ಆರೋಗ್ಯ

ನಿಂಬೆಹಣ್ಣಿನ ಈ ಉಪಯೋಗಗಳನ್ನು ಕೇಳಿದ್ರೆ, ನೀವ್ ಉಪಯೋಗಿಸದೆ ಸುಮ್ನೆ ಇರಲ್ಲ..!

2946

ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು.ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ.

ಆರೋಗ್ಯ ವೃದ್ಧಿಯಲ್ಲಿ ನಿಂಬೆ ಹಣ್ಣು ಅತಿ ಪ್ರಮುಖ ಪಾತ್ರ ವಹಿಸುತ್ತದೆ:-

  • ಕೂದಲಿನ ಬುಡಕ್ಕೆ ನಿಂಬೆರಸವನ್ನು ತಿಕ್ಕಿ ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಿದರೆ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
  • ಜ್ವರದಿಂದ ಬಳಲಿಕೆ ಉಂಟಾದಾಗ ನಿಂಬೆರಸವನ್ನು ಸೇವಿಸಿದರೆ ಬಳಲಿಕೆ ಕಡಿಮೆಯಾಗುತ್ತದೆ.
  • ಸ್ವಲ್ಪ ಕಡಲೆಹಿಟ್ಟಿಗೆ  ಜೇನುತ್ತುಪ್ಪ ಮತ್ತು ನಿಂಬೆರಸ ಸೇರಿಸಿ ಕಲೆಸಿ ಮುಖಕ್ಕೆ ಲೇಪಿಸಿ 1 ಘಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು ಇದರ ಉಪಯೋಗದಿಂದ ಮುಖದ ಜಿಡ್ಡು ,ಕೊಳೆ ಹೋಗಿ ಮುಖದ ಕಾಂತಿ ಹೆಚ್ಚುತ್ತದೆ.

ದೇಹದ ತೂಕ ಕಡಿಮೆ ಮಾಡುವಲ್ಲಿ ನಿಂಬೆಹಣ್ಣು ಅತ್ಯಂತ ಉಪಯೋಗ :-

*ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ನಿಂಬೆರಸ ಬೆರೆಸಿ ಕುಡಿಯುತ್ತಾ ಬಂದರೆ ಶೀಘ್ರವಾಗಿ ಶರೀರದ ತೂಕ ಕಡಿಮೆಯಾಗುತ್ತದೆ. ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

*ಕಬ್ಬಿನ ಹಾಲಿಗೆ ನಿಂಬೆರಸ ಮತ್ತು ಎಳನೀರು ಸೇರಿಸಿ ಕುಡಿದರೆ ಮೂತ್ರಕಟ್ಟು ನಿವಾರಣೆಯಾಗುತ್ತದೆ.

*ದೇಹದಿಂದ ಬರುವ ದುರ್ಗಂದವನ್ನು ನಿವಾರಿಸಲು ಕೆಲವು ದಿನ ಸ್ನಾನಕ್ಕೆ ಅರ್ಧಗಂಟೆಯ ಮೊದಲು ನಿಂಬೆರಸವನ್ನು ತೆಂಗಿನೆಎಣ್ಣೆಯಲ್ಲಿ    ಬೇರಸಿ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು.

* ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ.ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ.

*ವಿಟಮಿನ್ ಸಿ ಹೇರಳವಾಗಿರುವುದರಿಂದ ದೇಹದ ಶಕ್ತಿ ಹೆಚ್ಚಿಸುತ್ತದೆ. ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

*ನಿಂಬೆಹಣ್ಣಿನ ರಸವನ್ನು ಮೊಣಕೈ ಕಪ್ಪಾಗಿರುವಲ್ಲಿ ತಿಕ್ಕಿದರೆ ಕಪ್ಪು ಹೊಗುತ್ತದೆ.

*ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ.

*ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ.

*ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

*ನಿಂಬೆರಸ 1 ಚಮಚ, ಬೆಟ್ಟದ ನಿಲ್ಲಿಕಾಯಿರಸ 1ಚಮಚ ಇವೆರಡನ್ನು ಸೇರಿಸಿ ಪ್ರತಿ ದಿನ ಮಲಗುವ ಮುನ್ನ ತಲೆಯ ಬುಡಕ್ಕೆ ತಿಕ್ಕಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ನಿಲ್ಲುತ್ತದೆ. ಕೂದಲಿಗೆ ಹೊಳಪು ಬರುತ್ತದೆ.

*ನಿಂಬೆಹಣ್ಣಿನ ಬೀಜವನ್ನು ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಬಕ್ಕತಲೆ ಸಮಸ್ಯೆ ನಿವಾರಣೆಯಾಗುತ್ತದೆ.

*ಕೂದಲು ಸೊಂಪಾಗಿ ಬೆಳೆಯಲು ತೆಂಗಿನ ಎಣ್ಣೆಗೆ ನಿಂಬೆರಸವನ್ನು ಸೇರಿಸಿ  ಕುದಿಸಿ ನೀರಿನಂಶವೆಲ್ಲ ಇಂಗಿದ ನಂತರ ಪ್ರತಿದಿನ ಉಪಯೋಗಿಸಬೇಕು.

*ಇನ್ನು ಚರ್ಮ ಸಮಸ್ಯೆಗಳಿಗೂ ಕೂಡ ನಿಂಬೆಹಣ್ಣನ್ನು ಮನೆ ಮದ್ದಾಗಿ ಉಪಯೋಗಿಸಬಹುದು.

*ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ.

*ನಿಂಬೆಹಣ್ಣಿನ ಸಿಪ್ಪೆಯನ್ನು ಹಣೆಗೆ ತಿಕ್ಕುತಿದ್ದರೆ ತಲೆನೋವು ಕಡಿಮೆಯಾಗುತ್ತದೆ.

*ಜೇನುತುಪ್ಪವನ್ನು 1 ಚಮಚ ನಿಂಬೆರಸದೊಂದಿಗೆ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

*ದೂರ ಪ್ರಯಾಣದ ಸಂದರ್ಭದಲ್ಲಿ ವಾಕರಿಕೆ ಮತ್ತು ತಲೆಸುತ್ತು ಸಮಸ್ಯೆಗೆ ನಿಂಬೆಹಣ್ಣನ್ನು ಮೂಸುತ್ತಿರಬೇಕು.

*ಮುಖದಲ್ಲಿ ಮೊಡವೆ, ಕಪ್ಪು ಕಲೆಗಳು ಹೋಗಲಾಡಿಸಲು ತುಳಸಿ ಎಲೆಯ ರಸಕ್ಕೆ ನಿಂಬೆಯ ರಸವನ್ನು ಬೆರಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ನೀರಿನಲ್ಲಿ ತೊಳೆದುಕೊಳ್ಳಬೇಕು.

*ನಿಂಬೆಹಣ್ಣು ದೇಹದಲ್ಲಿನ ಅನುಪಯುಕ್ತ ಅಂಶಗಳನ್ನು ಹೊರ ಹಾಕಲು ಹೆಚ್ಚು ಪ್ರಯೋಜನಕಾರಿ.

*ಅತಿಯಾದ ಉಷ್ಣಾಂಶದಿಂದ ಮೂಗಿನಲ್ಲಿ ಉಟಾಗುವ ರಕ್ತ ಸ್ರಾವವನ್ನು ತಡೆಯಲು ನಿಂಬೆ ಹಣ್ಣು ಸಹಯಕಾರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ…ಈ ಶುಭದಿನದಂದು ನಿಮ್ಮ ರಾಶಿಯ ಶುಭಫಲಗಳು ಹೇಗಿವೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಂಡರೂ ಸರ್ರನೆ ಕೆಲವು ಬಗೆಯ ಕಿರಿಕಿರಿಗಳು ಎದುರಾಗುವವು. ಸಾಯಿ ಮಂದಿರಕ್ಕೋ ಅಥವಾ ರಾಘವೇಂದ್ರ ಸ್ವಾಮಿಗಳ ಮಠಕ್ಕೋ ಭೇಟಿ ನೀಡಿ ಸಾಂತ್ವನ ಮಾಡಿಕೊಳ್ಳಿ…ನಿಮ್ಮ ಸಮಸ್ಯೆ.ಏನೇ .ಇರಲಿ…

  • baby
    inspirational, Motivation

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ
    ನಿಮ್ಮ ಮಗಳು ಅಥವಾ ಮಗ ಚಿಕ್ಕಪ್ಪ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲಿ ಯಾರ ಮಡಿಲಲ್ಲೂ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸಿ

  • ಸುದ್ದಿ

    ತನ್ನ ಬಾಡಿಗಾರ್ಡ್ ಆಗಿದ್ದವಳನ್ನೇ ಮದ್ವೆ ಆಗಿ ರಾಣಿಯನ್ನಾಗಿ ಮಾಡಿದ ರಾಜ.!?

    ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. 66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು,…

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ಲಭ್ಯವಾಗುವವು. ಆ ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.   .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಆರೋಗ್ಯ

    ಈ ಕಾರಣಗಳಿಂದ ಮೈಗ್ರೇನ್‌ ತಲೆನೋವು ಬರುತ್ತದೆ..!ಇದರ ನಿವಾರಣೆ ಹೇಗೆ?ತಿಳಿಯಲು ಈ ಲೇಖನ ಓದಿ…

    ಮೈಗ್ರೇನ್‌ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.