ಉಪಯುಕ್ತ ಮಾಹಿತಿ

ಮನೆ ಮುಂದೆ ಬೆಳೆಯೋ “ಪುದಿನ ಸೊಪ್ಪಿನ” ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!

1018

ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು”  ಅಡಿಗೆ ಮನೇಲಿ  ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ  ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.

ಪುದಿನ ಮಾರಕ ಕಾಯಿಲೆಯಾದ  ಕ್ಯಾನ್ಸರ್ ಸೇರಿದಂತೆ  ತುಂಬಾ ಕಾಯಿಲೆಗಳಿಗೆ ಒಳ್ಳೆಯದು:- 

ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ.

ನಮ್ಮ ಚರ್ಮದ ಮೇಲೆ ಪುದಿನ ಮೋಡಿ :-

ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.

ಅಡಿಗೆ ಉಪಯೋಗದಲ್ಲಿ :-

ಇದರಲ್ಲಿ ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.

ನಮಗೆ ಗೊತ್ತಿಲ್ಲದ ಇನ್ನೂ ಕೆಲುವು ಉಪಯೋಗಗಳು ಎಲ್ಲಿವೆ ನೋಡಿ !

*ಶೀತ ಆಗಿ ಗಂಟಲು ನೋವು ಬಂದಿದ್ದರೆ, ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ.

*ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ. 

*ಪುದೀನ ಜ್ಯೂಸ್ ಜೊತೆ ಅಷ್ಟೇಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.

*ಊಟಕ್ಕೆಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.

*ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದಮೊಡವೆ ಕಡಿಮೆ ಆಗುತ್ತೆ.

*ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ, ಸ್ವಲ್ಪ ನಿಂಬೆರಸ ಮತ್ತುಜೇನು ಸೇರಿಸಿ 3 ದಿನ ಕುಡಿದರೆ, ವಾಂತಿ ಪೂರ್ತಿ ವಾಸಿ ಆಗುತ್ತೆ.

ನೋಡಿದರಲ್ಲ  ಮನೆ ಮುಂದೆ ಸಿಗೋ ಪುದೀನಾ ಸೊಪ್ಪಿಂದ ಎಷ್ಟೆಲ್ಲಾ ಉಪಯೋಗ ಇದೆ ಅಂತಾ?  ನೀವಿದನ್ನ ಹೆಂಗೆ ಉಪಯೋಗಿಸ್ತೀರ ಅಂತ ಯೋಚ್ನೆ ಮಾಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪಾನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, ಬೇಗ ಎಚ್ಛೆತ್ತುಕ್ಕೊಳ್ಳಿ ನಿರ್ಲಕ್ಷ ಮಾಡಿದರೆ ಬಾರಿ ದಂಡ ಕಟ್ಟಬೇಕಾಗುತ್ತದೆ.

    ಪಾನ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿ ಇದ್ದೆ ಇರುತ್ತದೆ. ಪಾನ್ ಕಾರ್ಡ್ ಇಲ್ಲದೆ ಯಾವುದೇ ವ್ಯಾಪಾರ ಮತ್ತು ವ್ಯವಹಾರವನ್ನ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ಹಣದ ವಹಿವಾಟನ್ನ ಸಹ ಮಾಡಬೇಕೆಂದರೆ ನಿಮಗೆ ಪಾನ್ ತುಂಬಾ ಅವಶ್ಯಕ. ಇನ್ನು ಕಳೆದ ಎರಡು ವರ್ಷಗಳಿಂದ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನ ಜಾರಿಗೆ ತರಲಾಗಿದ್ದು ಆ ನಿಯಮಗಳನ್ನ ಪಾಲಿಸುವುದು ಕಡ್ಡಾಯ ಕೂಡ ಆಗಿತ್ತು. ಈ ಹಿಂದೆ ಬ್ಯಾಂಕುಗಳಲ್ಲಿ ವ್ಯವಹಾರಗಳನ್ನ ಮಾಡಬೇಕೆಂದರೆ ತುಂಬಾ ಸುಲಭವಾಗಿ ಮಾಡಬಹುದಾಗಿತ್ತು…

  • Sports

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಸಹಾಯಕ ಸಿಬ್ಬಂದಿಗೆ ಕೋವಿಡ್-19

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಕೋರೋನ  ಪಶ್ಚಿಮ ಬಂಗಾಳ ಕ್ರಿಕೆಟ್ 6 ಆಟಗಾರರಿಗೆ  ಒಬ್ಬ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. 6 ಬಂಗಾಳ ಕ್ರಿಕೆಟ್ ಆಟಗಾರರಿಗೆ ಮತ್ತು ಒಬ್ಬ ಸಹಾಯಕ ಸಿಬ್ಬಂದಿ ಕೋವಿಡ್-19 ಪತ್ತೆಯಾಗಿದೆ.ರಣಜಿ ಪಂದ್ಯಗಳ ತಯಾರಿಯಲ್ಲಿ ತೊಡಗಿದ್ದ ಬಂಗಾಳ ಆಟಗಾರರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ತರಬೇತಿ ಯನ್ನು ರದ್ದುಗೊಳಿಸಲಾಯಿತು.ರಣಜಿ ಪಂದ್ಯಗಳನ್ನು ಆಡಲು ಬೆಂಗಳೂರು ಪ್ರವಾಸವನ್ನು ಜ.8 ಕೈಗೊಳ್ಳಬೇಕಾಗಿತ್ತು ಅದನ್ನು ಮುಂದೂಡಲಾಗಿದೆ. ಕೋವಿಡ್-19 ದೃಢಪಟ್ಟ ಆಟಗಾರರು ಸುದೀಪ್ ಚಟರ್ಜಿ ಅನುಸ್ಟಪ್ ಮಜುಂದಾರ್ ಕಾಜಿ ಜುನೈದ್ ಸೈಫಿ ಗೀತ್…

    Loading

  • Archive

    RRR ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಇತಿಹಾಸ ಸೃಷ್ಟಿಸಿದ RRR  ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ‍್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…

  • ವಿಸ್ಮಯ ಜಗತ್ತು

    ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…

    ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ..  ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್  ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…