ಉಪಯುಕ್ತ ಮಾಹಿತಿ

ಉತ್ತರ ಕೊರಿಯ ಹೈಡ್ರೋಜನ್ ಬಾಂಬ್ ಪರೀಕ್ಷೆ ಕೈಗೊಳ್ಳುವುದಾಗಿ ಒಡ್ಡಿದ ಬೆದರಿಕೆಯಿಂದ ಭಾರತದ ಮೇಲೆ ಬೀರಿದ ಪರಿಣಾಮ ನಿಮಗೆ ಗೊತ್ತಾ..? ತಿಳಿಯಲು ಇದನ್ನು ಓದಿ ..

161

 ಉತ್ತರ ಕೊರಿಯ ತಾನು ಇನ್ನೊಂದು ಹೈಡ್ರೋಜನ್ ಬಾಂಬ್ ಪರೀಕ್ಷೆ ಕೈಗೊಳ್ಳುವುದಾಗಿ ಒಡ್ಡಿದ ಬೆದರಿಕೆಯಿಂದ ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ನಲುಗಿರುವಂತೆಯೇ ಇಂದು ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.

ರಿಯಲ್ಟಿ, ಬ್ಯಾಂಕಿಂಗ್, ಹಣಕಾಸು, ಕ್ಯಾಪಿಟಲ್ ಗೂಡ್ಸ್ ರಂಗದ ಶೇರುಗಳು ತೀವ್ರ ಮಾರಾಟದ ಒತ್ತಕ್ಕೆ ಗುರಿಯಾದವು. ಪರಿಣಾಮವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,000ಕ್ಕಿಂತ ಕೆಳ ಮಟ್ಟಕ್ಕೆ ಜಾರಿ 9,977.10 ಅಂಕಗಳ ಮಟ್ಟಕ್ಕೆ ಕುಸಿಯಿತು.

‘ಉತ್ತರ ಕೊರಿಯವನ್ನುನಿರ್ನಾಮ ಮಾಡುವುದು ನಮಗೆ ಕಷ್ಟದ ಕೆಲಸವೇನೂ ಅಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಿಗೇ ಉತ್ತರ ಕೊರಿಯ, ತಾನು ಶಾಂತ ಸಾಗರದಲ್ಲಿ ಇನ್ನೊಂದು ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿತು.

ಈ ನಡುವೆ ಡಾಲರ್ ಎದುರು ಕುಸಿದ ರೂಪಾಯಿ ದರ 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದು ಶೇರು ಮಾರುಕಟ್ಟೆಗೆ ಆಘಾತ ಒಡ್ಡಿತು.

ವಾರದ ಕೊನೇ ದಿನವಾದ ಇಂದು ಶುಕ್ರವಾರದ ವಹಿವಾಟನ್ನು ಸೆನ್ಸೆಕ್ಸ್ 457.99 ಅಂಕಗಳ ನಷ್ಟದೊಂದಿಗೆ 31,912.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ, ನಿಫ್ಟಿ 161.05 ಅಂಕಗಳ ನಷ್ಟದೊಂದಿಗೆ 9,960.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಮುಗಿಸಿತು.

ಬ್ಯಾಂಕ್ ನಿಫ್ಟಿ 441.75 ಅಂಕಗಳ ನಷ್ಟವನ್ನು ಅನುಭವಿಸಿದರೆ, ಐಟಿ ನಿಫ್ಟಿ 31.50 ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಇಂದಿನ ಟಾಪ್ ಗೇನರ್ಗಳು : ಎಚ್ ಸಿ ಎಲ್ ಟೆಕ್, ವಿಪ್ರೋ, ಭಾರ್ತಿ ಇನ್ಫ್ರಾಟೆಲ್;

ಟಾಪ್ ಲೂಸರ್ಗಳು : ಟಾಟಾ ಸ್ಟೀಲ್, ಹಿಂಡಾಲ್ಕೋ, ಎಸ್ ಬ್ಯಾಂಕ್, ಅಲ್ಟ್ರಾ ಟೆಕ್ ಸಿಮೆಂಟ್, ವೇದಾಂತ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…

  • ಸಿನಿಮಾ, ಸುದ್ದಿ

    ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

    ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ…

  • ಸಿನಿಮಾ, ಸುದ್ದಿ

    ಅಪ್ಪನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಐರಾ.

    ಕೆಜಿಫ್ ಸ್ಟಾರ್ ಯಶ್ ಅವರು 34ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮುದ್ದಿನ ಮಗಳು ಐರಾ ತನ್ನ ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ರಾಧಿಕಾ ಅವರು ಸರ್ಪ್ರೈಸ್ ಹಾಗಿ ಯಶ್ ಗೆ ನಿಮ್ಮ ಜೀವನವನ್ನು ನಾವು ಪಡೆದುಕೊಂಡಂತೆ, ನಿಮ್ಮ ಖಾತೆಯನ್ನು ಸಹ ಪಡೆದುಕೊಂಡಿದ್ದೇವೆ ಎಂದು ನಿಮ್ಮ ದೊಡ್ಡ ಅಭಿಮಾನಿಯಾಗಿ ನಮ್ಮ…

  • ಉಪಯುಕ್ತ ಮಾಹಿತಿ

    ಮೀಸಲಾತಿ ಯಾ‌ರ‌್ಯಾರಿಗೆ ಇದೆ.?ಎಷ್ಟಿದೆ..‌?ಎಷ್ಟು ಜಾತಿ ಸಮುದಾಯಗಳು ಮೀಸಲಾತಿ ಅಡಿಯಲ್ಲಿ ಬರುತ್ತೆ.?ತಿಳಿಯಲು ಮುಂದೆ ಓದಿ ಶೇರ್ ಮಾಡಿ…

    ಇದುವರೆಗೂ ಜನಕ್ಕೆ ಅರ್ಥ ಆಗದಿರೋದು ಎರಡೇ ಎರಡು ವಾಕ್ಯ.. *ಮೀಸಲಾತಿ ಇರುವುದು ಆರ್ಥಿಕ ವಾಗಿ ಜನರನ್ನ ಮೇಲೆ ತರುವುದಕ್ಕಲ್ಲ ಬದಲಿಗೆ ಅದು ಸಾಮಾಜಿಕ ನ್ಯಾಯಕ್ಕಾಗಿ… *ಮೀಸಲಾತಿ ಅಂದ್ರೆ ಬರೀ 18% ಮೀಸಲಾತಿ ಪಡೆಯುತ್ತಿರೊ ಜನ ಅಂದ್ರೆ ಎಸ್‌ಸಿ ಎಸ್ಟಿ ಸಮುದಾಯದವರೆಗೆ ಮಾತ್ರ ಇರುವುದೆಂದು ತಿಳಿದಿರುವುದು… ಮೀಸಲಾತಿ ಯಾ‌ರ‌್ಯಾರಿಗೆ ಇದೆ..? ಎಷ್ಟಿದೆ..‌? ಎಷ್ಟು ಜಾತಿ ಸಮುದಾಯಗಳು ಮೀಸಲಾತಿ ಅಡಿಯಲ್ಲಿ ಬರುತ್ತೆ..? ಬಹು ಮುಖ್ಯವಾಗಿ ಮೀಸಲಾತಿ ಎಂಬುದು ಯಾವ ಯಾವ ಕ್ಷೇತ್ರದಲ್ಲಿದೆ..? ಈ ಮೀಸಲಾತಿ ಏತಕ್ಕಾಗಿ ಬೇಕು…? ಮೀಸಲಾತಿ ನಿಂತರೆ…

  • ವಿಸ್ಮಯ ಜಗತ್ತು

    ಈ ಕಾಲದಲ್ಲೂ ಈ ಜನ ವರ್ಷ ಪೂರ್ತಿ ನೀರಿನಲ್ಲೇ ವಾಸ ಮಾಡುತ್ತಾರೆ!

    ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.

  • ಸುದ್ದಿ

    ಬ್ರೆಕಿಂಗ್ ಸುದ್ದಿ..ಮುದ್ದಹನುಮೇಗೌಡರು ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತ.?ಈ ಸುದ್ದಿ ನೋಡಿ

    ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…