ಸಿನಿಮಾ

ಕೆಜಿಎಫ್ ಸಿನಿಮಾ ಈಗ ಎರಡು ಭಾಗಗಳಾಗಿ ತೆರೆಮೇಲೆ ಕಾಣಲಿದೆ …! ತಿಳಿಯಲು ಇದನ್ನು ಓದಿ….

1120

ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.

ಮ್ಯಾಗ್ನಮ್ ಒಪಸ್ ನಿರ್ಮಾಣದ ಸಿನಿಮಾದಲ್ಲಿ ಯಶ್ 70 ಹಾಗೂ 80 ರ ದಶಕದ ಡಾನ್ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ, ಕಳೆದ ಕೆಲವು ತಿಂಗಳಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಂಗದೂರ್  ನಿರ್ಮಾಣದ ಕೆಜಿಎಫ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.

ಸಿನಿಮಾವನ್ನು ವಿಭಿನ್ನವಾಗಿ ಹೊರತರಲು ಸಿನಿಮಾತಂಡ ಯೋಜನೆ ರೂಪಿಸುತ್ತಿದೆ. ಐದು ಭಾಷೆಗಳಲ್ಲಿ ಎರಡು ಭಾಗವಾಗಿ ಸಿನಿಮಾ ರಿಲೀಸ್ ಮಾಡಲು ಯೋಜಿಸಲಾಗುತ್ತಿದೆ.

ಈ ವಿಷಯ ಕಳೆದ ಕೆಲವು ತಿಂಗಳಿನಿಂದ ಕೇಳಿ ಬರುತ್ತಿದೆ, ಉತ್ತಮ ಕಥೆ, ಹಾಗೂ ಅದ್ದೂರಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿರುವ ಕಾರಣ ನಿರ್ದೇಶಕರು ಕೆಜಿಎಫ್ ಸಿನಿಮಾವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂಗು ಮೂಲಗಳು ತಿಳಿಸಿವೆ.

ರಕ್ತ ಚರಿತ್ರ, ಗ್ಯಾಂಗ್ ಆಪ್ ವಸ್ಸೇಯ್ಪೂರ್ ಹಾಗೂ ಇತ್ತೀಚಿನ ಬಾಹುಬಲಿ ಸಿನಿಮಾದಂತೆ ಕೆಜಿಎಫ್ ಸಿನಿಮಾ 2 ಭಾಗವಾಗಿ ರಿಲೀಸ್ ಆಗಲಿದೆ.

5 ಭಾಷೆಗಳಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸಿನಿಮಾದ ಆಡಿಯೋಗೆ ಈಗಾಗಲೇ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಸ್ಯಾಟಲೈಟ್ ಮತ್ತು ಹಂಚಿಕೆ ಹಕ್ಕುಗಳನ್ನು ದಕ್ಷಿಣ ಭಾರತದ ಭಾಷೆಗಳು ಮತ್ತು ಹಿಂದಿಗೆ ಈಗಾಗಲೇ ನೀಡಲಾಗಿದೆ.  ಸಿನಿಮಾದ ಆಡಿಯೋ ಹಕ್ಕುಗಳಿಗೆ ಹಿಂದೆಂದೂ ಇರದ ಬೇಡಿಕೆ ಬಂದಿದೆ.

ಸಿನಿಮಾ ವ್ಯಾಪಾರಿಗಳು ಕೆಜಿಎಫ್ ಮತ್ತೊಂದು ಬಾಹುಬಲಿಯಂತಾಗುವ ಭರವಸೆಯಲ್ಲಿದ್ದಾರೆ.

ಬಾಹುಬಲಿ ರೇಂಜ್ ನಲ್ಲಿ ಈ ಸಿನಿಮಾ ಕೂಡ ಉತ್ತಮ ಆದಾಯತರಲಿದೆ ಎಂದು ನಂಬಿರುವ ಕೆಲವೊಂದು ದೊಡ್ಡ ದೊಡ್ಡ ಕಂಪನಿಗಳು ಕೆಜಿಎಫ್ ಹಿಂದೆ ಬಿದ್ದಿವೆ. ಜನಪ್ರಿಯ ನಟನಾಗಿರುವ ಯಶ್ ಅವರಿಗೆ ಉತ್ತರ ಭಾರತದಲ್ಲೂ ಕೂಡ ಫೇಮಸ್ ಆಗಿ ಬಹು ದೊಡ್ಡ ಅಭಿಮಾನಿ ಬಳಗವೇ ಇದೆ.

ಯಶ್ ಅವರ ಹಲವು ಸಿನಿಮಾಗಳು ಬೋಜ್ ಪುರಿ ಮತ್ತು ಹಿಂದಿಗೆ ಡಬ್ ಆಗಿವೆ. ಅವರ ಸ್ಟಾರಾ ಪವರ್ ಕೆಜಿಎಫ್ ಗೆ ವರದಾನವಾಗಲಿದೆ.

ಉಗ್ರಂ ಮೂಲಕ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಮತ್ತೆ ತಮ್ಮ ಪ್ರತಿಭೆ ಒರೆ ಹಚ್ಚಲು ಮುಂದಾಗಿದ್ದಾರೆ. ಯಶ್ ರಾಕಿ ಎಂಬ ಪಾತ್ರದಲ್ಲಿ ನಟಿಸಿದ್ದು, ಶ್ರೀನಿಧಿ ಶೆಟ್ಟಿ ಯಶ್ ಗೆ ನಾಯಕಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ತಂತ್ರಜ್ಞಾನ

    ಭಾರತದ ಮೊದಲ ವಿಮಾನ ನಿಲ್ದಾಣ ಸಮುದ್ರದ ಮೇಲೆ ನಿರ್ಮಾಣವಾಗಲಿದೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.

  • ಸುದ್ದಿ

    ಮಂಗಳಸೂತ್ರ ನುಂಗಿದ ಹೋರಿ… ಮಂಗಳ ಸೂತ್ರದ ಬೆಲೆಯೆಷ್ಟು ಗೊತ್ತಾ?

    ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ವಾಘಪುರ್‌ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ. ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ…

  • ಜೀವನಶೈಲಿ

    ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಮಾಡಿದ್ರೆ, ಅದೃಷ್ಟ ತಾನಾಗೇ ನಿಮ್ಮ ಬಳಿ ಬರುವುದು..!

    ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.

  • ಉಪಯುಕ್ತ ಮಾಹಿತಿ

    ವಾಹನ ಸವಾರರಿಗೆ ಬಿಗ್ ಶಾಕ್.!ಯಾಮಾರಿದ್ರೆ ಬೀಳುತ್ತೆ ದುಬಾರಿ ದಂಡ….

    ಇದುವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಲ್ಪ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ವಾಹನ ಸವಾರರಿಗೆ ಹೊಸ ವರ್ಷದಿಂದ ಶಾಕ್ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಈಗಿರುವ ದಂಡದ ಮೊತ್ತವನ್ನು ಭಾರಿ ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ, ಪ್ರಸ್ತಾವನೆಯೊಂದನ್ನು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ. ಈಗ ದಂಡದ ಮೊತ್ತ ಕಡಿಮೆ ಇರುವ ಕಾರಣ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಕಾರಣ ಈ ಕ್ರಮಕ್ಕೆ…

  • ಉಪಯುಕ್ತ ಮಾಹಿತಿ

    ರಥಸಪ್ತಮಿ ಮಹತ್ವ?

    *ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…