೂಡುತ್ತದೆಂಬ ಪ್ರತೀತಿಯಿದೆ.
ಈ ಮಹಾದೇವನ ಆಲಯವನ್ನು ತಲುಪುವುದು ಸುಲಭಸಾಧ್ಯವಲ್ಲ ಸಮುದ್ರ ಮಟ್ಟದಿಂದ 2,450 ಮೀಟರ್ ಎತ್ತರದ ಬೆಟ್ಟದ ಮೇಲಿರುವ ಈ ದೇವಾಲಯವನ್ನು ತಲುಪಲು ಕಲ್ಲು, ಮುಳ್ಳುಗಳ ಮೇಲೆ ನಡೆದುಕೊಂಡು ಹೋಗಬೇಕು.ಬೆಟ್ಟದ ಮೇಲಿಂದ ಕಣಿವೆಯವರೆಗೂ ಮೆರವಣಿಗೆ ಮಾಡುವುದು ಇಲ್ಲಿನ ಪದ್ಧತಿಯಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ ಮನಸು ಮಾಡದವರು. ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ ಮಿಡಿಯುವವರು,…
ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್ರವರು…
KOLAR NEWS PAPER 25-12-2022
ಪ್ರಸ್ತುತ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್ ಐಡಿಯಾಗೆ ಶಾಕ್ ಉಂಟಾಗಿದೆ. ಸಂಸ್ಥೆಗೆ ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ. ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ…
ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ. ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿ ದಿನ…
ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.