ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಮರಶಿಲ್ಪಿ ರವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ.
ಕರ್ನಾಟಕದ ತುಮಕೂರಿನಿಂದ 9 ಕಿ.ಮೀ ದೂರದಲ್ಲಿರುವ ಕೈದಾಳೆಯಲ್ಲಿ ಜಕಣಾಚಾರಿಯವರು ಜನಿಸಿದರು. ಕೆಲವು ದಾಖಲೆಗಳ ಪ್ರಕಾರ ಈ ಊರಿನ ಮೂಲ ಹೆಸರು ಕ್ರಿದಾಪುರ. ಅವರ ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ನೃಪ ಹಯರು ಆ ಪ್ರದೇಶವನ್ನು ಆಳುತ್ತಿರುವಾಗ ಪ್ರಾರಂಭಿಸಿದರು.
ಅಮರಶಿಲ್ಪಿ ಜಕಣಾಚಾರಿಯವರು ತಮ್ಮ ಮದುವೆಯಾದ ನಂತರವೇ ಅವರು ಕೆಲಸ ಹುಡುಕುತ್ತಾ ಮನೆಬಿಟ್ಟು ಹೊರಟರು. ದೂರದ ಪ್ರಯಾಣ ಮಾಡಿದರು ಹಾಗೂ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದರು ಹಾಗೂ ತಮ್ಮ ಹೆಂಡತಿಯನ್ನು ಸಹ ತಮ್ಮ ಕೆಲಸದಲ್ಲಿ ಮರೆತರು.
ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು.
ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆ ಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು.
ಅಮರಶಿಲ್ಪಿ ಜಕಣಾಚಾರಿಯವರು ತಮ್ಮ ಹುಟ್ಟೂರಾದ ಕ್ರಿದಾಪುರದಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಿಸುವ ಆಶೆ ಹೊಂದಿದರು. ಇದು ಮುಗಿದ ನಂತರ, ಅವರ ಬಲಗೈಯನ್ನು ದೇವರು ಕರುಣಿಸಿದನೆಂದು ದಂತಕಥೆ ಹೇಳುತ್ತದೆ.
ಕರ್ನಾಟಕ ಸರ್ಕಾರವು ಪ್ರತಿವರ್ಷ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ.ಅಮರಶಿಲ್ಪಿ ಜಕಣಾಚಾರಿ ಯವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ.ಅಮರಶಿಲ್ಪಿ ಜಕಣಾಚಾರಿ ರವರ ಸ್ಮರಣ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಆಚರಿಸಿಲಾಗುವುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ.
ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ ಪಪ್ಪಾಯ ತಿನ್ನುವವರು ಪಪ್ಪಾಯ ತಿನ್ನದಿರುವವರಿಗಿಂತ ಆರೋಗ್ಯವಾಗಿರುತ್ತಾರೆ. ಖಾಯಿಲೆಗೆ ತುತ್ತಾಗುವುದು ಕಡಿಮೆ. ಹಾಗೆ ಕಚೇರಿಯಲ್ಲಿ ಉತ್ತಮ ಕೆಲಸ ಮಾಡಲು ಉತ್ಸಾಹಿತರಾಗಿರುತ್ತಾರೆ. ಪಪ್ಪಾಯಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ದೇಹಕ್ಕೆ ಕಡಿಮೆಯಾಗಿರುವ ನೀರಿನ ಅಂಶವನ್ನು ಇದು ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಪಪ್ಪಾಯಿಯಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಶಕ್ತಿಯ ಒಂದು…
ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು.
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು ಕೂಡ ಕಡಿಮೆಯಾಗಿದ್ದರೆ. ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ.
ಯಾರ್ಯಾರಿಗೋ ಏನೋ ಆಸೆಯಾದರೆ, ಈ ವೃದ್ಧನದ್ದು ಬಲು ವಿಚಿತ್ರ ಹಾಗೂ ವಿಲಕ್ಷಣ ಆಸೆ…! ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಮಲೈಸ್ವಾಮಿ ಎಂಬ 70 ವರ್ಷದ ಈ ವೃದ್ಧನಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ 24 ವರ್ಷದ ಪಿ.ವಿ. ಸಿಂಧುವನ್ನು ಮದುವೆಯಾಗಬೇಕಂತೆ..! ಒಂದು ವೇಳೆ ಸಿಂಧು ಮದುವೆಯಾಗಲು ಒಪ್ಪದಿದ್ದರೆ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಮದುವೆಯಾಗುತ್ತಾನಂತೆ. ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆಂದು ಜಿಲ್ಲಾಧಿಕಾರಿಗಳು ನಡೆಸುವ ವಾರದ ಜನತಾದರ್ಶನದಲ್ಲಿ ಸಿಂಧು ಫೋಟೋ ಸಹಿತ ಪತ್ರವೊಂದನ್ನು ಜಿಲ್ಲಾಧಿಕಾರಿಗಳ ಕೈಗಿತ್ತು, ನನ್ನನ್ನು ಮದುವೆಯಾಗುವಂತೆ ಸಿಂಧು ಅವರಿಗೆ ಸೂಚಿಸಬೇಕೆಂದು…
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…