ರೆಸಿಪಿ

ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

359

ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

ಸಾಮಗ್ರಿಗಳು

ಚಿಕನ್‌ – 1 k.g

ಎಣ್ಣೆ – 1 ಕಪ್‌‌‌

ಕೊತ್ತಂಬರಿ ಸೊಪ್ಪು – 2 ಕಟ್ಟು

ಈರುಳ್ಳಿ – 4

ಏಲಕ್ಕಿ – 6

ಬಿರ್ಯಾನಿ ಎಲೆ – 6

ಲವಂಗ – 6

ಗೋಡಂಬಿ – 10

ತೆಂಗಿನ ಕಾಯಿ ಪೇಸ್ಟ್‌ – 1ಕಪ್

ಹಸಿಮೆಣಸಿನ ಕಾಯಿ – 5

ಮೊಸರು – 1/2 ಕಪ್‌‌‌

ಸೋಂಪು – 1 ಸ್ಪೂನ್

ಗಸಗಸೆ – 2 ಸ್ಪೂನ್.

ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ – 2 ಸ್ಪೂನ್.

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – 1 ಸ್ಪೂನ್.

ಮಾಡುವ ವಿಧಾನ

*ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕೋಳಿ ಮಾಂಸವನ್ನು 15 ನಿಮಿಷ ಉರಿದು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

*ಜಾರ್‌ಗೆ ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ತುರಿ, ಗೋಡಂಬಿ, ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಏಲಕ್ಕಿ, ಲವಂಗ , ಸೋಂಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

*ನಂತರ ರುಬ್ಬಿಕೊಂಡ ತೆಂಗಿನಕಾಯಿ, ಗೋಡಂಬಿ ಮಿಶ್ರಣ, ಮೊಸರು ಹಾಕಿ 5 ನಿಮಿಷ ಬೇಯಿಸಿ.

*ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಉರಿದಿಟ್ಟುಕೊಂಡ ಚಿಕನ್‌ , ಅರಿಶಿನ, ಹಾಕಿ ಬೆರೆಸಿ 15 ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ಮೈಸೂರು ಚಿಲ್ಲಿ ಚಿಕನ್ ರೆಡಿ.

ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು. ಇನ್ನು ಬಹಳಷ್ಟು ಮಂದಿ ಚಿಕನ್‌ ಅನ್ನು ಫ್ರೈ ಮಾಡುವುದಿಲ್ಲ. ಹೀಗೆ ಬಳಸಿದರೆ ಹಸಿ ವಾಸನೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಚಿಕನ್, ಮಟನ್ ಡಿಶ್‌ ಮಾಡುವ ಮುನ್ನ ಎಣ್ಣೆಯಲ್ಲಿ 15 ನಿಮಿಷ ಉರಿದುಕೊಂಡರೆ ಮತ್ತಷ್ಟು ರುಚಿ ಹೆಚ್ಚುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಹಸುವಿನ ಹಾಲಿಗಿಂತ ಕತ್ತೆ ಹಾಲೇ ಉತ್ತಮನಾ..?ತಿಳಿಯಲು ಈ ಲೇಖನ ಓದಿ…

    ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್‌, ಚಿಕ್ಕೋರ್‌ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(4 ಫೆಬ್ರವರಿ, 2019) ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಕಲ್ಪನೆಗಳ ಹಿಂದೆ ಓಡಬೇಡಿ ಹಾಗೂ…

  • ಆಧ್ಯಾತ್ಮ

    ಗರುಡ ಪುರಾಣದ ಪ್ರಕಾರ ಈ ಮೂರನ್ನು ಬಿಟ್ಟರೆ???ನಿಮ್ಮ ಜೀವನ ಪಕ್ಕಾ ಸುಖಮಯ….

    ನಮ್ಮ ಈ ಜೀವನದಲ್ಲಿ ಸುಖವಾಗಿರಬೇಕೆಂಬುದು ಎಲ್ಲರ ಮಹದಾಸೆ. ತಾವು ಹಾಯಾಗಿ ಜೀವನ ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ದಿನನಿತ್ಯ ಬೆಳಗ್ಗೆ ಎದ್ದ ಕೂಡಲೆ ನಮ್ಮ ಜೀವನ ಶುರುವಾಗುತ್ತದೆ, ಎದ್ದೆನೋ ಬಿದ್ದೆನೋ ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ. ಇನ್ನೇನೋ ಪಡೆಯಬೇಕೆಂಬ ಹೋರಾಟ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ತಯಾರಿಸುವುದು ಹೇಗೆ.?ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

    ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ ಕೆಮ್ಮು. ಈ ಕೆಮ್ಮನ್ನು ಎರಡೇ ದಿನದಲ್ಲಿ  ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ನೀವೆ ಸುಲಭವಾಗಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಿಸಬಹುದು. ಕೆಮ್ಮು ಮತ್ತು ಸಾವು ಯಾರನ್ನೂ ಕೇಳಿ ಬರುವುದಿಲ್ಲ ವಂತೆ. ಯಾವುದೋ ಮುಖ್ಯ ಕಾರ್ಯದಲ್ಲಿದ್ದಾಗ ಕೆಮ್ಮು ಕಾಡಿದರೆ ಆಗ ಎದು ರಾಗುವ ತಾಪತ್ರಯ ಒಂದೆರ ಡಲ್ಲ. ಅದರಲ್ಲೂ ಕೆಮ್ಮು ಸತತವಾದರೆ ಮುಖ್ಯ…

  • ಆಧ್ಯಾತ್ಮ

    ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗುತ್ತೆ ಗೊತ್ತಾ ನಿಮ್ಗೆ?

    ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.

  • ಸಿನಿಮಾ

    ಒಂದು ರಾತ್ರಿ ಅಡ್ಜೆಸ್ಟ್ ಮಾಡ್ಕೋ ಎಂದ ನಿರ್ಮಾಪಕನಿಗೆ ಈ ನಟಿ ಕೊಟ್ಟ ಉತ್ತರ ಏನು ಗೊತ್ತಾ..?

    ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು. ನಿರ್ಮಾಪಕನ ಮಾತನ್ನು…