ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲಾ ಎನ್ನುದಕ್ಕೆ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುನೀತ್ ವೆಂಕಟೇಶ ಗೊಂಡ ಉದಾಹರಣೆಯಾಗಿದ್ದಾನೆ. ಹೌದು, 12 ರಿಂದ 14ರ ಆಸು ಪಾಸಿನ ಪೋರ ಈ ಪುನೀತ್ ಮಾಡಿದ ಆವಿಷ್ಕಾರವನ್ನು ನೀವು ಕೇಳಿದರೇ ಶಾಕ್ ಆಗ್ತೀರಾ.

ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನು 6ನೇ ಕ್ಲಾಸ್ ಓದುತ್ತಿರುವ ಪುನೀತ್ ಹಾಗೂ ಆತನ ಸಹಪಾಠಿಗಳು ಸೇರಿ ನೀರಿನಲ್ಲಿ ಚಲಿಸುವ ಬೈಸಿಕಲ್‌ನನ್ನು ಆವಿಷ್ಕಾರ ಮಾಡಿ ಅದೇ ಸೈಕಲ್ ನಿಂದ ಯಶಸ್ವಿಯಾಗಿ ಇಲ್ಲಿನ ವೆಂಕಟಾಪುರ ನದಿ ದಾಟಿ ಎಲ್ಲರಿಗೆ ಉಬ್ಬೆರುವಂತೆ ಮಾಡಿದ್ದಾನೆ.

ಈ ಆವಿಷ್ಕಾರವನ್ನು ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ತೇಲುವಿಕೆಯ ಅನ್ವಯ ಸೈಕಲ್ ಮತ್ತು ನಾಲ್ಕು ಕ್ಯಾನುಗಳನ್ನು ಬಳಸಿ ಅತ್ಯಂತ ಕಡಿಮೆ ಹಣದಲ್ಲಿ ನೀರಿನ ಮೇಲೆ ಚಲಿಸುವ ಸೈಕಲ್ ತಯಾರಿಸಲಾಗಿದೆ.
ಸ್ವಚ್ಛ ಭಾರತ ಅಭಿಯಾನದ ಬೆಂಬಲವಾಗಿ ಈ ಆವಿಷ್ಕಾರ ರೂಪಿಸಿದ್ದು, ಮುಂಭಾಗದಲ್ಲಿ ಜಾಳಿಗಳನ್ನು ಜೋಡಿಸಿ, ಕಸ ಕಡ್ಡಿಗಳನ್ನು ತೀರದಲ್ಲಿ ಸಂಗ್ರಹಿಸಿ ತೆಗೆಯಬಹುದಾಗಿದೆ. ಸೈಕಲನ್ನು ಸ್ವಲ್ಪ ಮಾತ್ರ ಬದಲಾವಣೆ ಮಾಡಿಕೊಂಡು ಕಬ್ಬಿಣದ ಪಟ್ಟಿಯ ಮೂಲಕ ನಾಲ್ಕು ಕಡೆಗಳಲ್ಲಿ ನೀರಿನ ಕ್ಯಾನ್ ಅಳವಡಿಸಲಾಗಿದೆ.
ಕ್ಯಾನ್ ಆಳಡಡಿಕೆಯ ಮುನ್ನ ಗಾಳಿಯನ್ನು ತುಂಬಿ ಸೀಲ್ ಮಾಡಲಾಗಿದೆ ಮಾತ್ರವಲ್ಲದೆ ಕಬ್ಬಿಣದ ಪಟ್ಟಿಗೆ ಅದನ್ನು ರಬ್ಬರಿನಿಂದ ಬಿಗಿಯಲಾಗಿದೆ. ಮುಂದಿನ ಚಕ್ರವನ್ನು ಸ್ಟೇರಿಂಗ್ ಆಗಿ ಬಳಸುವಂತೆ ಸೈಕಲ್ ಚೈನ್ ಬಳಸಲಾಗಿದ್ದು, ಯಾವ ದಿಕ್ಕಿನಲ್ಲಾದರೂ ಸೈಕಲ್ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಆವಿಷ್ಕಾರದ ಹಿಂದಿನ ಮುಖ್ಯ ಉದ್ದೇಶವೆಂದರೆ ನೀರಿನಲ್ಲಿ ತೇಲುವ ಎಲ್ಲ ಕಸಗಳನ್ನು ಜಾಳಿ ಸಹಾಯದಿಂದ ಸಂಗ್ರಹ ಮಾಡಿ ದಡಕ್ಕೆ ಹಾಕಬಹುದು ಎನ್ನುವ ಸಾಧನೆಯನ್ನು ಪುನೀತ್ ಮಾಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಪುನೀತ್ ತನ್ನ ಸಾಧನೆಗೆ ಸಹಕಾರ ನೀಡಿದ್ದು ಸಹಪಾಠಿಗಳು ಹಾಗೂ ಶಿಕ್ಷಕರು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.
ಈ ಆವಿಷ್ಕಾರದ ಹಿಂದೆ ಇರುವ ಮುಖ್ಯ ಕಾರಣವೆಂದರೆ ಶಾಲೆಯ ಶಿಕ್ಷಕ ಅನಂತ ಮೋಗೇರ ಕೊಟ್ಟ ಪ್ರೇರಣೆ , ಈ ಪ್ರೇರಣೆಯಿಂದಲೇ ಸಾಧನೆ ಮಾಡಿದ್ದೇನೆ ಮತ್ತು ಸ್ವಚ್ಛ ಭಾರತ್ ಸಂದೇಶವನ್ನು ಸಾರಲು ಈ ಸೈಕಲ್ ಸಹಕಾರಿಯಾಗಲಿದೆ ಎಂಬುದು ಪುನೀತ್ ಮನದಾಳದ ಮಾತು.

ವಿದ್ಯಾರ್ಥಿ ಪುನೀತ್ ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಇನಸ್ಪೈರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಆವಿಷ್ಕಾರದಿಂದ ಆಯ್ಕೆಗೆ ಕಾರಣವು ಹೌದು.
ಡಿಸೆಂಬರ್. 7ರಂದು ದೆಹಲಿಯಲ್ಲಿ ಸ್ಪರ್ಧೆ ರಾಷ್ಟ್ರಮಟ್ಟದ ಸ್ಪರ್ಧೆ ಡಿಸೆಂಬರ್. 7ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪುನೀತ್ ಸೈಕಲ್ ಹೊಡೆಯುವುದರ ಮೂಲಕ ಸ್ವಚ್ಚ್ ಭಾರತ್ ಸಂದೇಶವನ್ನು ಸಾರಲಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯ ಚುನಾವಣಾ ಕಣ ಸ್ಟಾರ್ ನಟರ ಎಂಟ್ರಿಯಿಂದ ರಂಗೇರಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಮತ್ತು ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಟಾರ್ ಗಳ ಕ್ಯಾಂಪೇನ್ನಿಂದ ಮಂಡ್ಯದಲ್ಲಿ ಸುಮಲತಾ ಪರ ಮತ ಗಳಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತಾ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಇದೇ ವೇಳೆ ಚಿತ್ರನಟರ ಪ್ರಚಾರದಿಂದ ಅಭ್ಯರ್ಥಿಗೆ ಮತ ಸಿಗಲ್ಲ ಎಂಬ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ. ದೇವೇಗೌಡರ ಹೇಳಿಕೆಯನ್ನು ಬಿ.ಸಿ. ಪಾಟೀಲ್ ಅಲ್ಲಗೆಳೆದಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ…
ನಮ್ಮ ಭಾರತದ 125 ಕೋಟಿ ಜನರಲ್ಲಿ ಕೇವಲ ಶೇ.10ರಷ್ಟು
ಇದು ಸ್ಫೂರ್ತಿಯ ಕತೆ ಆ ಹುಡುಗಿ ಮೂರು ಚಿನ್ನದ ಪದಕ ಗೆದ್ದು ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ, ಈಕೆ ಎಲ್ಲರ ಗಮನ ಸೆಳೆದದ್ದು ಗೆದ್ದ ಪದಕಗಳಿಂದ ಅಲ್ಲ. ಬದಲಾಗಿ ಸಾಧನೆಯ ಹಿಂದಿನ ಛಲದಿಂದ. ಸಾಧಿಸುವ ಛಲ, ಉತ್ಸಾಹ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು. ಸತತ ಶ್ರಮ, ಛಲ, ಪ್ರಾಮಾಣಿಕ ಪ್ರಯತ್ನವಿದ್ದರೆ ಕಷ್ಟಗಳು ಅಡ್ಡಿಯೇ ಅಲ್ಲ. ಈ ಮಾತಿಗೆ ಸಾಕ್ಷಿ ಫಿಲಿಪೈನ್ಸ್ನ ಈ ಬಾಲಕಿ. 11 ವರ್ಷದ ಈ ಬಾಲಕಿಯ ಕತೆ ಕೇಳಿದರೆ ಹೃದಯ ಭಾರವಾಗುತ್ತದೆ. ಈಕೆಯನ್ನು ಹರಸಲು…
KOLAR NEWS PAPER 27-12-2022
ಮೊಬೈಲ್ ನ ಒಟ್ಟು SAR ಅಂಶ ಹೆಚ್ಚಿದೆ. ಅದು CNET ವೆಬ್ ಸೈಟ್ ನ ಪ್ರಕಾರ ಅತೀ ಹೆಚ್ಚಿನ ಬೆಲೆಯ ಫೋನು ಹಾಗೂ ಅದರ ಬ್ಯಾಟರಿ ಚಾರ್ಜ್ 15 ಗಂಟೆ ಬರುತ್ತಿದೆ ಎಂದು ಹೇಳಲಾಗಿದೆ. ಅದರೆ SAR ಅಂಶ ಹೆಚ್ಚಿರುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಬ್ರೈನ್ ಟ್ಯೂಮರ್ ಬರುವ ಚಾನ್ಸ್ ಹೆಚ್ಚು ಇರುತ್ತದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ….